Home namma chikmagalur chikamagalur ಬೋರ್‌ವೆಲ್ ಲಾರಿಗಳ ವಿರುದ್ಧ ಗಣಿ-ಭೂವಿಜ್ಞಾನ ಇಲಾಖೆ ದಿಢೀರ್ ದಾಳಿ
chikamagalurHomeLatest Newsnamma chikmagalur

ಬೋರ್‌ವೆಲ್ ಲಾರಿಗಳ ವಿರುದ್ಧ ಗಣಿ-ಭೂವಿಜ್ಞಾನ ಇಲಾಖೆ ದಿಢೀರ್ ದಾಳಿ

Share
Share

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಬೋರ್‌ವೆಲ್ ಲಾರಿಗಳ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.

ನಿಯಮಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿದ್ದ ಒಟ್ಟು 7 ಲಾರಿಗಳನ್ನು ಪತ್ತೆಹಚ್ಚಿರುವ ಅಧಿಕಾರಿಗಳು, ಪ್ರತಿಯೊಂದು ಲಾರಿಗೆ ತಲಾ 50 ಸಾವಿರ ರೂಪಾಯಿಗಳಂತೆ ಭಾರೀ ಮೊತ್ತದ ದಂಡವನ್ನು ವಿಧಿಸಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಕಠಿಣ ಕ್ರಮವು ಜಿಲ್ಲೆಯಲ್ಲಿ ಅನಧಿಕೃತವಾಗಿ ಕೊರೆಯಲಾಗುತ್ತಿದ್ದ ಬೋರ್‌ವೆಲ್ ದಂಧೆಗೆ ದೊಡ್ಡ ಪೆಟ್ಟು ನೀಡಿದಂತಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ನಂದಿನಿ ಅವರು, ಲಾರಿ ಮಾಲೀಕರಿಗೆ ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಕೇವಲ ಒಂದು ವಾರದ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಅವಧಿಯೊಳಗೆ ಕಡ್ಡಾಯವಾಗಿ ಸರ್ಕಾರದ ‘7A’ ಅನುಮತಿಯನ್ನು ಪಡೆದುಕೊಂಡು ಕಾರ್ಯಾಚರಣೆ ಮುಂದುವರಿಸಬೇಕು ಎಂದು ಖಡಕ್ ಸೂಚನೆ ನೀಡಲಾಗಿದೆ. ಒಂದು ವೇಳೆ ನಿಗದಿತ ಸಮಯದೊಳಗೆ ಅಧಿಕೃತ ಪರವಾನಗಿ ಪಡೆಯಲು ವಿಫಲವಾದಲ್ಲಿ ಅಂತಹ ಲಾರಿಗಳನ್ನು ಸರ್ಕಾರಿ ವಶಕ್ಕೆ ಪಡೆದು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಜಿಲ್ಲೆಯಲ್ಲಿ ಇನ್ನು ಮುಂದೆ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಈ ಮೂಲಕ ರವಾನಿಸಲಾಗಿದೆ.

Mines and Geology Department launches surprise raid against borewell trucks

Share

Leave a comment

Leave a Reply

Your email address will not be published. Required fields are marked *

Don't Miss

ದಲಿತ ಸಂಘಟನೆಗಳ ಒಕ್ಕೂಟದ ವಿಭಿನ್ನ ಹೋರಾಟ

ಚಿಕ್ಕಮಗಳೂರು : ನಗರ ಸಮೀಪದ ಗೌಡನಹಳ್ಳಿ ವಾಸಿ ಮಂಜುನಾಥ್ ಯಾನೆ ಹೇಮಂತ್ ಎಂಬುವವರಿಗೆ ಸೇರಿದ ಜೆ.ಸಿ.ಬಿ ಯನ್ನು ಹೆಚ್.ಡಿ.ಎಫ್.ಸಿ ಬ್ಯಾಂಕ್ ಸೀಜ್ ಮಾಡಿ ಅಕ್ರಮ ಮಾರಾಟ ಮಾಡಿದ್ದು, ಕಳೆದ ೧ ತಿಂಗಳಿನಿಂದ...

ಅರವಿಂದ್ ಕೇಜ್ರವಾಲ್ ದೋಷಮುಕ್ತ ಪಕ್ಷಕ್ಕೆ ಸಂದ ಜಯ

ಚಿಕ್ಕಮಗಳೂರು : ಕೇಂದ್ರ ಸರ್ಕಾರದ ಪಿತೂರಿಯಿಂದ ದೆಹಲಿಯ ಅಬಕಾರಿ ಹಗರಣದಲ್ಲಿ ಸಿಲುಕಿಸಲಾಗಿದ್ದ ಅರವಿಂದ್ ಕೇಜ್ರವಾಲ್ ಮತ್ತು ಇತರ ೨೩ ನಾಯಕರನ್ನು ದೆಹಲಿಯ ನ್ಯಾಯಾಲಯವು ಕೋರ್ಟ್ ದೋಷಮುಕ್ತಗೊಳಿಸಿರುವುದು ಪಕ್ಷಕ್ಕೆ ಸಂದ ಜಯವಾಗಿದೆ ಎಂದು...

Related Articles

ಇಂದು ಪ್ರಾಣೇಶ್ ವಿಧಾನ ಪರಿಷತ್ ಭವಿಷ್ಯ ನಿರ್ಧಾರವೇ….?

ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ವಿರುದ್ಧ...

ಎಐಟಿಯುಸಿ ಕಾರ್ಯಕರ್ತೆಯರಿಗೆ ಸೀರೆ ಬದಲು, ಗೌರವಧನಕ್ಕೆ ಮನವಿ

ಚಿಕ್ಕಮಗಳೂರು:  ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸೀ ರೆ ನೀಡುವ ಬದಲು, ೧೫೦೦೦ ರೂ.ಗಳು ಗೌರವಧನ...

ಬಾಕಿ ಅನುದಾನ ಬಿಡುಗಡೆಗೆ ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ ಆಗ್ರಹ

ಚಿಕ್ಕಮಗಳೂರು: ಇಲ್ಲಿನ ಪ್ರೊಟೆಸ್ಟಂಟ್ ಕ್ರೈಸ್ತರ ಅಭಿವೃದ್ಧಿಗೆ ಬಾಕಿ ಉಳಿದಿರುವ ೧೬೫ ಕೋಟಿ ರೂಗಳನ್ನು ಈ ಬಜೆಟ್‌ನಲ್ಲಿ...

ರೈತರ ಮೇಲಿನ ಪ್ರಕರಣ ಹಿಂದಕ್ಕೆ ಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ

ಚಿಕ್ಕಮಗಳೂರು: ತುಂಗಭದ್ರಾ ಎಡದಂಡೆ ಭಾಗದ ರೈತರಿಗೆ ನೀರು ಹರಿಸಬೇಕು ಎಂದು ಹೋರಾಟ ನಡೆಸಿದ ರೈತ ಮುಖಂಡರ...