ಚಿಕ್ಕಮಗಳೂರು :
ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಬೂಟಾಟಿಕೆ ರಾಜಕಾರಣ ಮಾಡುವುದನ್ನು ನಿಲ್ಲಿಸಿ ಕೂಡಲೇ ಕಾಫಿ ಬೆಳೆಗಾರರು ನೆರವಿಗೆ ಧಾವಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಚ್ ಎಚ್ ದೇವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಒಂದೆಡೆ ಕಾಫಿ ಬೆಳೆಗಾರರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳೋದು ಮತ್ತೊಂದೆಡೆ ಬ್ಯಾಂಕ್ ಅಧಿಕಾರಿಗಳ ಜೊತೆ ಸಭೆ ನಡೆಸುವ ಡ್ರಾಮ ಬಿಡಬೇಕು ಎಂದು ಕೋಟಾ ಶ್ರೀನಿವಾಸ ಪೂಜಾರಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಕೇಂದ್ರ ಸರ್ಕಾರದ ಹಣಕಾಸು ಸಚಿವರನ್ನು ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ಕಾಫಿ ಬೆಳೆಗಾರರಿಗೆ ಮರಣ ಶಾಸನ ಆಗಿರುವ ಸರ್ಫೇಸಿ ಕಾಯ್ದೆ ರದ್ದುಗೊಳಿಸುವಂತೆ ಮನವಿ ಮಾಡಿ ಎಂದಿರುವ ದೇವರಾಜ್ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದಾಗಿ ಕಾಫಿ ಬೆಳೆ ಸಂಪೂರ್ಣ ನಾಶವಾಗಿದ್ದು ಬೆಳೆಗಾರರ ಸರಣಿ ಆತ್ಮಹತ್ಯೆ ಸಂಭವವಿದೆ. ಕೂಡಲೇ ಕೇಂದ್ರ ಸರ್ಕಾರ ನೆರವಿಗೆ ಧಾವಿಸಿ ವಿದರ್ಭ ಮಾದರಿಯ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಅವರು ಒತ್ತಾಯಿಸಿದರು.
ಸಂಸದ ಕೋಟಾ ಶ್ರೀನಿವಾಸ ಪೂಜಾರಿಗೆ ಅನುಭವದ ಕೊರತೆ ಇದೆ ಬ್ಯಾಂಕರ್ ಗಳ ಸಭೆ ಕೇವಲ ಕಣ್ಣೊರೆಸುವ ತಂತ್ರವಾಗಿದ್ದು ಇದರಿಂದ ಯಾವುದೇ ಪ್ರಯೋಜನ ಇಲ್ಲ ಕಾಫಿ ಬೆಳೆಗಾರರಿಗೆ ಟೋಪಿ ಹಾಕುವುದನ್ನು ಮೊದಲು ನಿಲ್ಲಿಸಿ ಶೋಭಾ ಕರಂದ್ಲಾಜೆ ಧಾಟಿಯಲ್ಲಿ ನೀವು ಹೋಗಬೇಡಿ ಎಂದು ಎಚ್ಚರಿಸಿರುವ ಎಚ್ ಎಚ್ ದೇವರಾಜ್ ಮುಂದಿನ ದಿನಗಳಲ್ಲಿ ಪೂಜಾರಿ ಹೋದಲೆಲ್ಲಾ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಎಂಎಲ್.ಸಿ ಸಿ.ಟಿ ರವಿ ಬಗ್ಗೆಯೂ ಟೀಕಾಸ್ತ್ರ ಪ್ರಯೋಗಿಸಿರುವ ದೇವರಾಜ್ ರಾಜ್ಯ ಸರ್ಕಾರ ಅಭಿವೃದ್ಧಿ ಮಾಡುತ್ತಿದೆ ಎಂಬುದು ರವಿಗೆ ಇವಾಗ ಜ್ಞಾನೋದಯ ಆಗಿದೆ. ಅಭಿವೃದ್ಧಿಗೆ ಬೆಂಬಲ ಇದೆ ಎನ್ನುವ ಸಿ.ಟಿ ರವಿ ಬೆಂಗಳೂರಿನಲ್ಲಿ ಹೋಗಿ ರಾಜ್ಯ ಸರ್ಕಾರವನ್ನು ಟೀಕಿಸಿ ಚಿಕ್ಕಮಗಳೂರಲ್ಲಿ ಬಂದು ಅಭಿವೃದ್ಧಿ ಗೆ ಬೆಂಬಲ ಅನ್ನೋದನ್ನು ಬಿಡಬೇಕು ಇದರಿಂದ ರವಿ ಹತಾಶೆ ಎದ್ದು ಕಾಣುತ್ತದೆ. ನಮಗೆ ರವಿ ಸಹಕಾರ ಅಗತ್ಯವಿಲ್ಲ ಎಂದಿರುವ ದೇವರಾಜ್
ಮನಃ ಪರಿವರ್ತನೆ ಆಗಿದ್ದರೆ ಕಾಂಗ್ರೆಸ್ ಸರ್ಕಾರಕ್ಕೆ ಸಹಕಾರ ಇದೆ ಎಂದು ಹೇಳಲಿ ಎಂದಿದ್ದಾರೆ
Leave a comment