ಅಪ್ಪ ರಾಮಚಂದ್ರ ರಾವ್ ಗೆ ಚಿನ್ನವೀಡು ಕಾಟ,ಮಲ ಮಗಳು ರನ್ಯಾ ರಾವ್ ಗೆ ಚಿನ್ನ ಕಳವಿನ ವ್ಯಾಮೋಹ .ಅಪ್ಪ ಕಡ್ಡಾಯ ರಜೆಯ ಮೇಲೆ ಮನೆ ಸೇರಿ ಗೃಹ ಮಂತ್ರಿ ಪರಮೇಶ್ವರ್ ಕೃಪೆಗಾಗಿ ದಾರಿ ಕಾಯುತ್ತಿದ್ದಾರೆ. ರನ್ಯಾರಾವ್ ಅಲಿಯಾಸ್ ಹರ್ಷವರ್ಧಿನಿ ಚಿನ್ನ ಕದ್ದು ಕಳೆದ ಐದಾರು ತಿಂಗಳಿಂದ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾಳೆ.
ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ವರಿಷ್ಠಧಿಕಾರಿಯಾಗಿದ್ದ ರಾಮಚಂದ್ರ ರಾವ್ ಗೆ ಹಗ್ಗ ಕಡಿಯುವ ಚಾಳಿ ಇತ್ತು ಈ ಬಗ್ಗೆ ಪತ್ರಿಕೆಯಲ್ಲಿ ಸುದ್ದಿ ಬಂದಿತ್ತು.ಇದೇ ಚಾಳಿ ಬೆಳೆಸಿ ಕೊಂಡು ರೋಹಿಣಿ ಎಂಬ ಮಹಿಳೆಯ ಜೊತೆಗೆ ಹಲವಾರು ಹೆಸರುಗಳು ಇವೆ.ಮದುವೆಯಾಗಿದ್ದ ರೋಹಿಣಿಗೆ ವಿಚ್ಛೇದನ ಕೊಡಿಸಿ ಮಡಗಿ ಕೊಂಡು ಕೋಟ್ಯಂತರ ಆಸ್ತಿ ಮಾಡಿಕೊಟ್ಟಿರುವುದು ಗುಟ್ಟೇನಲ್ಲಾ .
ಇಷ್ಟಾದರೂ ನಿವೃತ್ತಿ ಇನ್ನೂ ಕೆಲ ದಿನಗಳಿರುವಾಗ ಕಛೇರಿಯಲ್ಲಿ ಕಿಸಿಂಗ್,ಕಿಸಿಂಗ್ ಎಂದು ದೊಡ್ಡ ಸುದ್ದಿಯಾದ ನಂತರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳುಹಿಸಿದೆ.
ಮಲ ತಂದೆ ಮತ್ತು ತಾಯಿ ಯ ವ್ಯಾಮೋಹ ರನ್ಯಾ ರಾವ್ ಮೂರ್ನಾಲ್ಕು ಚಲನಚಿತ್ರದಲ್ಲಿ ನಟಿಸಿ ಚಿನ್ನ ಕಳವು ದಂಧೆಯಲ್ಲಿ ಪಳಗುತ್ತಿರುವಾಗ ಡಿ.ಆರ್.ಐ. ನವರು ವಿಮಾನ ನಿಲ್ದಾಣದಲ್ಲಿ ಬಂಧಿಸಿ ಜೈಲಿನ ಹಾದಿ ತೋರಿಸಿದ್ದಾರೆ. ಈಗ ಡಿ.ಆರ್.ಐ ಮತ್ತು ಸಿ.ಬಿ.ಐ ನವರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ರನ್ಯಾ ರಾವ್ ಒಂದು ವರ್ಷದಲ್ಲಿ 127 ಕೆಜಿಯಷ್ಟು ಚಿನ್ನ ಸಾಗಣೆ ಮಾಡಿರುವುದನ್ನು ಖಚಿತ ಪಡಿಸಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ ಇದರ ಬೆಲೆ 102 ಕೋಟಿಯಷ್ಟು ಎಂದು ಹೇಳಲಾಗಿದೆ.
ವಿದೇಶದಿಂದ ಅದರಲ್ಲೂ ದುಬೈನಿಂದ 14 ಕೆಜಿಯಷ್ಟು ಚಿನ್ನ ತರುವಾಗ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಆಗ ರನ್ಯಾ ರಾವ್ ಮನೆಯ ಮೇಲೆ ದಾಳಿ ನಡೆಸಿದಾಗ 2.06 ಕೋಟಿಯ ಚಿನ್ನ ಮತ್ತು 2.67 ಕೋಟಿ ನಗದು ಪತ್ತೆಯಾಗಿತ್ತು.ಇದರ ಜೊತೆಗೆ 34 ಕೋಟಿಯಷ್ಟು ಆಸ್ತಿ ಮುಟ್ಟುಗೋಲು ಹಾಕಿಕೊಂಡಿತ್ತು.ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
Kissing- kissing Ramachandra -smuggling- smuggling Ranya Rao
Leave a comment