Home Latest News ಶಾಸಕಿ ನಯನ ಕಮಲಮ್ಮರ ಕೇಸರಿ ಶಾಲು, ಕೆರಳಿ ನಿಂತ ಪ್ರಗತಿಪರರು ಕೈ,ಕೈ ಮುಗಿಯುತ್ತಿರುವ ಕಾಂಗ್ರೆಸ್?
Latest NewschikamagalurHomenamma chikmagalur

ಶಾಸಕಿ ನಯನ ಕಮಲಮ್ಮರ ಕೇಸರಿ ಶಾಲು, ಕೆರಳಿ ನಿಂತ ಪ್ರಗತಿಪರರು ಕೈ,ಕೈ ಮುಗಿಯುತ್ತಿರುವ ಕಾಂಗ್ರೆಸ್?

Share
Share

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಶಾಸಕಿ ನಯನಮೋಟಮ್ಮ ಅಲಿಯಾಸ್ ನಯನ ಕಮಲಮ್ಮರ ಕೇಸರಿ ಶಾಲು ಪ್ರಗತಿಪರರನ್ನು ಕೆರಳಿಸುವುದರ ಜೊತೆಗೆ ಗಾಂಧಿ ಪ್ರತಿಮೆ ಮುಂದೆ ಪಶ್ಚಾತ್ತಾಪ ಪಟ್ಟುಕೊಳ್ಳಲು ನಾಳೆ ತಯಾರಾಗಿದ್ದಾರೆ.ಸದಾ ಕೋಮುವಾದವನ್ನೆ ಉಸಿರಾಡುವ ಹಲವಾರು ಜಿಲ್ಲೆಗಳಿಗೆ ಕಾಲಿಡದಂತೆ ನಿಷೇದ ಇರುವ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಂಡಿರುವುದು ಪ್ರಗತಿಪರ ಮನಸ್ಸುಗಳನ್ನು ಘಾಸಿಗೊಳಿಸಿದೆ.

ನಯನಗೆ ಇದು ಕ್ಷುಲ್ಲಕ ವಿಷಯ ಇರಬಹುದು ಆದರೆ ಪ್ರಗತಿಪರ ವಿಚಾರಧಾರೆ ಜ್ಯಾತ್ಯಾತೀತ ತತ್ವಕ್ಕೆ ಬೆಂಕಿ ಇಟ್ಟಂತೆ ಆಗಿದೆ.ಇದರ ಜೊತೆಗೆ ನಯನಮೋಟಮ್ಮ ಗೊತ್ತಿಲ್ಲದೆ ಆಗಿದೆ ಇಲ್ಲಿಗೆ ಬಿಟ್ಟು ಬಿಡಿ ಮುಂದೆ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದಿದ್ದರೆ ಸಮಸ್ಯೆ ಜಟಿಲ ಆಗುತ್ತಿರಲಿಲ್ಲ.ಆದರೆ ನಾನು ಮಾಡುವುದೆ ಸರಿ ಎಂದು ತನ್ನ ಹಿಂಬಾಲಕರ ಮೂಲಕ ಪತ್ರಿಕೆಗಳಲ್ಲಿ ಹೇಳಿಕೆ ನೀಡಿರುವುದು ಬೆಂಕಿಗೆ ಪೆಟ್ರೋಲ್ ಸುರಿದಂತೆ ಆಗಿದೆ.

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಉಗಿದ ಮೇಲಾದರು ಎಚ್ಚತ್ತು ಕೊಳ್ಳದ ನಯನರ ವರ್ತನೆ ನೋಡಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಇದರ ಜೊತೆಗೆ ಸಮಸ್ಯೆ ಬೆಳೆಸದಂತೆ ಮಾಡಲು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಂಶುಮಂತ್ ಶತಪ್ರಯತ್ನ ನಡೆಸಿದರೆ ಮುಂದೆ ಕಾಂಗ್ರೆಸ್ ಅಧ್ಯಕ್ಷ ಆಗಲೇ ಬೇಕು ಎಂದು ನಯನ ರನ್ನು ಓಲೈಸಲು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದಸ್ವಾಮಿ ನೀವು ಮಾಡಿರುವುದು ಸರಿ ಎಂದು ಫೇಸ್ ಬುಕ್ಕಲ್ಲಿ ಕಾಮೆಂಟ್ ಹಾಕಿ ಸಮಾಧಾನ ಮಾಡಿರುವುದು ಕಾಂಗ್ರೆಸ್ ನಲ್ಲಿ ಏನು ನಡೆಯುತ್ತಿದೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ.

ಕಾಂಗ್ರೆಸ್ ನ ಮುಖಂಡರು ಮತ ಪಡೆಯಲು ಪ್ರಗತಿಪರರ ಮನೆ ಬಾಗಿಲಿಗೆ ಹೋಗಿರುವುದು ಸುಳ್ಳಾ ಈಗ ಮೌನವಹಿಸಿರುವುದು ಶಾಸಕರನ್ನು ಮೆಚ್ಚಿಸಲಾ ಎಂಬ ಪ್ರಶ್ನೆ ಕೇಳ ಬೇಕಾಗಿದೆ. ಅಧಿಕಾರ ಮದ ಸಣ್ಣ ವಿಷಯಕ್ಕೆ ಮತ್ತಷ್ಟು ಬೆಂಕಿ ಉಗುಳುವ ಮಟ್ಟಕ್ಕೆ ಹೋಗುತ್ತಿರುವುದು ಮಾತ್ರ ಸತ್ಯ. ಈಗಾಗಲೇ ಬಿ,ಎಸ್,ಪಿಯವರು ಕೆಂಡ ಕಾರಿದ್ದಾರೆ ನಯನ ಮಾತ್ರ ನನಗೆ ಮತ ಹಾಕದವರ ಪಿತೂರಿ ಎಂದರೆ ನಿಜವಾಗಿ ಪಿತೂರಿ ನಡೆಸುವವರು ನಿಮ್ಮ ಮೆಚ್ಚಿಸುವವರು ಎಂದು ಅರಿತು ಕೊಳ್ಳುವುದು ಒಳ್ಳೆಯದು .

Is Congress running out of steam with progressives outraged over MLA Nayana Kamalamma’s saffron shawl?

Share

Leave a comment

Leave a Reply

Your email address will not be published. Required fields are marked *

Don't Miss

ತಾಯಿಗೆ ಬೆಂಕಿ ಹಾಕಿ ಕೊಂದ ಮಗ

ಚಿಕ್ಕಮಗಳೂರು: ತಾಯಿಯನ್ನು ಮಗ ಬೆಂಕಿ ಹಾಕಿ ಸುಟ್ಟು ಕೊಂದಿರುವ ಅಮಾನುಷ ಘಟನೆ ನಡೆದಿದೆ. ಆಲ್ದೂರು ಠಾಣೆ ವ್ಯಾಪ್ತಿಯ ಅರೆನೂರು ಗ್ರಾಮದಲ್ಲಿ ನಡೆದಿದ್ದು ವಿಷಯ ತಿಳಿದ ತಕ್ಷಣ ಪೊಲೀಸ್ ಸಿಬ್ಬಂದಿ ತೆರಳಿದ್ದಾರೆ. Son...

ಸಖರಾಯಪಟ್ಟಣದ ಅಗ್ರಹಾರ ಬಳಿ ನಿಷೇಧಾಜ್ಞೆ ಜಾರಿ

ಚಿಕ್ಕಮಗಳೂರು: ಸಖರಾಯಪಟ್ಟಣ ಹೋಬಳಿ ಅಗ್ರಹಾರ ಗ್ರಾಮದ ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿಗೆ ಪರ-ವಿರೋಧ ವ್ಯಕ್ತವಾಗಿದ್ದು, ಉಭಯ ಕಡೆ ಅಹಿತಕರ ಘಟನೆ ನಡೆಯುವ ಸಂಭವವಿರುವುದರಿಂದ ಸ್ಥಳದಿಂದ ಒಂದು ಕಿ.ಮೀ. ವ್ಯಾಪ್ತಿಯವರೆಗೆ ಜುಲೈ ೨೮ ರಿಂದ...

Related Articles

ಆ.10ಕ್ಕೆ ಬಸವ ಮಾಚಿದೇವ ಶ್ರೀಗಳ ಸಾಮೂಹಿಕ ಪಾದಪೂಜೆ

ಚಿಕ್ಕಮಗಳೂರು: ಶ್ರಾವಣ ಮಾಸದ ಪೂಜೆ ಕಾರ್ಯಕ್ರಮದ ಅಂಗವಾಗಿ ಬಸವನಹಳ್ಳಿಯ ಜಿಲ್ಲಾ ಮಡಿವಾಳರ ಸಂಘದ ಆವರಣದಲ್ಲಿ ಆ.೧೦...

ಸಮರ್ಪಕ ಪಡಿತರ ವಿತರಣೆಗೆ ರಾಜ್ಯ ಪಡಿತರ ಸಂಘ ಆಗ್ರಹ

ಚಿಕ್ಕಮಗಳೂರು:  ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳು ೫ನೇ ತಾರೀಖಿನೊಳಗೆ ಪಡಿತರ ಹಂಚಿಕೆ ಮಾಡಬೇಕು. ಅನ್ನಭಾಗ್ಯ ಅಕ್ಕಿಯ...

ಆ.7-8 ಕ್ಕೆ ಸಿಪಿಐ ಸಮಾವೇಶ-ಬಹಿರಂಗ ಅಧಿವೇಶನ

ಚಿಕ್ಕಮಗಳೂರು: ಭಾರತ ಕಮ್ಯುನಿಷ್ಟ ಪಾರ್ಟಿ ಸ್ಥಾಪನೆಯಾಗಿ ೧೦೦ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಆ.೭ ಮತ್ತು ೮...

ಬೀದಿಗಿಳಿಯದ ಕೆಎಸ್‌ಆರ್‌ಟಿಸಿ ಬಸ್‌ಗಳು-ಜಿಲ್ಲೆಯಾದ್ಯಂತ ಪರದಾಡಿದ ಪ್ರಯಾಣಿಕರು

ಚಿಕ್ಕಮಗಳೂರು: ವೇತನ ಪರಿಷ್ಕರಣೆ, ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಾರಿಗೆ ನೌಕರರು...