ಚಿಕ್ಕಮಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ನವರ ಕಿರುಕುಳದಿಂದ ಹಲವರು ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳು ಬರುತ್ತಿವೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಲ್ಲಿ ಇಲ್ಲಿ ಮೈಕ್ರೋ ಫೈನಾನ್ಸ್ ಬಗ್ಗೆ ಗುಸು,ಗುಸು ಸುದ್ದಿ ಬಂದರು ಅಧಿಕೃತವಾಗಿ ಯಾವ ದೂರುಗಳು ಬಂದಿರಲಿಲ್ಲ.ಈ ಮಧ್ಯೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಭೆ ನಡೆಸಿ ಕಟ್ಟು ನಿಟ್ಟಿನ ಸೂಚನೆ ಕೊಡುವುದರ ಮೂಲಕ ಎಚ್ಚರಿಕೆ ನೀಡಿದ್ದರು.
ಕಡೂರು ತಾಲೂಕಿನ ಬೀರೂರು ಸಮೀಪದ ಅಲದಹಳ್ಳಿಯ ಗಜಲಕ್ಷ್ಮಿ ಉಮೇಶ್ ನಾಯ್ಕ ಎಂಬ ದಂಪತಿಗೆ ಗ್ರಾಮ ಶಕ್ತಿ ಫೈನಾನ್ಸ್ ನವರು ಮಾನಸಿಕ ಕಿರುಕುಳ ನೀಡಿ ಅಧಿಕ ಹಣಕ್ಕೆ ಹಿಂಸೆ ಕೊಡುತ್ತಿದ್ದಾರೆ ಎಂದು ದಂಪತಿ ಜಿಲ್ಲಾ ಪೊಲೀಸ್ ಕಛೇರಿ ಮೆಟ್ಟಿಲು ಹತ್ತಿದ್ದಾರೆ ಎಂದು ತಿಳಿದುಬಂದಿದೆ.
ನಾಲ್ಕು ಲಕ್ಷ ಹಣ ಸಾಲಪಡೆಯಲು ಹೋದಾಗ ಅ ಖರ್ಚು ಈ ಖರ್ಚು ಎಂದು ಮೂರು ಲಕ್ಷ ಎಪ್ಪತ್ತು ಸಾವಿರ ಹಣ ನೀಡಿದ್ದು ಪ್ರತಿ ತಿಂಗಳು 12 600 ರೂನಂತೆ 36 ತಿಂಗಳ ಅವಧಿ ನೀಡಲಾಗಿತ್ತು ಈಗಾಗಲೆ 34 ತಿಂಗಳು ಹಣ ಕಟ್ಟಲಾಗಿದೆ .ಆದರೂ ಇನ್ನೂ ಎರಡು ಲಕ್ಷ ಬಾಕಿ ಇದೆ ಎಂದು ಕಿರುಕುಳ ನೀಡುತ್ತಿದ್ದಾರೆ
ಬೆಳಗ್ಗೆ 7 ಗಂಟೆಗೆ ಬಂದು 11 ಗಂಟೆಯವರೆಗೆ ಸತಾಯಿಸುತ್ತಾರೆ ಸಂಜೆ 4 ಗಂಟೆಗೆ ಬಂದವರು ರಾತ್ರಿ8 ಗಂಟೆಯವರಿಗೆ ಕಿರುಕುಳ ನೀಡಿ ಕೂಗಾಡುತ್ತಾರೆ ಅಕ್ಕ ಪಕ್ಕದ ಜನ ಸೇರುವಂತೆ ಮಾಡಿರುವುದಲ್ಲದೆ ಮನೆಗೆ ಬೀಗ ಜಡಿದು ಸೀಜ್ ಮಾಡುತ್ತೇವೆ ಎಂದು ಬೆದರಿಕೆ ಒಡ್ಡಿದ್ದು ನಮಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ದಂಪತಿಗಳು ಜಿಲ್ಲಾ ಪೊಲೀಸ್ ಕಛೇರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೋರಿದ್ದಾರೆ.
Husband and wife file complaint against microfinance harassment
Leave a comment