Home namma chikmagalur chikamagalur ಅಕಾಲಿಕ ಮಳೆಯಿಂದ ಕಾಫಿತೋಟಗಳಲ್ಲಿ ಅಪಾರ ನಷ್ಟ
chikamagalurHomeLatest Newsnamma chikmagalur

ಅಕಾಲಿಕ ಮಳೆಯಿಂದ ಕಾಫಿತೋಟಗಳಲ್ಲಿ ಅಪಾರ ನಷ್ಟ

Share
Share

ಚಿಕ್ಕಮಗಳೂರು: ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಮಲೆನಾಡು ಭಾಗದ ಕಾಫಿತೋಟಗಳಲ್ಲಿ ಅಪಾರ ನಷ್ಟ ಉಂಟಾಗಿದ್ದು, ಈ ಬಗ್ಗೆ ಕಾಫಿ ಮಂಡಳಿ ಸಮೀಕ್ಷೆ ನಡೆಸಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸುವಂತೆ ಕೆಪಿಸಿಸಿ ವಕ್ತಾರ, ಬೆಳೆಗಾರ ಎಚ್.ಎಚ್.ದೇವರಾಜ್ ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಕಾಲಿಕ ಮಳೆಯಿಂದ ಕಳಸ, ಶೃಂಗೇರಿ, ಕೊಪ್ಪ, ಮತ್ತಿತರೆ ಕಡೆ ಕಾಫಿಹಣ್ಣು ಕೊಯ್ಲು ಆಗುವ ಮುನ್ನವೇ ಗಿಡದಲ್ಲಿ ಮೊಗ್ಗಾಗಿದೆ. ಇದು ಅರಳಲು ಮತ್ತೆ ಮಳೆ ಬೇಕು. ಇಲ್ಲದಿದ್ದಲ್ಲಿ ಹಳದಿಯಾಗಿ ಉದುರಿಹೋಗುತ್ತದೆ. ಇದು ಮುಂದಿನ ವರ್ಷದ ಫಸಲಿನ ಮೇಲೆ ನೇರ ಪರಿಣಾಮ ಬೀರಲಿದ್ದು, ಬೆಳೆಗಾರರ ಅಪಾರ ನಷ್ಟ ಹೊಂದಬೇಕಾಗುತ್ತದೆ. ಹೀಗಾಗಿ ಕಾಫಿ ಮಂಡಳಿ ಸಮಗ್ರ ಸಮೀಕ್ಷೆ ನಡೆಸಿ ನೈಜ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿ ಸೂಕ್ತ ಪರಿಹಾರ ಕೊಡಿಸುವಲ್ಲಿ ಸಂಸದರು, ಕಾಫಿ ಮಂಡಿ ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಕಾಫಿ ಮಂಡಳಿ ಅಧ್ಯಕ್ಷರು, ಸಂಸದರು, ಜಿಲ್ಲೆಯ ಜನಪ್ರತಿನಿಧಿಗಳು ಒಂದು ನಿಯೋಗ ತೆಗೆದುಕೊಂಡು ಹೋಗಿ ಕೇಂದ್ರ ಸಚಿವರ ಬಳಿ ವೈಜ್ಞಾನಿಕವಾದ ವರದಿ ನೀಡಿ ಮನವರಿಕೆ ಮಾಡಿಕೊಡಬೇಕು. ಇಲದಿದ್ದರೆ ಇಲ್ಲಿನ ಸಂಸದರ ವಿರುದ್ಧ ಅಸಹಕಾರ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಡಿಸಿಸಿ ಬ್ಯಾಂಕ್ ಚುನಾವಣೆ: ಡಿಸಿಸಿ ಬ್ಯಾಕ್ ಚುನಾವಣೆಯಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿಲ್ಲ. ಈಗ ೫ ಮಂದಿ ಶಾಸಕರಿದ್ದರೂ ಅನುಭವದ ಕೊರತೆ ಅಥವಾ ಪಕ್ಷದ ಅಧಿಕಾರದ ಚುಕ್ಕಾಣಿ ಹಿಡಿದಿರುವವರು ಸಕ್ರಿಯರಾಗದಿರವುದಕ್ಕೆ ಈ ಬಾರಿ ಹಿನ್ನೆಡೆ ಆಗಿರಬಹುದು. ಒಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ಸಚಿವನಾಗಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿಂತಿರುವುದು ನಾಚಿಕೆಗೇಡಿನ ವಿಚಾರ. ತನ್ನ ಮಗನನ್ನು ಮುಂದೆ ಪಿಸಿಎಆರ್‌ಡಿ ಬ್ಯಾಂಕ್ ಚುನಾವಣೆಗೆ ನಿಲ್ಲಿಸಿದರೂ ಅಚ್ಚರಿಪಡಬೇಕಿಲ್ಲ ಎಂದು ಸಿ.ಟಿ.ರವಿ ವಿರುದ್ಧ ವ್ಯಂಗ್ಯವಾಡಿದರು.

ಚಿಕ್ಕಮಗಳೂರು ಪ್ಯಾಕ್ಸ್ ಕ್ಷೇತ್ರದಲ್ಲಿ ನಿರಂಜನ್ ಅವರನ್ನು ಸೋಲಿಸುವ ಮೂಲಕ ಬಿಜೆಪಿ ವೀರಶೈವ ಸಮಾಜದ ವಿರೋಧ ಕಟ್ಟಿಕೊಂಡಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಪ್ರಕಾಶ್‌ರೈ, ಶ್ರೀನಿವಾಸ ದೇವಾಂಗ, ರಾಜು ಇದ್ದರು.

Huge losses in coffee plantations due to untimely rains

Share

Leave a comment

Leave a Reply

Your email address will not be published. Required fields are marked *

Don't Miss

ಹಿರಿಯ ನಾಗರಿಕರಿಗೆ 3.12 ಲಕ್ಷ ರೂ ವಂಚನೆ

ಚಿಕ್ಕಮಗಳೂರು: ಸೈಬರ್ ಕ್ರಿಮಿನಲ್‌ಗಳ ಜಾಲಕ್ಕೆ ಸಿಲುಕಿ ಹಿರಿಯ ನಾಗರಿಕರೊಬ್ಬರು ಬರೋಬ್ಬರಿ 3.12 ಲಕ್ಷ ಕಳೆದುಕೊಂಡಿದ್ದಾರೆ. ನಗರದಲ್ಲಿ ವಾಸವಾಗಿರುವ 62 ವರ್ಷದ ವೆಂಕಟೇಶ್ ಇತ್ತೀಚೆಗೆ ಅವರ ಮೊಬೈಲ್‌ಗೆ ಬಂದಿದ್ದ ಒಂದು ಅಪರಿಚಿತ ಎಪಿಕೆ...

ಜಿಲ್ಲೆಯ ಒಟ್ಟು 15 ಮಂದಿಯ ಗಡಿಪಾರಿಗೆ ಶಿಫಾರಸ್ ಪತ್ರ

ಚಿಕ್ಕಮಗಳೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಭಜರಂಗದಳದ ಮುಖಂಡ ಶ್ಯಾಮ್ ವಿ ಗೌಡ, ಮುಸ್ಲಿಂ ಸಮುದಾಯದ 10 ಮಂದಿ ಸೇರಿ ಜಿಲ್ಲೆಯ ಒಟ್ಟು 15 ಮಂದಿಯ ಗಡಿಪಾರಿಗೆ ಜಿಲ್ಲಾ...

Related Articles

ಎಸ್.ಬಿದರೆಯ ಬೆಂಕಿ ಲಕ್ಷ್ಮೀ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ

ಕಡೂರು: ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿ ಎಸ್.ಬಿದರೆಯ ಬೆಂಕಿ ಲಕ್ಷ್ಮೀ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವವು ಮಂಗಳವಾರ ಶ್ರದ್ಧಾ...

ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿದ್ದ ಇಂದಿರಾ ಕ್ಯಾಂಟೀನ್ ಸ್ಥಳಾಂತರ

ಚಿಕ್ಕಮಗಳೂರು : ನಗರದ ಐ.ಜಿ. ರಸ್ತೆಯ ಬಸ್ ನಿಲ್ದಾಣದ ಸಮೀಪವಿರುವ ಇಂದಿರಾ ಕ್ಯಾಂಟೀನ್ ಅನ್ನು ಸ್ಥಳಾಂತರ...

ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳು ಮನೆ ಬಾಗಿಲಿಗೆ

ಚಿಕ್ಕಮಗಳೂರು: ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ...

ಶಾಸಕ ಜಿ.ಹೆಚ್. ಶ್ರೀನಿವಾಸ್ ವಿರುದ್ಧ ಪ್ರತಿಭಟನೆ

ಅಜ್ಜಂಪುರ : ಶಾಸಕ ಜಿ.ಹೆಚ್. ಶ್ರೀನಿವಾಸ್ ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು...