ಚಿಕ್ಕಮಗಳೂರು: ರೆಸಾರ್ಟ್ ಸಿಬ್ಬಂದಿಯೊಬ್ಬರು ಸಂಚಿಗೆ ಬಲಿಯಾಗಿ ಹಣ ಹಾಗೂ ಮೊಬೈಲ್ ಕಳೆದುಕೊಂಡಿದ್ದಾರೆ. ಕಳಸ ತಾಲ್ಲೂಕಿನ ರಿವರ್ ಮಿಸ್ಟ್ ರೆಸಾರ್ಟ್ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಪೋದುಮ್ ಮುರಾರಿ ಎಂಬುವವರು ರಜೆಯಲ್ಲಿದ್ದಾಗ ಈ ಘಟನೆ ನಡೆದಿದೆ.
ಅಂದು ಬೆಳಿಗ್ಗೆ ರೆಸಾರ್ಟ್ ಚಾಲಕ ಅಜಿತ್ ಎಂಬಾತ ಮುರಾರಿ ಅವರನ್ನು ಸಂಸ್ಥೆ ವರೆಗೆ ಬಿಟ್ಟು, ನಂತರ ಚಿಕ್ಕಮಗಳೂರಿನಲ್ಲಿ ತನ್ನ ಸ್ನೇಹಿತರು ನೀಡುವ ಪಾರ್ಸೆಲ್ ಪಡೆದು ತರುವಂತೆ ತಿಳಿಸಿದ್ದನು.
ಮುರಾರಿ ಅವರು ತಮ್ಮ ಸಂಬಳದ ಹಣದಲ್ಲಿ 17,000 ರೂಪಾಯಿ ಮೌಲ್ಯದ ಎರಡು ಹೊಸ ಮೊಬೈಲ್ ಖರೀದಿಸಿ ಅಜಿತ್ ಕರೆ ಮಾಡಿದಾಗ, ಆತ ತನ್ನ ಸ್ನೇಹಿತರೊಂದಿಗೆ ಕಾನ್ಸರೆನ್ಸ್ ಕಾಲ್ ಮೂಲಕ ಮಾತನಾಡಿಸಿ ಸ್ಥಳವೊಂದಕ್ಕೆ ಬರುವಂತೆ ಸೂಚಿಸಿದ್ದನು.
ಅಜಿತ್ ನೀಡಿದ ಮಾಹಿತಿಯಂತೆ ಬಂದ ಆತನ ಸ್ನೇಹಿತರು ಮುರಾರಿ ಅವರನ್ನು ಬೈಕ್ನಲ್ಲಿ ಪಟ್ಟಣದ ಹೊರವಲಯಕ್ಕೆ ಕರೆದೊಯ್ದು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಮುರಾರಿ ಬಳಿಯಿದ್ದ ಎರಡು ಹೊಸ ಮೊಬೈಲ್ ಫೋನ್ಗಳು ಹಾಗೂ 3,600 ರೂಪಾಯಿ ನಗದನ್ನು ಬಲವಂತವಾಗಿ ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾದ ಮುರಾರಿ ಅವರು ಕೂಡಲೇ ತಮ್ಮ ರೆಸಾರ್ಟ್ ಮ್ಯಾನೇಜರ್ ಮೋಹನ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಮ್ಯಾನೇಜರ್ ಅವರ ನೆರವಿನೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಸಂತ್ರಸ್ತರಿಗೆ ಭಾಷೆಯ ಸಮಸ್ಯೆ ಇದ್ದುದರಿಂದ ಮ್ಯಾನೇಜರ್ ಅವರ ಮೂಲಕವೇ ದೂರು ದಾಖಲಿಸಲಾಗಿದ್ದು,
ಪೊಲೀಸರು ಅಜಿತ್ ಹಾಗೂ ಆತನ ಸ್ನೇಹಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Housekeeping attacked at resort mobile stolen
Leave a comment