ಚಿಕ್ಕಮಗಳೂರು : ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ಯಲ್ಲಿ ಗುರುವಾರದಿಂದ ಶನಿವಾರದವರೆಗೆ ನಡೆಯಲಿರುವ ದತ್ತ ಜಯಂತಿಗೆ ಹವಾಮಾನ ವೈಫರೀತ್ಯಾ ಭಾರೀ ಅಡ್ಡಿಮಾಡಿದೆ.
ಗುರುವಾರದಿಂದ ಗಿರೀಭಾಗದಲ್ಲಿ ದಟ್ಟ ಮಂಜು ಹಾಗೂ ಸಾಧಾರಣ ಮಳೆ ಆಗುತ್ತಿದ್ದು ಇದು ದತ್ತ ಜಯಂತಿ ಧಾರ್ಮಿಕ ಆಚರಣೆಗಳಿಗೆ ಅಡಚಣೆ ಮಾಡಿದೆ. ಶುಕ್ರವಾರ ಬಾಬಾಬುಡನ್ ದರ್ಗಾ ಹಾಗೂ ಸುತ್ತಮುತ್ತ ಭಾರಿ ಗಾಳಿ ಹಾಗೂ ಸಾಧಾರಣ ಮಳೆ ಆಗಿದ್ದು, ಗಾಳಿಗೆ ದತ್ತ ಪೀಠದಲ್ಲಿ ಪೂಜೆ ಹೋಮ ಹವನ ನಡೆಸಲು ಹಾಕಿದ್ದ ಶಾಮಿಯಾನ ಮತ್ತು ಶೀಟುಗಳು ಗಾಳಿಗೆ ಹಾರಿ ಹೋಗಿವೆ. ಜೊತೆಗೆ ಮೋಡ ಕವಿದ ವಾತಾವರಣ ಹಾಗೂ ಕೊರೆಯುವ ಚಳಿ ಮಳೆ ಪರಿಣಾಮ ಗಿರಿಯಲ್ಲಿ ಬಂದೋಬಸ್ತ್ ಗೆ ನಿಯೋಜನೆಗೊಂಡಿರುವ ಪೊಲೀಸರು ಹೋಮ್ ಗಾರ್ಡ್ ಗಳು ಮತ್ತಿತರರ ಬೇರೆ ಜಿಲ್ಲೆಗಳಿಂದ ಆಗಮಿಸಿರುವ ಪೊಲೀಸ್ ಸಿಬ್ಬಂದಿ ಕೆಲಸ ಮಾಡಲು ಪರದಾಡುತಿದ್ದಾರೆ.
ಗಿರಿಯಲ್ಲಿ ಭಾರೀ ಚಳಿ ಇದ್ದು ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ನಡುಗುತ್ತಾ ಕೆಲಸ ಮಾಡುವಂತಾಗಿದ್ದು ಭಾರೀ ಚಳಿ ಕಾರಣ ಪೊಲೀಸ್ ಭದ್ರತಾ ಸಿಬ್ಬಂದಿ ಆರೋಗ್ಯದ ಮೇಲೂ ಗಂಭೀರ ಪರಿಣಾಮ ವುಂಟುಮಾಡುವ ಸಮಸ್ಯೆ ಎದುರಾಗಿದೆ.
ಅಲ್ಲದೆ, ಗಿರಿ ತಲುಪುವ ರಸ್ತೆಯಲ್ಲಿ ದಟ್ಟ ಮಂಜು ಆವರಿಸಿದ್ದು ವಾಹನಗಳ ಸಂಚಾರಕ್ಕೆ ತೊಂದರೆ ಆಗಿದ್ದು ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಜೊತೆಗೆ ನಾಳೆ ಕೂಡ ದತ್ತ ಜಯಂತಿ ಕೊನೆ ದಿನವಾಗಿದೆ, ಮತ್ತಷ್ಟು ಮಳೆ ಸಾಧ್ಯತೆಯನ್ನು ಹವಾಮಾನ ಇಲಾಖೆ ಮುನ್ಸೂಚನೆ ನೀಡದೆ
Leave a comment