ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಬಾಗಿಲು ಮುರಿದು ಒಳಗೆ ನುಗ್ಗಿರುವ ಕಳ್ಳರು ಆಭರಣ ಸೇರಿದಂತೆ ೫.೨೦ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಅಪಹರಿಸಿದ್ದಾರೆ.
ಕಡೂರು ಠಾಣಾ ವ್ಯಾಪ್ತಿಯ ವೆಂಕಟೇಶ್ವರ ನಗರದ ರಾಜ್ಯ ರಸ್ತೆಸಾರಿಗೆ ಸಂಸ್ಥೆಯ ಮೆಕ್ಯಾನಿಕ್ ಜಯಪ್ಪ ಅವರು ಕುಟುಂಬ ಸಮೇತ ಸಂಬಂಧಿಕರ ಮನೆಗೆ ಹೋಗಿದ್ದು, ಮನೆಯ ಮುಂಬಾಗಿಲ ಬೀಗಮುರಿದು ಒಳನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ ೬೦ಸಾವಿರ ಬೆಲೆಗೆ ೬ ಗ್ರಾಮ ಒಂದು ಜೊತೆ ಓಲೆ, ೬೦ಸಾವಿರ ಬೆಲೆಯ ಜೊತೆ ಹ್ಯಾಂಗಿಂಗ್ಸ್, ೨೦ಸಾವಿರ ಬೆಲೆಗ ೨ ಗ್ರಾಂ ಡಾಲರ್, ಒಟ್ಟು ೧೪ ಗ್ರಾಮ ಚಿನ್ನದ ಆಭರಣ ಕಳವುಮಾಡಿದ್ದು, ಇವುಗಳ ಬೆಲೆ ೧.೪೦ ಲಕ್ಷ ರೂ.ಗಳಾಗಿವೆ ಎಂದು ಮನೆಯ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ.
ನಗರ ಠಾಣೆ ವ್ಯಾಪ್ತಿಯ ೨ನೇ ವಾರ್ಡಿನ ಬಸವೇಶ್ವರ ಬಡಾವಣೆಯಲ್ಲಿ ರಕ್ಷಿತ್ ಎಂಬುವರು ಹೊಸದಾಗಿ ಮನೆ ನಿರ್ಮಿಸುತ್ತಿದ್ದು, ಸ್ವಿಚ್‌ಗೆ ಅಳವಡಿಸಿದ್ದ ವೈರನ್ನು, ಮಧ್ಯದ ಹಾಲ್ ಸ್ಟೇರ್‌ಕೇಸ್ ಹಾಗೂ ಮೊದಲನೇ ಮಹಡಿ ಗೆಸ್ಟ್ ಬೆಡ್‌ರೂಂ.ಗಳಲ್ಲಿ ಸ್ವಿಚ್‌ಗೆ ಅಳವಡಿಸಲು ಬಿಟ್ಟಿದ್ದ ವೈರಗಳನ್ನು ಕತ್ತರಿಸಿ ಕಳವು ಮಾಡಲಾಗಿದ್ದು, ಇವುಗಳ ಬೆಲೆ ೭೦ಸಾವಿರ ರೂ.ಗಳಾಗಿವೆ ಎಂದು ದೂರು ನೀಡಿದ್ದು, ಪೊಲೀಸರು ಕಳವು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಗೋಣಿಬೀಡು ಪೊಲೀಸ್ ಠಾಣೆಯ ಮೇಲ್ಪೇಟೆಯ ಜಮೀಲಾಬಾನು ಮನೆಗೆ ಬಂದು ನೋಡಿದಾಗ ಹಿಂಬಾಗಿಲು ತೆರೆದಿದ್ದು, ಒಳಗೆ ಹೋಗಿ ನೋಡಿದಾಗ ಬೆಡ್‌ರೂಂ.ನಲ್ಲಿದ್ದ ಗಾಡ್ರೇಜ್ ಬೀರುವಿನ ಬಾಗಿಲು ತೆರೆದು ೧.೫೦ ಲಕ್ಷ ರೂ. ೧೦ ಗ್ರಾಂ ಚಿನ್ನದ ಮಾಂಗಲ್ಯ ಸರ, ೬೦ಸಾವಿರ ಬೆಲೆಬಾಳು ೬ ಗ್ರಾಂ ೩ ಚಿನ್ನದ ಉಂಗುರ, ೧ ಲಕ್ಷ ಮೌಲ್ಯದ ೮ ಗ್ರಾಂ ೨ ಜೊತೆ ಚಿನ್ನದ ಓಲೆ ಇವುಗಳ ಬೆಲೆ೩.೧೦ ಲಕ್ಷ ರೂ.ಗಳಾಗಿವೆ ಎಂದು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಗೋಣಿಬೀಡು ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.
Gold jewellery worth Rs 5.20 lakh stolen in separate cases
Leave a comment