ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕಲ್ಲಂಗಡಿಯ ನಕಲಿ ಬೀಜ ವಿತರಿಸಿ ರೈತರಿಗೆ ದೋಖ ಮಾಡಿದ ಘಟನೆ ಕುರಿತು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಗುರುಶಾಂತಪ್ಪ ಇಂದು ಪತ್ರಿಕಾಗೋಷ್ಠಿಯಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಿಗಿಸುವುದರ ಜೊತೆಗೆ ರೈತರಿಗೆ ಆಗಿರುವ ನಷ್ಟದ ಬೆಲೆ ತುಂಬಿ ಕೊಡಲು ಒತ್ತಯಿಸಿದ್ದಾರೆ.
ವೋಡಿಪಸ್ ಕಂಪನಿಯು ಕಲ್ಲಂಗಡಿ ಬೀಜ ಮಾರಾಟ ಮಾಡಿದ್ದು ಇದರಿಂದಾಗಿ ರೈತ ನಾಗರಾಳು ಗುರುಶಾಂತಪ್ಪರವರಿಗೆ 4,30,000 ನಷ್ಟ ಉಂಟಾಗಿದ್ದು ಕಂಪನಿ ನಷ್ಟ ತುಂಬಿ ಕೊಡಲು ಒತ್ತಯಿಸಿದರು. ಬೀಜ ಬಿತ್ತಿದ 60 ದಿನಗಳವರೆಗೆ ಸಮೃದ್ಧವಾಗಿ ಬೆಳೆದ ಬೆಳೆಯಲ್ಲಿ ಹೂವು ಮಾತ್ರ ಬಿಟ್ಟಿದೆ ಆದರೆ ಕಾಯಿ ಬಿಟ್ಟಿಲ್ಲ ಎಂದ ಅವರು ಈ ಬಗ್ಗೆ ಅನುಮಾನಗೊಂಡ ರೈತ ಕೆಳದಿ ಶಿವಪ್ಪನಾಯಕ ತೋಟಗಾರಿಕೆ ಮತ್ತು ಕೃಷಿ ವಿಶ್ವ ವಿದ್ಯಾಲಯ ದ ವಿಜ್ಞಾನಿಗಳಿಗೆ ದೂರು ಸಲ್ಲಿಸಿದ್ದರಿಂದ ವಿಜ್ಞಾನಿಗಳಾದ ಡಾ//ಪಲ್ಲವಿ,ಡಾ//ಯಮುನ ,ಡಾ//ಸುಭಾಸಿಣಿ ಮತ್ತು ಡಾ//ಸುರೇಶ್ ಕುಮಾರ್ ತಂಡ ರೈತರ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾಯಿ ಕಚ್ಚದಿರುವ ಬಗ್ಗೆ ವರದಿ ಸಲ್ಲಿಸಿ ಕಂಪನಿಯ ಬೀಜ ಇಲಾಖೆಯಲ್ಲಿ ನಮೂದು ಆಗಿಲ್ಲ ಎಂದು ತಿಳಿಸಿದ್ದು ,ಅನಧಿಕೃತವಾಗಿ ಮಾರಾಟ ಮಾಡಿರುವ ಕಂಪನಿಯ ವಿರುದ್ಧ ಕಾನೂನು ಕ್ರಮ ಜರಿಗಿಸಲು ರೈತ ಸಂಘ ಒತ್ತಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಹೇಶ್, ಕೆ.ಕೆ.ಕೃಷ್ಣೇಗೌಡ ದಯಾನಂದ ಮುಂತಾದವರು ಇದ್ದರು.
Leave a comment