ಅಜ್ಜಂಪುರ: ತಾಲ್ಲೂಕಿನ ಮಾಕೋ ನಹಳ್ಳಿ (ಬುಕ್ಕಾಂಬುಧಿ) ಅತ್ತಿಗಟ್ಟೆ ಕ್ರಾಸ್ ಬಳಿ ಭಾನುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಪತಿ-ಪತ್ನಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಅಜ್ಜಂಪುರದಿಂದ ಬುಕ್ಕಾಂಬುಧಿ ಕಡೆಗೆ ಸಾಗುತ್ತಿದ್ದ ಕಾರು, ಬೈಕ್ ನಡುವೆ ಅಪಘಾತ ನಡೆದಿದ್ದು, ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಹೊಸಹಳ್ಳಿ ತಾಂಡ್ಯದ ನಾಗಿ ಬಾಯಿ (68) ಸ್ಥಳದಲ್ಲಿಯೇ ಮೃತಪಟ್ಟಿದ್ದರೆ. ಪತಿ ಗೋವಿಂದ ನಾಯ್ಕ್ (75) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬೈಕ್ ಚಲಾಯಿಸುತ್ತಿದ್ದ ಸಂತೋಷ ನಾಯ್ಕ ಗಾಯಗೊಂಡಿದ್ದಾರೆ. ಅಪಘಾತ ಸ್ಥಳದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಅತ್ತಿಗಟ್ಟೆ ಪಾರ್ವತಿ ಎಂಬುವರು ಗಾಯಗೊಂಡಿದ್ದು, ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಮೃತರ ಸಂಬಂಧಿ ಚಂದ್ರಾನಾಯ್ಕ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Leave a comment