ಚಿಕ್ಕಮಗಳೂರು :ಕೆ.ಎಸ್.ಆರ್.ಟಿ.ಸಿ. ನಿರ್ವಾಹಕನ ಸಾವಿಗೆ ಹೊಣೆಯಾಗಿರುವ ಡಿಪೋ ಮ್ಯಾನೇಜರ್ ಹಾಗೂ ಚಾರ್ಜ್ ಮ್ಯಾನ್ ಅಮಾನತ್ತಿಗೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂ ಟ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ ದಲಿತ ಒಕ್ಕೂಟದ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ಮಾತನಾಡಿ ಸಿಬ್ಬಂದಿ ಗಳ ನಿರ್ಲಕ್ಷ್ಯತನದಿಂದ ನಿರ್ವಾಹಕನ ಸಾವು ಸಂಭವಿಸಿದೆ ಇದರಿಂದ ಆತನ ಕುಟುಂಬ ಅನಾಥವಾಗಿದೆ. ಈ ಸಾವಿಗೆ ಕಾರಣರಾದ ಡಿಪೋ ಮ್ಯಾನೇಜರ್ ಬೇಬಿಬಾಯಿ ಮತ್ತು ಚಾರ್ಜ್ ಮ್ಯಾನ್ ಪರಮೇಶ್ವರಪ್ಪ ಅವರನ್ನು ಕೂಡಲೇ ಅಮಾನತ್ತುಪಡಿಸಬೇಕು ಎಂದು ಒತ್ತಾಯಿಸಿದರು.
ಕಳೆದ ೧೮ ವರ್ಷಗಳಿಂದ ಕೆ.ಎಸ್.ಆರ್.ಟಿ.ಸಿ. ಇಲಾಖೆಯಲ್ಲಿ ಲಂಚವನ್ನು ನೀಡಿ, ಲಂಚದಿಂದಲೇ ಕಾರ್ಯನಿರ್ವಹಿಸುತ್ತಿರುವ ಭ್ರಷ್ಟ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾಯಿಸಬೇಕೆಂದು ಅನೇಕ ಹೋರಾಟ ಮುಖಾಂತರ ಕೆ.ಎಸ್.ಆರ್.ಟಿ.ಸಿ ಡಿಸಿಗೆ ಮನವಿ ಮಾಡಿದರೂ ಯಾವುದೇ ಕ್ರಮ ವಹಿಸದೇ ಬೇಜವಾಬ್ದಾರಿತನ ತೋರಿದ್ದಾರೆ ಎಂದು ದೂರಿದರು.
ಪ್ರಕರಣಕ್ಕೆ ಸಂಬಂಧ ಕರ್ತವ್ಯ ಲೋಪವೆಸಗಿರುವ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಸಾರಿಗೆ ಇಲಾಖೆಗೆ ಎಚ್ಚರಿಸಿದರೂ ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ ಎಂದ ಅವರು ಮುಂದೆ ಇನ್ನಷ್ಟು ಚಾಲಕ, ಕಂಡಕ್ಟರ್ ಹಾಗೂ ದುಡಿಯುವ ಕೆಳ ನೌಕರರನ್ನು ಬಲಿಪಡೆಯಲಿದೆ ಎಂಬ ಆತಂಕ ಎದುರಾಗಿದೆ ಎಂದರು.
ಕೂಡಲೇ ಸೇವೆಯಲ್ಲಿ ಲೋಪವೆಸಗಿರುವ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಿದ್ದಲ್ಲಿ ನಿರಂತರ ಪ್ರತಿ ಭಟನೆಯಲ್ಲಿ ತೊಡಗಿರುವ ಒಕ್ಕೂಟ ಮುಖಂಡರುಗಳು ಹಾಗೂ ಪ್ರಗತಿಪರ ಸಂಘಟನೆಗಳು ಅನಿರ್ದಿಷ್ಟಾ ವಧಿ ಮುಷ್ಕರ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ ಅಮಾಯಕ ಕೆಎಸ್‌ಆರ್‌ಟಿಸಿ ನಿರ್ವಾಹಕ ಶ್ರೀಕಾಂತನ ಸಾವಿನಿಂದ ಆತನ ಕುಟುಂಬ ಕಂಗಾಲಾಗಿದೆ. ಈ ಅಪಘಾತದ ಹೊಣೆಹೊತ್ತಿರುವ ಹಾಗೂ ಸೂಕ್ತ ಸಮಯಕ್ಕೆ ಮೆಕ್ಯಾನಿಕ್ ಕಳಿಸದೇ ಸಾವಿಗೆ ಕಾರಣರಾಗಿರುವ ಕೆ.ಎಸ್.ಆರ್.ಟಿ.ಸಿ. ಮ್ಯಾನೇ ಜರ್, ಚಾರ್ಜ್ ಮ್ಯಾನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿಭಟನೆಯಲ್ಲಿ ಭೀಮ್‌ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್, ರೈತ ಸಂಘದ ಅಧ್ಯಕ್ಷ ಗುರುಶಾಂತಪ್ಪ, ಜಯಕರ್ನಾಟಕದ ಸುನೀಲ್‌ಕುಮಾರ್, ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್ ಕೆಪಿಸಿಸಿ ವಕ್ತಾರ ಎಚ್ ಎಚ್ ದೇವರಾಜ್ ಮತ್ತಿತರರಿದ್ದರು.
Leave a comment