ಚಿಕ್ಕಮಗಳೂರು : ನಗರದ ಮಲ್ಲೇಗೌಡ ಜನರಲ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿದ್ದ ಮೋಹನ್ ಕುಮಾರ್ ರವರಿಗೆ ತುಮಕೂರು ಜಿಲ್ಲೆಗೆ ವರ್ಗಾವಣೆ ಆಗಿದೆ ಅವರ ಸ್ಥಾನಕ್ಕೆ ಚಿತ್ರದುರ್ಗದಲ್ಲಿ ಸಸ್ಪೆಂಡ್ ಆಗಿದ್ದ ಬಸವರಾಜು ಬರಲು ಕಾತುರರಾಗಿದ್ದಾರೆ ಎಂಬ ಮಾಹಿತಿ ಇದೆ.
ಡಾಕ್ಟರ್ ಮೋಹನ್ ಕುಮಾರ್ ಕಳೆದ ಐದು ವರ್ಷಗಳಿಂದ ಸೇವೆ ಸಲ್ಲಿಸಿ ಸಣ್ಣ ಪುಟ್ಟ ವ್ಯತ್ಯಾಸಗಳ ನಡುವೆ ಸಾರ್ವಜನಿಕರಿಗೆ ಸ್ಪಂದಿಸುವ ರೀತಿ ಸಮಾಧಾನಕರವಾಗಿದೆ. ಸಿಬ್ಬಂದಿ ಮತ್ತು ಸಾರ್ವಜನಿಕರೊಂದಿಗೆ ಮಂದಸ್ಮಿತರಾಗಿ ಬೆರೆತು ಈಗಾ ವರ್ಗಾವಣೆಯಾಗಿದ್ದಾರೆ.
ಮೋಹನ್ ಕುಮಾರ್ ಸ್ಥಾನಕ್ಕೆ ಬರುತ್ತಿರುವ ಬಸವರಾಜು ಹಿನ್ನೆಲೆ ವೃತ್ತಿಯಲ್ಲಿ ಸಮಾಧಾನ ತರುವುದಿಲ್ಲ .ಬಹುತೇಕ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿರುವ ಇವರನ್ನು ಕರೆಯುವ ಹಸು ಎಂದು ಕರೆಯುವುದು ಏಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.ಇನ್ನೂ ಕೇವಲ ಹದಿಮೂರು ತಿಂಗಳಲ್ಲಿ ನಿವೃತ್ತಿಯಾಗಲಿದ್ದು ಈಗಲೂ ಆಯಾಕಟ್ಟಿನ ಸ್ಥಳಕ್ಕೆ ಬರಲು ಹಣಬಲ ಮತ್ತು ರಾಜಕೀಯ ಬಲ ಬಳಸುತ್ತಿರುವುದರ ಗುಟ್ಟು ರಟ್ಟಾಗಿದ್ದರೂ ಯಾರು ಏನು ಮಾಡಲಾಗುತ್ತಿಲ್ಲ.
ಕಳೆದ ವರ್ಷ ಅರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದಾಗ ಆಸ್ಪತ್ರೆಯ ಅವ್ಯವಸ್ಥೆ ಮತ್ತು ಇವರ ನಡವಳಿಕೆ ಮತ್ತು ದೂರುಗಳ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಅಮಾನತು ಮಾಡಿ ತನಿಖೆಗೆ ಆದೇಶ ಮಾಡಿದ್ದರು. ಆದರೂ ಬಸವರಾಜು ಅಮಾನತು ಆದೇಶ ರದ್ದು ಪಡಿಸಿಕೊಂಡು ಬೀರೂರು ಆಸ್ಪತ್ರೆಗೆ ಬಂದು ಅಲ್ಲಿಂದ ಚನ್ನಗಿರಿ ಆಸ್ಪತ್ರೆಯಲ್ಲಿದ್ದಾರೆ.ಈಗಾ ಅಯಾ ಕಟ್ಟಿನ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ ಗೆ ಬರಲಿ ಸಕಲ ಸಿದ್ದತೆ ಮಾಡಿ ಟವೆಲ್ ಹಾಕಿ ನನ್ನ ಪ್ರಭಾವ ಎಂತದ್ದು ಎನ್ನುತ್ತಲೇ ಚಿಕ್ಕಮಗಳೂರಿಗೆ ಬರಲು ಸಜ್ಜಾಗಿದ್ದಾರಂತೆ.
ಇವರ ಬಗ್ಗೆ ಚಿತ್ರದುರ್ಗದ ಸಾರ್ವಜನಿಕರು ಮತ್ತು ಪತ್ರಕರ್ತರು ಹೇಳುವುದು ಕೇಳಿದರೆ ಚಿಕ್ಕಮಗಳೂರು ಆಸ್ಪತ್ರೆ ಕತೆ ಏನಾಗಬಹುದು ಎಂದು ಸಿಬ್ಬಂದಿವರ್ಗ ಯೋಚಿಸುವಂತಾಗಿದೆ .
ಸರಿಯಾದ ಕಾನೂನು, ಕಾಗುಣಿತ ಹೇಳುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ತನಿಖೆ ನಡೆಯುತ್ತಿರುವಾಗ ಆಡಳಿತಾತ್ಮಕ ಹುದ್ದೆಗೆ ವರ್ಗಾವಣೆ ಮಾಡುವುದು ಎಷ್ಟರಮಟ್ಟಿಗೆ ಸರಿ .ಅರೋಗ್ಯ ಮಂತ್ರಿ ಅಮಾನತು ಮಾಡಿದರೆ ಮುಖ್ಯಮಂತ್ರಿಗಳು ಅಯಾ ಕಟ್ಟಿನ ಸ್ಥಾನ ಕೊಟ್ಟರೆ ಸೋತರು ಬಂಪರ್ ಪ್ರೈಜ್ ಕೊಟ್ಟಂತಾಗುವುದಿಲ್ಲವೆ.ಇನ್ನೂ ಶಾಸಕ ತಮ್ಮಯ್ಯ ಈ ಬಗ್ಗೆ ವಿಚಾರಿಸಲು ಮೊಬೈಲ್ ಗೆ ಕರೆ ಮಾಡಿದರೆ ಸ್ವೀಕರಿಸದಷ್ಟು ಒತ್ತಡದಲ್ಲಿದ್ದಾರೆ.
Leave a comment