ಚಿಕ್ಕಮಗಳೂರು : ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ನಡೆದ ಜಾಟಪಟಿಯಲ್ಲಿ ಅಶ್ಲೀಲ ಪದ ಪ್ರಯೋಗ ನಂತರ ನಡೆದ ನಾಟಕೀಯ ಬೆಳವಣಿಗೆಗಳು ಆರೋಪ ಪ್ರತ್ಯಾರೋಪಗಳ ಮಧ್ಯೆ ಸಿ.ಟಿ.ರವಿಯವರಿಗೆ ಪೊಲೀಸ್ ಭದ್ರತೆ ನೀಡಿರುವುದು, ಸೈರನ್ ಮೂಲಕ ಎಸ್ಕಾರ್ಟ್ ಅನ್ನು ಒದಗಿಸಿರುವುದಕ್ಕೆ ತೀವ್ರ ಚರ್ಚೆ ಆರಂಭವಾಗಿದೆ.
ಸಿ.ಟಿ.ರವಿ ಸೋಲಿಸಿದ ತಮ್ಮಯ್ಯ ವಾಹನ ಸಂಚರಿಸುವ ವೇಳೆ ಸಿ.ಟಿ. ರವಿ ಕಾರಿನ ಹಿಂದೆ ಮುಂದೆ ಪೊಲೀಸ್ ಜೀಪ್ ಜೊತೆಗೆ ಸೈರನ್ ಸೌಂಡ್ ಕೇಳಿ ಕೆರಳಿದ ಕಾಂಗ್ರೆಸ್ ಮುಖಂಡರು ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ ಈ. ವೇಳೆ ಮೇಲಾಧಿಕಾರಿಗಳ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಉತ್ತರ ಬಂದಿದೆ.
ಸಿ.ಟಿ.ರವಿ ಕುಳಿತರು ಸುದ್ದಿ ನಿಂತರು ಸುದ್ದಿ ಇನ್ನೂ ಸೈರನ್ ಸೌಂಡ್ ಹಾಕಿಕೊಂಡು ಓಡಾಡಿದರೆ ಸುದ್ದಿ ಆಗಲ್ವಾ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕಳೆದ ಎಂಟು ದಿನಗಳಿಂದ ಎಡಬಿಡದೆ ಎಲ್ಲೆಲ್ಲೂ ಸುದ್ದಿಯಾಗುತ್ತಿರುವಾಗ ಎಸ್ಕಾರ್ಟ್ ಬಗ್ಗೆ ಕಾಂಗ್ರೆಸ್ ನ ಶಾಸಕರಿಗೂ ಎಸ್ಕಾರ್ಟ್ ಜೊತೆಗೆ ಸೈರನ್ ಗ್ಯಾರಂಟಿ ಒದಗಿಸಿ ಎಂದು ಆಗ್ರಹಿಸಿದರು ಆಶ್ಚರ್ಯವಿಲ್ಲ.
ಅಭಿವೃದ್ಧಿ ದೃಷ್ಟಿಯಿಂದ ನಾವೆಲ್ಲರೂ ಒಂದಾಗಿದ್ದೇವೆ ಎಂದು ಹೇಳಿದ್ದ ಶಾಸಕ ತಮ್ಮಯ್ಯ ಈಗ ಸೈರನ್ ಸೌಂಡ್ ಗೆ ತಿರುಗಿ ಬಿದ್ದಿರುವುದು ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರದಲ್ಲಿ ಖಾರವಾಗಿ ಟೀಕಿಸಿರುವುದು ಎಲ್ಲವೂ ಸರಿಯಿಲ್ಲ ಎನ್ನುತ್ತಲೇ ಸರ್ಕಾರಿ ನೌಕರರ ಸಂಘದ ದೇವೇಂದ್ರ ಪರ ನಿಂತು ಬೋಜೇಗೌಡರ ವಿರುದ್ದ ಹೆಜ್ಜೆ ಇಟ್ಟಿರುವುದು ನೋಡಿದರೆ ಒಗ್ಗಟ್ಟಿನಲ್ಲಿ ಒಡುಕು ಉಂಟಾಗಿದೆ. ಅಭಿವೃದ್ಧಿ ವಿಚಾರಕ್ಕಿಂತ ಅಸ್ತಿತ್ವದ ವಿಚಾರ ಬಂದಾಗ ಎದುರಾಳಿಗಳ ಬಾಯಿ ಮುಚ್ಚಿಸುತ್ತಾರೆ ಎಂಬುದು ಸತ್ಯವಾದಂತಿದೆ
Leave a comment