Home Crime News ಹಸುಗೂಸನ್ನೆ ಕತ್ತುಹಿಸುಕಿ ಕೊಂದರು….?
Crime NewsHomeLatest Newsnamma chikmagalurTarikere

ಹಸುಗೂಸನ್ನೆ ಕತ್ತುಹಿಸುಕಿ ಕೊಂದರು….?

Share
Share

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಹೃದಯವಿದ್ರಾವಕ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಮದುವೆಯಾಗದ ಮೊಮ್ಮಗಳು ಗರ್ಭಿಣಿಯಾದ ವಿಷಯ ಹೊರಗೆ ತಿಳಿದರೆ ಎಲ್ಲಿ ಗೌರವ ಹೋಗುತ್ತದೆಯೋ ಎಂಬ ಭಯಕ್ಕೆ, ಮಗು ಜನಿಸಿದ ಹುಟ್ಟಿದ ಕೇವಲ ಒಂದೇ ನಿಮಿಷಕ್ಕೆ ಗಂಡು ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ತರೀಕೆರೆ ತಾಲೂಕಿನಲ್ಲಿ ನಡೆದಿದೆ.

ಮದುವೆಗೆ ಮೊದಲೇ ಯುವತಿ ಗರ್ಭಿಣಿಯಾಗಿದ್ದು, ಕುಟುಂಬದ ಗೌರವದ ದೃಷ್ಟಿಯಿಂದ ಈ ವಿಷಯವನ್ನು ಗುಟ್ಟಾಗಿಡಲಾಗಿತ್ತು. ಕಳೆದ ೧೫ ದಿನಗಳ ಹಿಂದೆ ಮನೆಯಲ್ಲೇ ಯುವತಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.

ಆಸ್ಪತ್ರೆಗೆ ಹೋದರೆ ವಿಷಯ ಜಗಜ್ಜಾಹಿರಾಗುತ್ತದೆ ಎಂಬ ಕಾರಣಕ್ಕೆ, ನರ್ಸ್ ಆಗಿದ್ದ ಯುವತಿ ತನ್ನ ತಂದೆ-ತಾಯಿ ಮತ್ತು ಅಜ್ಜಿಯ ಸಹಾಯದಿಂದ ಮನೆಯಲ್ಲೇ ಹೆರಿಗೆ ಮಾಡಿಸಿಕೊಂಡಿದ್ದಾಳೆ.

ಮಗು ಹುಟ್ಟಿದ ತಕ್ಷಣ ಮನೆಯವರೆಲ್ಲಾ ಸೇರಿ ಕ್ರೂರ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಹಸುಗೂಸು ಕಣ್ಣು ಬಿಡುವ ಮೊದಲೇ, ಆಕೆಯ ಅಜ್ಜಿ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ
ಎನ್ನಲಾಗಿದೆ.

ನಂತರ ಮಗುವನ್ನು ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಹೋಗಿ, ಜನವಸತಿ ಇಲ್ಲದ ತಿಪ್ಪೆಯ ಗುಂಡಿಯೊಂದರಲ್ಲಿ ಹೂತು ಬಂದಿದ್ದಾರೆಂದು ಆರೋಪಿಸಲಾಗಿದೆ.

Did they strangle a cow and kill it?

Share

Leave a comment

Leave a Reply

Your email address will not be published. Required fields are marked *

Don't Miss

ಹಿರಿಯ ನಾಗರಿಕರಿಗೆ 3.12 ಲಕ್ಷ ರೂ ವಂಚನೆ

ಚಿಕ್ಕಮಗಳೂರು: ಸೈಬರ್ ಕ್ರಿಮಿನಲ್‌ಗಳ ಜಾಲಕ್ಕೆ ಸಿಲುಕಿ ಹಿರಿಯ ನಾಗರಿಕರೊಬ್ಬರು ಬರೋಬ್ಬರಿ 3.12 ಲಕ್ಷ ಕಳೆದುಕೊಂಡಿದ್ದಾರೆ. ನಗರದಲ್ಲಿ ವಾಸವಾಗಿರುವ 62 ವರ್ಷದ ವೆಂಕಟೇಶ್ ಇತ್ತೀಚೆಗೆ ಅವರ ಮೊಬೈಲ್‌ಗೆ ಬಂದಿದ್ದ ಒಂದು ಅಪರಿಚಿತ ಎಪಿಕೆ...

ಜಿಲ್ಲೆಯ ಒಟ್ಟು 15 ಮಂದಿಯ ಗಡಿಪಾರಿಗೆ ಶಿಫಾರಸ್ ಪತ್ರ

ಚಿಕ್ಕಮಗಳೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಭಜರಂಗದಳದ ಮುಖಂಡ ಶ್ಯಾಮ್ ವಿ ಗೌಡ, ಮುಸ್ಲಿಂ ಸಮುದಾಯದ 10 ಮಂದಿ ಸೇರಿ ಜಿಲ್ಲೆಯ ಒಟ್ಟು 15 ಮಂದಿಯ ಗಡಿಪಾರಿಗೆ ಜಿಲ್ಲಾ...

Related Articles

ಎಸ್.ಬಿದರೆಯ ಬೆಂಕಿ ಲಕ್ಷ್ಮೀ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ

ಕಡೂರು: ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿ ಎಸ್.ಬಿದರೆಯ ಬೆಂಕಿ ಲಕ್ಷ್ಮೀ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವವು ಮಂಗಳವಾರ ಶ್ರದ್ಧಾ...

ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿದ್ದ ಇಂದಿರಾ ಕ್ಯಾಂಟೀನ್ ಸ್ಥಳಾಂತರ

ಚಿಕ್ಕಮಗಳೂರು : ನಗರದ ಐ.ಜಿ. ರಸ್ತೆಯ ಬಸ್ ನಿಲ್ದಾಣದ ಸಮೀಪವಿರುವ ಇಂದಿರಾ ಕ್ಯಾಂಟೀನ್ ಅನ್ನು ಸ್ಥಳಾಂತರ...

ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳು ಮನೆ ಬಾಗಿಲಿಗೆ

ಚಿಕ್ಕಮಗಳೂರು: ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ...

ಶಾಸಕ ಜಿ.ಹೆಚ್. ಶ್ರೀನಿವಾಸ್ ವಿರುದ್ಧ ಪ್ರತಿಭಟನೆ

ಅಜ್ಜಂಪುರ : ಶಾಸಕ ಜಿ.ಹೆಚ್. ಶ್ರೀನಿವಾಸ್ ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು...