ಚಿಕ್ಕಮಗಳೂರು : ಗುಡ್ಡದ ತುದಿಯಲ್ಲಿ ನಿಂತರೆ ಮಾತ್ರ ಮತ್ತೊಂದು ಗುಡ್ಡದ ತುದಿ ಕಾಣುವುದು. ನಾನು ಗುಡ್ಡದ ಕೆಳಗೆ ನಿಂತು ನೋಡಿದರೆ ಏನು ಕಾಣಲಿಲ್ಲ ಎಂಬಂತ ಫಲಿತಾಂಶ ಚಿಕ್ಕಮಗಳೂರು ನೌಕರರ ಸಂಘದ ಚುನಾವಣೆಯಲ್ಲಿ ಬಂದಿದೆ.
ಕಳೆದ ಒಂದು ತಿಂಗಳಿಂದ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ನೌಕರರಿಗಿಂತ ರಾಜಕಾರಣಿಗಳು ಆಟ ಆಡ್ಡಿದ್ದು ಮಾತ್ರ ನಿಜ.
73 ಮತದಾರರಲ್ಲಿ 72 ಜನ ಮತ ಚಲಾವಣೆ ಮಾಡಿದ್ದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ದೇವೇಂದ್ರ ಅತ್ಯಧಿಕ 46 ಮತ ಪಡೆದು ಅಯ್ಕೆ ಆದರೆ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಪೂರ್ಣೇಶ್ 45 ಪಡೆದರೆ ರಾಜ್ಯ ಪರಿಷತ್ ಸ್ಥಾನಕ್ಕೆ ಮಂಜುನಾಥ್ ಎರಡು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಹೇಮಂತ್ ಬಣದ ಇಬ್ಬರು ಸೋತರೆ ಒಬ್ಬರು ಗೆದ್ದಿದ್ದಾರೆ.
ಕಳೆದ ಒಂದು ತಿಂಗಳಿಂದ ಜಿದ್ದಾ,ಜಿದ್ದಿನಲ್ಲಿ ಪೈಪೋಟಿ ನಡೆಸಿ ಆರೋಪ ,ಪ್ರತ್ಯಾರೋಪದಲ್ಲಿ ಮುಳುಗಿದ್ದ ಚುನಾವಣೆಯಲ್ಲಿ ನೌಕರರು ಸ್ವಾಭಿಮಾನ ಮೆರೆದಿದ್ದಾರೆ ಎಂದು ಹೇಳುವುದರ ಜೊತೆಗೆ ಕುತಂತ್ರಕ್ಕೆ ಉತ್ತರ ಕೊಟ್ಟಿದ್ದಾರೆ ಎಂದು ನೂತನವಾಗಿ ಅಯ್ಕೆಯಾಗಿರುವ ಅಧ್ಯಕ್ಷ ದೇವೇಂದ್ರ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ರಾದ ಎಸ್,ಎಲ್,ಬೋಜೇಗೌಡ ಮತ್ತು ಮಾಜಿ ಎಂ,ಎಲ್,ಸಿ ಗಾಯಿತ್ರಿ ಶಾಂತೇಗೌಡ ಹೇಮಂತ್ ಕುಮಾರ್ ಪರ ಬ್ಯಾಟಿಂಗ್ ಮಾಡಿ ಕ್ಲೀನ್ ಬೋಲ್ಡ್ ಆದರೆ ಕಾಂಗ್ರೆಸ್ ವಕ್ತಾರ ಹೆಚ್,ಹೆಚ್.ದೇವರಾಜ್ ಮ್ಯಾನ್ ಅಫ್ ದ ಮ್ಯಾಚ್ ಆಗಿದ್ದಾರೆ.
ರೆಸಾರ್ಟ್, ಗುಂಡು,ತುಂಡುಗಳಿಗೆ ನೌಕರರು ಬಲಿಯಾಗದೆ ಹೀಗೂ ಉಂಟೇ ಎಂಬ ಫಲಿತಾಂಶ ಬಂದಿದೆ.
ರಾಜಕಾರಣಿಗಳ ವಿರುದ್ದ ಶೆಡ್ಡು ಹೊಡೆದ ದೇವೇಂದ್ರನ ಶಕ್ತಿ ಮಾತ್ರ ನಿಗೂಢ. ಮಂಜುನಾಥ್ ಸ್ವಾಮಿಯನ್ನು ಗೌರವ ಅಧ್ಯಕ್ಷ ರನ್ನಾಗಿ ರಾಜ್ಯ ಪರಿಷತ್ ನಲ್ಲಿ ಸೋತ ಅಭ್ಯರ್ಥಿ ಚೇತನ್ ರಾಜ್ಯ ಮಂಡಳಿಗೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ಅವರನ್ನು ನೇಮಿಸಲಾಗಿದೆ.
Leave a comment