ಮೂಡಿಗೆರೆ: ಇದೀಗ ಡೀಮ್ಡ್ ಪ್ರದೇಶವನ್ನು ಪರಿಷ್ಕರಿಸಿ, ಡೀಮ್ಡ್ ೩ ಮಾಡಲು ಮುಂದಾಗಿರುವುದು ಸ್ವಾಗತಾರ್ಹ, ಈ ಪ್ರಕ್ರಿಯೆ ಕೂಡಲೇ ಪ್ರಾರಂಭಿಸಿ, ೧೦ ತಲೆಮಾರಿಗೆ ಆಗುವಷ್ಟು ಕೃಷಿ ಹಾಗೂ ನಿವೇಶನಕ್ಕೆ ಜಾಗ ಕಾಯ್ದಿರಿಸಬೇಕೆಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಒತ್ತಾಯಿಸಿದರು.
ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ಡೀಮ್ಡ್ ಮಾಡಿದ ಪ್ರದೇಶದಲ್ಲಿ ಕಾಡು ಇರಲಿಲ್ಲ. ಅಲ್ಲದೇ ಕಂದಾಯ ಇಲಾಖೆ ಗಮನಕ್ಕೆ ಬಾರದಂತೆ ಕಂದಾಯ ಭೂಮಿಯಲ್ಲಿ ಗಿಡಗಳನ್ನು ನೆಟ್ಟು ಡೀಮ್ಡ್ ಹೆಸರಿನಲ್ಲಿ ಅರಣ್ಯ ಇಲಾಖೆ ಭೂಮಿ ಆಕ್ರಮಿಸಿಕೊಂಡಿದೆ. ಡೀಮ್ಡ್ ೧ಕ್ಕಿಂದ ಡೀಮ್ಡ್ ೨ರಲ್ಲಿ ಕೃಷಿ ಭೂಮಿ ಹಾಗೂ ನಿವೇಶನಕ್ಕೆ ತೀವ್ರ ತೊಂದರೆ ಉಂಟಾಗಿತ್ತು. ಈಗ ಸುಪ್ರಿಂ ಕೋರ್ಟ್ ಡೀಮ್ಡ್ ಪ್ರದೇಶ ಪರಿಶೀಲಿಸಲು ಸೂಚಿಸಿದ್ದು, ಈ ಹಿನ್ನಲೆಯಲ್ಲಿ ಇದೀಗ ಡೀಮ್ಡ್ ೩ ಪ್ರಕ್ರಿಯೆ ಪ್ರಾರಂಭಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ೧೦ ತಲೆಮಾರಿಗಾಗುವಷ್ಟು ಭೂಮಿ ಮೀಸಲಿರಿಸಬೇಕೆಂದು ಆಗ್ರಹಿಸಿದರು.
ಡೀಮ್ಡ್ ೨ರಲ್ಲಾದ ಯಡವಟ್ಟು ಡೀಮ್ಡ್ ೩ ಪ್ರಕ್ರಿಯೆಯಲ್ಲಿ ಆಗಬಾರದು. ಅಧಿಕಾರಿಗಳು ಎಸಿ ಕೊಠಡಿಯಲ್ಲಿ ಕುಳಿತು ಬೇಕಾಬಿಟ್ಟಿ ಮಾಡಬಾರದು. ನಿವೇಶನ, ಶಾಲೆ, ಅಂಗನವಾಡಿ, ಆಟದ ಮೈಧಾನ ಸೇರಿದಂತೆ ಸಣ್ಣ ರೈತರಿಗೆ ಅನುಕೂಲಕ್ಕಾಗುವಂತೆ ಭೂಮಿಯನ್ನು ಮೀಸಲಿರಿಸಬೇಕು. ಅಲ್ಲದೇ ಜಿಲ್ಲಾಧಿಕಾರಿಗಳು, ಆಯಾ ತಾಲೂಕಿನ ತಹಸೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರು, ಗ್ರಾ.ಪಂ. ಅಧ್ಯಕ್ಷರು, ಪಿಡಿಒ ಗಳನ್ನೊಳಗೊಂಡಂತೆ ಸಮಿತಿ ರಚಿಸಿ, ಈ ಮೂಲಕ ಪಾರದರ್ಶಕವಾಗಿ ಡೀಮ್ಡ್ ೩ ಪ್ರಕ್ರಿಯೆ ನಡೆಸಬೇಕೆಂದು ಒತ್ತಾಯಿಸಿದರು.
Deemed 3 process should start immediately
Leave a comment