ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಚುನಾವಣೆ ಸೆಪ್ಟೆಂಬರ್ 13 ರಂದು ನಡೆಯಲಿದೆ. ಒಟ್ಟು 13 ನಿರ್ದೇಶಕ ಸ್ಥಾನಗಳಿಗೆ ನಡೆಯುವ ಚುನಾವಣೆ ಇದುವರೆವಿಗೂ ಕೂಲ್,ಕೂಲ್ ಆಗಿದೆ.ಕಾಂಗ್ರೆಸ್ ನ ನಡೆ ಕೂಡ ನಿಗೂಢವಾಗಿದೆ.
ಐದು ವರ್ಷಗಳ ಹಿಂದೆ ದಿವಂಗತ ಎಸ್.ಎಲ್.ಧರ್ಮೇಗೌಡರ ತಂಡ ಸೋಲಿಸಿದ ಬಿಜೆಪಿಯವರು ಇಂದು ಎಸ್.ಎಲ್.ಬೋಜೇಗೌಡರ ನಾಯಕತ್ವದಲ್ಲಿ ಚುನಾವಣೆ ನಡೆಸಲು ತಯಾರಿ ನಡೆಸಿದ್ದಾರೆ. ಜನತಾದಳಕ್ಕೆ ಎಷ್ಟು ಸ್ಥಾನ ಬಿಟ್ಟುಕೊಡತ್ತಾರೆ ಎಂಬದು ಚರ್ಚೆಯಲ್ಲಿ ಇದೆ.ಜನತಾದಳಕ್ಕೆ ಮೂರು ಸ್ಥಾನ ಕೇಳುತ್ತಿದ್ದಾರೆ ಆದರೆ ಎರಡು ಸ್ಥಾನ ದೊರೆಯಬಹುದು ಎನ್ನಲಾಗಿದೆ.
ಚಿಕ್ಕಮಗಳೂರು ತಾಲ್ಲೂಕಿನ ಎರಡು ಸ್ಥಾನಗಳಿಗೆ ಸ್ವತಃ ಬೋಜೇಗೌಡ ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ. ಇದರಿಂದ ನಿರಂಜನ್ ಮತ್ತೊಮ್ಮೆ ಬ್ಯಾಂಕ್ ಗೆ ಎಂಟ್ರಿ ಕೊಡಬಹುದು. ಕಡೂರು ತಾಲ್ಲೂಕಿನಿಂದ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ರಾಮಜ್ಜ ಮತ್ತೊಮ್ಮೆ ನಿರ್ದೇಶಕರಾಗಿ ಅಪೆಕ್ಸ್ ಬ್ಯಾಂಕ್ ಗೆ ಆಯ್ಕೆ ಖಚಿತ.
ತರೀಕೆರೆ ತಾಲ್ಲೂಕಿನ ಭಲೇ ಜೋಡಿ ಮಾಜಿ ಶಾಸಕರಾದ ಡಿ.ಎಸ್.ಸುರೇಶ್ ಮತ್ತು ಕೆ.ಆರ್.ಆನಂದಪ್ಪ ಮತ್ತೆ ಬ್ಯಾಂಕ್ ಗೆ ಬರುವುದು ಖಚಿತ. ಮೂಡಿಗೆರೆಯ ಒಂದು ಸ್ಥಾನಕ್ಕೆ ಹಳಸೆ ಶಿವಣ್ಣ ತೀರ್ಮಾನ ಅಂತಿಮ.
ಕೊಪ್ಪದಲ್ಲಿ ಕಾಂಗ್ರೆಸ್ ನ ರವೀಂದ್ರ ಕುಕ್ಕೂಡಿಗೆ ನಿರ್ದೇಶಕರಾಗಲು ತಯಾರಿ ನಡೆಸಿದ್ದು ಬಿಜೆಪಿ ಯಾವ ರೀತಿಯ ಟಕ್ಕರ್ ಕೊಡುತ್ತದೆ ಎಂಬುದು ನಿಗೂಢವಾಗಿದೆ. ಶೃಂಗೇರಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲ ಹೊಂದಿರುವುದರಿಂದ ಲಾಟರಿ ಯಾರ ಕೈ ಹಿಡಿಯುತ್ತದೆ ನೋಡಬೇಕು.
ಎನ್.ಆರ್ ಪುರದಲ್ಲಿ ಬಿಜೆಪಿ ಗೆ ಗೆಲುವು ಖಚಿತ. ಹಾಲು ಉತ್ಪಾದಕರ ಸಂಘಗಳಿಂದ ಸೋನಾಲ್ ಧರ್ಮೇಗೌಡಗೆ ಅವಕಾಶ ಹೆಚ್ಚಿದ್ದು ಕಡೂರಿನ ಸುರೇಶ್ ಮತ್ತು ಜಗದೀಶ್ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚು.
ಟಿ.ಎ.ಪಿ.ಸಿ.ಎಂ.ಎಸ್ ನಿಂದ ಶೃಂಗೇರಿ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಗೆ ಅನುವು ಮಾಡಿಕೊಡುವ ಸಾಧ್ಯತೆ ಹೆಚ್ಚು. ಇತರೆ ಸಹಕಾರ ಸಂಘಗಳಿಂದ ಹಾಲಿ ನಿರ್ದೇಶಕ ಟಿ.ಎಲ್.ರಮೇಶ್ ಸ್ಪರ್ಧೆ ಮಾಡುತ್ತಾರೆ ಎನ್ನುವಾಗ ಎರಡು ಸಾರಿ ಬಯಲು ಪ್ರದೇಶ ಕ್ಕೆ ಅವಕಾಶ ಕೊಡಲಾಗಿದೆ ಈ ಬಾರಿ ಚಿಕ್ಕಮಗಳೂರಿನವರಿಗೆ ಈಶ್ವರಳ್ಳಿ ಮಹೇಶ್ ಗೆ ಅವಕಾಶ ಮಾಡಿಕೊಡಬಹುದು ಎನ್ನಲಾಗಿದೆ.ಇದರ ಮಧ್ಯೆ ಜನತಾದಳದ ಎಂ.ನರೇಂದ್ರ ಪ್ರಯತ್ನ ನಡೆಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು ಜಿಲ್ಲೆಯ ಐದು ಜನ ಕಾಂಗ್ರೆಸ್ ಶಾಸಕರು ಯಾರನ್ನು ಯಾರು ಒಪ್ಪಿಕೊಂಡು ಅಪ್ಪಿ ಕೊಳ್ಳುತ್ತಾರೆ ಎಂಬುದು ನಿಗೂಢವಾಗಿದೆ.ಬಿಜೆಪಿಯಲ್ಲೂ ಅತೃಪ್ತಿ ಇದ್ದು ಸಹಕಾರ ಭಾರತಿ ಹೆಸರಿನಲ್ಲಿ ಮೂರು ಜನ ಸ್ಪರ್ಧೆ ಮಾಡುವ ಪ್ರಯತ್ನ ನಡೆಸಿರುವುದು ಕುತೂಹಲಕಾರಿಯಾಗಿದೆ.
DCC Bank elections are cool!
Leave a comment