ಚಿಕ್ಕಮಗಳೂರು : ವಿವಾದಿತ ಇನಾಮ್ ದತ್ತಾತ್ರೇಯ ಪೀಠಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕ ಮಾಡಿದ್ದ ಇಬ್ಬರು ಅರ್ಚಕರಲ್ಲಿ ಶೃಂಗೇರಿಯ ಶ್ರೀಧರ್ ರಾಜೀನಾಮೆ ನೀಡಿದ್ದಾರೆ. ವಯಕ್ತಿಕ ಕಾರಣಗಳನ್ನ ಕೊಟ್ಟು ಮುಜರಾಯಿ ಇಲಾಖೆಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಸದ್ಯ ದತ್ತಪೀಠದಲ್ಲಿ ತೀರ್ಥಹಳ್ಳಿ ಮೂಲದ ಶಿವರಾಮ್ ಭಟ್ ಕಾರ್ಯ ನಿರ್ವಹಿಸಿತ್ತಿದ್ದಾರೆ. ಅವರ ಜೊತೆಗೆ ಬಿಸಗ್ನಿ ಮಠದ ಮಹೇಶ್ ಅರ್ಚಕರಾಗಿ ನೇಮಿಸಲಾಗಿದೆ.
ಹೈಕೋರ್ಟ್ ನಿರ್ದೇಶನದಂತೆ ಈ ಹಿಂದೆ ಇಬ್ಬರು ಅರ್ಚಕರನ್ನು ನೇಮಿಸಲಾಗಿತ್ತು ಆದರೆ ವರ್ಷ ಕಳೆದರೂ ಸರಿಯಾಗಿ ದಸ್ತಕ್ ಅಂದರೆ ಗೌರವಧನ ಸರಿಯಾಗಿ ನೀಡುತ್ತಿಲ್ಲ ಎಂಬ ಆರೋಪ ಕೂಡ ಇತ್ತು. ಈ ಮಧ್ಯೆ ಅರ್ಚಕರಾದ ಶ್ರೀಧರ್ ತಮ್ಮ ಕೆಲಸದಿಂದ ನಿರ್ಗಮನ ಹೊಂದಿದ್ದಾರೆ. ಕೌಟುಂಬಿಕ ಕಾರಣಗಳನ್ನು ನೀಡಿ ರಾಜೀನಾಮೆ ನೀಡಿದ್ದರೂ ಕೂಡಾ ರಾಜ್ಯ ಸರ್ಕಾರ ಮುಜರಾಯಿ ಇಲಾಖೆ ಅವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಸಾಕಷ್ಟು ಬೇಸರ ವ್ಯಕ್ತಪಡಿಸುತ್ತಿದ್ರು ಇದೀಗ ದತ್ತಗುಹೆಯಲ್ಲಿ ಕುಂಕುಮ ಹಚ್ಚಿದ ಪ್ರಕರಣ ಹಸಿಯಾಗಿರುವ ನಡುವೆ ಅರ್ಚಕರ ಬದಲಾವಣೆ ದತ್ತ ಭಕ್ತರಲ್ಲಿ ಗೊಂದಲ ಹಾಗೂ ಬೇಸರ ಮೂಡಿರುವುದು ಮಾತ್ರ ಸುಳ್ಳಲ್ಲ
Leave a comment