Home namma chikmagalur ಜನರನ್ನು ದಾರಿ ತಪ್ಪಿಸಲು ಡಿ.ಕೆ.ಶಿವಕುಮಾರ್-ಸಿದ್ದರಾಮಯ್ಯ ನಾಟಕ
namma chikmagalurchikamagalurHomeLatest News

ಜನರನ್ನು ದಾರಿ ತಪ್ಪಿಸಲು ಡಿ.ಕೆ.ಶಿವಕುಮಾರ್-ಸಿದ್ದರಾಮಯ್ಯ ನಾಟಕ

Share
Share

ಚಿಕ್ಕಮಗಳೂರು: ಐದು ವರ್ಷ ಮುಖ್ಯಮಂತ್ರಿಯಾಗಿ ನಾನೇ ಇರ್ತಿನಿ ಅಂತ ಸಿದ್ಧರಾಮಯ್ಯ ಹೇಳುತ್ತಿದ್ದಾರೆ. ನೀವು ಇದ್ದೀ ರೋ ಇಲ್ವೋ, ನಿಮ್ಮ ಪಂಚೆಯನ್ನು ಬೇರೆಯವರು ಎಳೆಯುತ್ತಿದ್ದಾರೋ ಗೊತ್ತಿಲ್ಲ, ಆ ಕೆಲಸ ಮಾಡುತ್ತಿರುವರು ನಿಮ್ಮವರೆ ಹೊರತು ನಾವಲ್ಲ, ಜನರನ್ನು ದಾರಿ ತಪ್ಪಿಸಲು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನಾಟಕ ಮಾಡುತ್ತಿದ್ದಾರೆ. ಇವರ ನಾಟಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೃಪಾಪೋಷಿತ ನಾಟಕ ಮಂಡಳಿಯಾಗಿ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿಯಾಗಿ ಅವರನ್ನಾದರೂ ಮಾಡಿಕೊಳ್ಳಲಿ, ಇವರನ್ನಾದರೂ ಮಾಡಿಕೊಳ್ಳಲಿ ಮೊದಲು ರಾಜ್ಯದ ಜನಕ್ಕೆ ಒಳ್ಳೆಯದು ಮಾಡಲಿ ಎಂದು ರೈಲ್ವೆ ಮತ್ತು ಜಲಶಕ್ತಿ ಖಾತೆ ಸಚಿವ ವಿ.ಸೋಮಣ್ಣ ರಾಜ್ಯ ಸರ್ಕಾರವನ್ನು ಟೀಕಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಒಂದು ಕೆಲಸವಾದರೂ ನೆಪ್ಪು ನೇರಲಾಗಿ ನಡೆಯುತ್ತಿ ದೆಯೇ, ಇದರ ಬಗ್ಗೆ ಯೋಚನೆ ಮಾಡಿ, ಸಿದ್ದರಾಮಯ್ಯ ಸಾಹೇಬ್ರೆ ಕಳೆದೋಗಿದ್ದೀರಾ ಎಂದು ಹೇಳ್ತಿರ್ತಿನಿ, ಇವತ್ತು ಹೇಳ್ತೀನಿ, ನಿಮಗೆ ಯಾರು ತೊಂದರೆ ಮಾಡಿರುವುದು ನಾವ ಎಂದು ಪ್ರಶ್ನಿಸಿದ ಅವರು ನಿಮ್ಮ ಪಕ್ಷದವರೇ, ಮೊದಲು ಮಳೆಯಿಂದ ರಸ್ತೆಗಳೆಲ್ಲ ಗುಂಡಿ ಬಿದ್ದಿವೆ, ಗುಂಡಿ ಮುಚ್ಚಲು ಆಗಿಲ್ಲ, ಮತ್ತೊಂದು ಮಗದೊಂದಿಲ್ಲ, ಅವರ ಬಗ್ಗೆ ನೋಡಿ ಎಂದ ಅವರು ಡಿಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಳ ಒಪ್ಪಂದ ಮಾಡಿಕೊಂಡು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.

ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇಕ್ಕಟ್ಟು ಬಿಕ್ಕಟ್ಟು ಏನೂ ಇಲ್ಲ, ಹೈಕಮಾಂಡ್‌ಗೆ ಎಲ್ಲವೂ ಗೊತ್ತಿದೆ. ನನಗೆ ಮೋದಿ ಯವರು ಕೆಲಸ ಕೊಟ್ಟಿದ್ದಾರೆ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ರಾಷ್ಟ್ರೀಯ ಅಧ್ಯಕ್ಷರು ಆದ ಮೇಲೆ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ. ದೇಶಕ್ಕಾಗಿ ನಮ್ಮ ನಾಯಕರು ತಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಎಂದರು.

ಸಿ.ಟಿ.ರವಿಗೆ ರಾಜ್ಯಾಧ್ಯಕ್ಷ ಸ್ಥಾನದ ಹುದ್ದೆ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೋಮಣ್ಣ ಸಿ.ಟಿ.ರವಿಗೆ ಕೆಲಸ ವಿಲ್ಲ ಮತ್ತೊಂದಿಷ್ಟು ಜಾಸ್ತಿಯಾದರೂ ನಮಗೇನು ತೊಂದರೆ ಇಲ್ಲ. ಅಪ್ಪಾ.. ಒಂದು ನಿಮಿಷನಪ್ಪಾ… ಯಾಕಪ್ಪಾ ಹೀಗೆ ಮಾಡ್ತೀರಾ ತಂದೆ.. ಅವನೇನೋ ನನ್ನ ಜತೆ ಚೆನ್ನಾಗಿದ್ದನೆ. ನಾಳೆಯಿಂದ ಅವನು ಬರದಂತಾಗುತ್ತಾನೆ. ನನ್ನ ಕಿರಿಯ ತಮ್ಮ ಆತ್ಮೀಯತೆಯಿಂದ ಹೋಗಪ್ಪಾ ಬಾರಪ್ಪ ಅಂತೀವಿ. ನಮಗೆ ಪಾರ್ಟಿ ದೊಡ್ಡದು ಪಾರ್ಟಿಗಿಂತ ಪಕ್ಷದೊಡ್ಡದು ಎಂದು ರಾಜ್ಯಾಧ್ಯಕ್ಷದ ಸ್ಥಾನದ ಕುರಿತು ಹೇಳಿದರು.

D.K. Shivakumar-Siddaramaiah drama to mislead people

Share

Leave a comment

Leave a Reply

Your email address will not be published. Required fields are marked *

Don't Miss

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ-ಜಿಲ್ಲಾಧಿಕಾರಿ

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಇದೇ ಮಾರ್ಚ್ ೧೮ ರಿಂದ ಪ್ರಾರಂಭವಾಗಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು. ಜಿ.ಪಂ.ನ ಅಬ್ದುಲ್...

ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್‌ಗೆ ಕೊರತೆ ಇಲ್ಲ

ಚಿಕ್ಕಮಗಳೂರು, ಮಾ.೧೩: ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ ವಿತರಕರು ಗ್ರಾಹಕರ ಮನೆಬಾಗಿಲಿಗೆ ಸರಬರಾಜು ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ...

Related Articles

ವಿದ್ಯುತ್ ಸ್ಪರ್ಶಕ್ಕೆ ಯುವಕನ ಧಾರುಣ ಸಾವು

ಅಜ್ಜಂಪುರ: ವಿದ್ಯುತ್ ಸ್ಪರ್ಶದಿಂದ ಪ್ರವೀಣ್ ಎಂಬ ಯುವಕ ಮೃತಪಟ್ಟಿದ್ದಾನೆ ಸೊಕ್ಕೆ ಪರಮೇಶಣ್ಣ ಅವರ ಮಗ. ಹೆಬ್ಬೂರು...

ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಮನಸೋಇಚ್ಛೆ ಹಲ್ಲೆ

ಮೂಡಿಗೆರೆ:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿರುವ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ...

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ 25ಕ್ಕೂ ಹೆಚ್ಚುಕಡೆ ಬೆಂಕಿ

ಚಿಕ್ಕಮಗಳೂರು: ಬಿಸಿಲ ಬೇಗೆಗೆ ಅಪರೂಪದ ಶೋಲಾ ಹುಲ್ಲುಗಾವಲು  ಹೊತ್ತಿ ಉರಿಯುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ...

3.50 ಕೋಟಿ ರೂ ವೆಚ್ಚದ ವಿವಿಧ ರಸ್ತೆಗಳ ಲೋಕಾರ್ಪಣೆ

ಚಿಕ್ಕಮಗಳೂರು:  ಬಡವರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ...