ಚಿಕ್ಕಮಗಳೂರು : ಸಿ.ಟಿ ರವಿ ಒಳ್ಳೆಯ ಡ್ರಾಮಾ ಮಾಸ್ಟರ್ ಎಂಬ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಪಲ್ಲವಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಹಾಳಾಗಿರಲ್ಲ. ಡೀಪಾಗಿ ಒಂದು ಹೋಲ್ ಆಗಿದೆ, ಎರಡು ದಿನ ಬ್ಯಾಂಡೇಜ್ ಆಮೇಲೆ ತಲೆಗೆ ಔಷಧಿ ಹಾಕಬೇಕು. ಕೂದಲಿನ ಮೇಲೆ ಬ್ಯಾಂಡೇಜ್ ಸ್ಟಿಕರ್ ನಿಲ್ಲಲ್ಲ ಅಂತ ಈ ರೀತಿ ಬ್ಯಾಂಡೇಜ್ ಹಾಕಿದ್ದಾರೆ ಎಂದರು.
ಗಾಯ ಆಗಿಲ್ಲ ಅಂದ್ರೆ ಎಷ್ಟು ದಿನ ಅಂತ ನಾಟಕ ಮಾಡಲು ಆಗುತ್ತೆ, ಮ್ಯಾನ್ ಹ್ಯಾಂಡ್ಲಿಂಗ್ ಮಾಡಿ ಸುತ್ತಾಡಿಸಿರುವುದರಿಂದ ಅವರಿಗೆ ಜ್ವರ ಬಂದಿದೆ. ದಿನಾ ನಾಟಕ ಮಾಡೋರು ಅದೇ ರೀತಿ ಇರ್ತಾರೆ ಹೇಳೋರಿಗೇನು ಏನು ಬೇಕಾದರೂ ಹೇಳಬಹುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ತಿರುಗೇಟು ನೀಡಿದರು.
ಇದೇ ವೇಳೆ ಮಾತನಾಡಿದ ಅವರು ಸಿ.ಟಿ ರವಿಗೆ ಸಂಸ್ಕಾರ ಇಲ್ಲ ಅಂತ ನೀವು ಹೇಳಿದ್ದೀರಾ ಅಕ್ಕ ತಂಗಿ ಅಮ್ಮ ಹೆಂಡ್ತಿ ಇಲ್ಲ ಎಂಬ ಹೆಬ್ಬಾಳ್ಕರ್ ಹೇಳಿಕೆಗೆ ಅವರು, ಎಲ್ಲರೂ ಇದ್ದಾರೆ ಅಮ್ಮ ಇಲ್ಲದಿದ್ದರೆ ಭೂಮಿಗೆ ಬರೋದಾದ್ರು ಹೇಗೆ..?. ಸಿ.ಟಿ ರವಿಗೆ ಅವರದ್ದೇ ಆದ ಸಂಸ್ಕಾರವಿದೆ ಹಾಗಾಗಿ ಹೇಳೋದು ಲಕ್ಷ್ಮಿ ಅವರಿಗೆ ಹೇಳೋದು ರೂಢಿ ಅನ್ಸುತ್ತೆ. ಹೆಬ್ಬಾಳ್ಕರ್ ಅವರಿಗೆ ಒರಟುತನದ ಮಾತು ಅಭ್ಯಾಸ ಆಗಿ ಹೋಗಿದೆ ಸದನದ ಒಳಗೆ ನಡೆದಿದ್ದನ್ನು ನಮ್ಮವರವರೆಗೂ ಏಕೆ ತಂದ್ರು ಅರ್ಥ ಆಗ್ತಿಲ್ಲ. ರಾಜಕಾರಣಿ ಹೇಗಿರಬೇಕು ಅಂದ್ರೆ ನಾನು ಸಿ.ಟಿ ರವಿ ಅವರಿಂದ ಕಲಿತಿದ್ದೇನೆ. ತುಂಬಾ ಜನಕ್ಕೆ ಹೇಳ್ತೀನಿ ಸಿ.ಟಿ ರವಿ ಅವರ ಜೊತೆ ಇದ್ದರೆ ಊಟ ತಿಂಡಿ ಸಿಗಲ್ಲ ಅಂತ. ಬಿಪಿ ಶುಗರ್ ಇರೋರು ಅವರ ಜೊತೆ ಹೋಗಬೇಡಿ ಅಂತ ನಾನೇ ಹಲವರಿಗೆ ಹೇಳಿದ್ದೇನೆ ಎಂದು ತಿಳಿಸಿದರು.
Leave a comment