ಚಿಕ್ಕಮಗಳೂರು: ರಾಜ್ಯ ಸರ್ಕಾರದ ಸಹಕಾರ ಸಚಿವ ಕೆ.ಎನ್.ರಾಜಣ್ಣರವರಿಗೆ ಭರ್ತಿ 75 ವರ್ಷ. ರಾಜಣ್ಣ ಎಂದರೆ ನೇರ, ನೇರಾ ಸಿಡಿ ಗುಂಡಿನಂತಹ ಮಾತು ಜತೆಗೆ ಗತ್ತು .
ಹಟ ಎಂದರೆ ಹಟ ಮಾಜಿ ಪ್ರಧಾನಿ ದೇವೇಗೌಡರು ತುಮಕೂರಿನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಗೌಡರ ವಿರುದ್ಧ ರಣ ಕಹಳೆ ಊದಿ ಸೋಲಿಸಿದ್ದವರು ಈಗಲೂ ತಮ್ಮದೇ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಡಿಚ್ಚಿ ಕೊಡುತ್ತಾ ಇರುತ್ತಾರೆ.
ರಾಜಣ್ಣ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರು ರೇವಣ್ಣನ ಆಟ ನಡೆಯದಂತೆ ಬಂದುಬಸ್ತೂ ಮಾಡಿದ್ದಾರೆ.ಯಾರಿಗೂ ಕೇರ್ ಮಾಡದೆ ವಾಕ್ ದಾಳಿ ಮುಂದುವರೆಸಿದ್ದಾರೆ.ಪ್ರಜ್ವಲ್ ರೇವಣ್ಣನ ಸಿ.ಡಿ.ಕೇಸ್ ಗತಿಯ ದಿಕ್ಕು ಬದಲಿಸಿದರೆ ರಾಜಣ್ಣನನ್ನು ಹನಿ ಟ್ರಾಪ್ ಮಾಡಲು ಹೋದವರ ಮುಖಕ್ಕೆ ಹಣಿದು ಕಳುಹಿಸಿ ದೂರು ನೀಡಿದರು ಆಗಿಯೇ ತಣ್ಣಗಾದ ವಿಚಾರ ಮಾತ್ರ ನಿಗೂಢವಾಗಿದೆ.
ರೇವಣ್ಣನ ನಿಂಬೆ ಹಣ್ಣಿನ ಬಗ್ಗೆ ಕೇರ್ ಲೆಸ್ ಆದರೂ ಎಚ್ಚರಿಕೆಯಿಂದ ಇದ್ದವರು ಆದರೆ ಈಗ ಕಣ್ಣ ಮುಂದೆ ಮತ್ತೆ,ಮತ್ತೆ ನಿಂಬೆಹಣ್ಣು ಬರುತ್ತಿರುವುದು ಏಕೆ ?
ರಾಜಣ್ಣ ನಾಸ್ತಿಕ ಕೂಡ ದೇವರು,ಮಾಟ,ಮಂತ್ರದ ನಂಬದವರು ಈಗ ನಂಬುವಂತೆ ಆಗಿರುವುದು ಏಕೆ ?
ರಾಜಣ್ಣ ಹಾಸನ ಜಿಲ್ಲೆಗೆ ಎಂಟ್ರಿ ಕೊಡುವಾಗ ಹತ್ತಾರು ಕಾರುಗಳು, ಹಾರ,ತುರಾಯಿ ಪಟಾಕಿ ಶಬ್ದ ಇರುತ್ತವೆ. ಇತ್ತೀಚೆಗೆ ಭೇಟಿ ನೀಡಿದಾಗ ಕಾರ್ಯಕರ್ತರು ಹಚ್ಚಿದ ಪಟಾಕಿ ಸದ್ದು ಬೆಚ್ಚಿ ಬೀಳುವಂತೆ ಇತ್ತಂತೆ ಇದರಿಂದ ಕಾರು ಬಿಟ್ಟು ಇಳಿಯದ ರಾಜಣ್ಣ ಪಟಾಕಿ ಸಿಡಿತ ನಿಂತ ನಂತರ ಕಾರಿನಿಂದ ಇಳಿಯುವಾಗ ಗನ್ ಮ್ಯಾನ್ ಗಳ ರಕ್ಷಣೆ ನೂರಾರು ಕಾರ್ಯಕರ್ತರ ಪಡೆಯ ಮಧ್ಯೆ ನಿಂತಿರುವಾಗ ತಡವಾಗಿ ಸಿಡಿದ ಪಟಾಕಿಯ ಸಿಡಿ ಕಣ್ಣಿಗೆ ಬಡಿದಿದೆ ಹೌಹಾರಿದ ರಾಜಣ್ಣ ತಕ್ಷಣವೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ ಆದರೆ ಕಣ್ಣು ಸುಧಾರಣೆ ಆಗಿಲ್ಲ. ಆಗುವಂತೆ ಕೂಡ ಕಾಣುತ್ತಿಲ್ಲ ಎಂದು ಅವರ ಆಪ್ತ ವಲಯದಲ್ಲಿ ಚರ್ಚೆ ಆಗುತ್ತಿದೆ.
ಜೊತೆಗೆ ರೇವಣ್ಣನ ನಿಂಬೆಹಣ್ಣಿನ ಮೇಲೆ ಬಲವಾದ ಸಂಶಯ ಬಂದಿದೆ ನಾಸ್ತಿಕ ರಾಜಣ್ಣ ಕೂಡ ಎಡವಟ್ಟು ಆಗಿದೆ ಎಂದು ಶಪಿಸುತ್ತಾ ನನಗೆ ಹಾಸನ ಜಿಲ್ಲೆಯ ಉಸ್ತುವಾರಿ ಬೇಡ ಎನ್ನುತ್ತಿದ್ದಾರೆ ಎಂದು ಹಾಸನದ ಜನ ಮಾತನಾಡುತ್ತಿದ್ದಾರೆ.
Cooperation Minister Rajan’s eyes? Revanna’s lemon!
Leave a comment