ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಚುನಾವಣೆಯ ಪ್ರಕ್ರಿಯೆ ಪ್ರಾರಂಭವಾಗಿ ಒಂದು ತಿಂಗಳಾಗಿದೆ.ಅಂದರೆ 30_6_2025 ರಂದು ಅಧಿಸೂಚನೆ ಹೊರಡಿಸಲಾಗಿತ್ತು ಈಗಾಗಲೇ ಸಹಕಾರಿ ಸಂಘಗಳು ಡೆಲಿಗೇಷನ್ ಕಳುಹಿಸಿ ಕೊಟ್ಟಿವೆ.ಆದರೆ ಚುನಾವಣಾ ಅಧಿಕಾರಿಗಳು 14/1 ರಂತೆ ಚುನಾವಣೆಯ ಅಧಿಸೂಚನೆ ಹಿಂಪಡಿದಿದ್ದಾರೆ ಇದರಿಂದಾಗಿ ಚುನಾವಣೆ ಪ್ರಕ್ರಿಯೆಗಳಿಗೆ ತಡೆಯಾಗಿದೆ.
ಅಂತರಘಟ್ಟೆ ,ಲಿಂಗದಹಳ್ಳಿ,ದೊಡ್ಡ ಬೋಕಿಕೆರೆ,ಸೊಲ್ಲಾಪುರ ಸಹಕಾರ ಸಂಘಗಳು ಮತ್ತು ಯಗಟಿ ಹಾಲು ಉತ್ಪಾದಕರ ಸಂಘಗಳ ಆಕ್ಷೇಪಣೆಗಳನ್ನು ಕಾರಣ ನೀಡಲಾಗಿದೆ.ಆದರೆ ಆಕ್ಷೇಪಣೆ ಸಲ್ಲಿಸಲು ಸಮಯ ಕೊಡಲಾಗಿದೆ ಇದರಿಂದ ಬ್ಯಾಂಕ್ ವ್ಯವಸ್ಥೆ ಮತ್ತು ವಹಿವಾಟುನ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.
ರಾಜ್ಯದಲ್ಲಿ ಕೋಲಾರ ಮತ್ತು ಮೈಸೂರು ಸಹಕಾರ ಬ್ಯಾಂಕುಗಳನ್ನು ದಿವಾಳಿಗೆ ತಳ್ಳಿರುವ ಸರ್ಕಾರ ಈಗ ಚಿಕ್ಕಮಗಳೂರು ಸಹಕಾರ ಬ್ಯಾಂಕ್ ಮೇಲೆ ಕಣ್ಣಾಕಿದೆ ಎಂದು ಸಹಕಾರಿ ಕ್ಷೇತ್ರದ ಹಿರಿಯರ ಅಭಿಪ್ರಾಯ. ಸರ್ವೋಚ್ಛ ನ್ಯಾಯಾಲಯದ ತೀರ್ಪುನಂತೆ ಚುನಾವಣೆ ಪ್ರಕ್ರಿಯೆಗಳು ಪ್ರಾರಂಭವಾದ ಮೇಲೆ ಚುನಾವಣೆ ತಡೆಹಿಡಿಯುವ ಅವಕಾಶವಿಲ್ಲದಿದ್ದರು ಅಧಿಕಾರಸ್ಥರ ಒತ್ತಡದಿಂದ ಚುನಾವಣೆ ತಡೆಗಟ್ಟುವುದು ಎಷ್ಟರಮಟ್ಟಿಗೆ ಸರಿ ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವುದು ಖಚಿತ ಎಂದು ಎಸ್.ಎಲ್.ಬೋಜೇಗೌಡರು ತಿಳಿಸಿದ್ದಾರೆ.
ಕಾಂಗ್ರೆಸ್ ನವರು ಚುನಾವಣೆ ಎದುರಿಸಲು ಸಾಧ್ಯವಿಲ್ಲ ಹೀಗಾಗಿ ವಾಮ ಮಾರ್ಗ ಹಿಡಿದು ಚುನಾವಣೆ ಅಧಿಸೂಚನೆ ಹಿಂದೆ ಪಡೆಯಲು ಒತ್ತಡ ತಂದಿದ್ದಾರೆ ಎನ್ನಲಾಗಿದೆ. ಶಾಸಕರುಗಳಾದ ಹೆಚ್.ಡಿ.ತಮ್ಮಯ್ಯ, ಕೆ.ಎಸ್.ಆನಂದ್ ಮತ್ತು ಜಿ.ಹೆಚ್.ಶ್ರೀನಿವಾಸ್ ಚುನಾವಣೆ ನಡೆಸದಂತೆ ಸರ್ಕಾರದ ಮೇಲೆ ಒತ್ತಡ ತಂದಿರುವುದರಿಂದ ಚುನಾವಣೆ ತಡೆಯುವ ಪ್ರಯತ್ನ ನಡೆದಿದೆ ಎಂಬ ಸುದ್ದಿ ಗುಟ್ಟಾಗಿ ಉಳಿದಿಲ್ಲ.
ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೆರೆಸಿದರೆ ಅನಾಹುತ ಉಂಟಾಗಿ ಬ್ಯಾಂಕ್ ಗಳ ವ್ಯವಹಾರಕ್ಕೆ ಧಕ್ಕೆ ಉಂಟಾಗುತ್ತದೆ ಠೇವಣಿ ಇಟ್ಟವರು ಮತ್ತು ಸಾಲ ಪಡೆದು ವ್ಯವಹಾರ ನಡೆಸುವವರು ಮತ್ತು ಸಹಕಾರ ಸಂಘಗಳು ನಲುಗುವುದು ಗ್ಯಾರಂಟಿ.
ಸಹಕಾರ ರಂಗ ಈಗಾಗಲೇ ಅಧೋಗತಿಯತ್ತ ಸಾಗುತ್ತಿದೆ.ಕುಣಿಯಲಾರದವರಿಗೆ ನೆಲ ಡೊಂಕಾದ ರೀತಿಯಲ್ಲಿ ಚುನಾವಣೆ ತಡೆಯುವುವವರು ರೈತರ ಹಿತಾಸಕ್ತಿ ಮರೆಯಬಾರದು .
Conspiracy to bankrupt DCC Bank?
Leave a comment