ಅಜ್ಜಂಪುರ: ಅಜ್ಜಂಪುರದ ಪಟ್ಟಣ ಪಂಚಾಯತಿ ಚುನಾವಣೆ ಮುಗಿದು ಗೆಲುವು ಸೋಲಿನ ಲೆಕ್ಕಾಚಾರದಲ್ಲಿ ಎರಡು ಪಕ್ಷದ ಮುಖಂಡರು ಮತ್ತು ಸ್ಪರ್ಧೆಗಳು ಅವರವರ ಮೂಗಿನ ನೇರಕ್ಕೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನವರು ಒಂದು ಸೋತು ಹತ್ತು ಸ್ಥಾನ ಗೆಲುತ್ತೇವೆ ಎನ್ನುತ್ತಿದ್ದವರು ಈಗ ನಾವು ಅಧಿಕಾರಕ್ಕೆ ಬರುತ್ತೇವೆ ಎನ್ನುತ್ತಿದ್ದಾರೆ. ಬಿಜೆಪಿಯವರು ಏಳು ಸ್ಥಾನ ಪಡೆಯುವುದರಲ್ಲಿ ಅನುಮಾನ ಇಲ್ಲವೇ ಇಲ್ಲ ಎನ್ನುತ್ತಿದ್ದಾರೆ.
ಕೊನೆಯ ಎರಡು ದಿನದಲ್ಲಿ ಅಧಿಕಾರ ಮತ್ತು ಧನಬಲ V/S ಜನಬಲ ಎನ್ನುವಂತಾಯಿತು ಎಂದು ಜನ ಮಾತನಾಡುತ್ತಿದ್ದಾರೆ. ಸಣ್ಣಪುಟ್ಟ ಚುನಾವಣೆಯಲ್ಲಿ ಐವತ್ತು ಲಕ್ಷ ರೂಗಳಿಗಿಂತ ಹೆಚ್ಚು ಖರ್ಚು ಮಾಡಿರುವ ಅಭ್ಯರ್ಥಿಗಳು ಇದ್ದಾರೆ.ಫ್ಯಾನ್,ಕುಕ್ಕರ್, ಮೂಗುಬೊಟ್ಟು,ಕುರಿ,ಕೋಳಿ, ಮಧ್ಯ ಮತ್ತು ಹಣ ಹಂಚಿಕೆ ಎಗ್ಗಿಲ್ಲದೆ ಹಂಚಿಕೆ ಮಾಡುವುದರ ಜೊತೆಗೆ ಅಣೆ-ಪ್ರಮಾಣ ಕೂಡ ನಡೆದಿದೆ ಎಂಬ ಮಾತುಗಳು ಕೇಳಿಬಂದವು.
ಶಾಸಕ ಶ್ರೀನಿವಾಸ್ ಮತ್ತು ಅವರ ಕುಟುಂಬದವರು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಮಾಜಿ ಶಾಸಕರುಗಳಾದ ಡಿ.ಎಸ್.ಸುರೇಶ್ ಮತ್ತು ಎಸ್.ಎಂ.ನಾಗರಾಜ್ ಕೂಡ ಪ್ರತಿಷ್ಠೆಯಾಗಿ ಚುನಾವಣೆ ನಡೆಸಿದರು ಎಂಬ ಮಾತುಗಳಿವೆ. ಒಂದನೆಯ ವಾರ್ಡ್ ನಲ್ಲಿ ಬಿಜೆಪಿಯ ಕವಿತಾ ಅವರ ಗೆಲುವು ನಿಶ್ಚಿತ. ಕಾಂಗ್ರೆಸ್ ನ ಮಾಲಾ ಸುರೇಶ್ ಗೆ ಕಷ್ಟ.
ಎರಡನೆಯ ವಾರ್ಡ್ ನಲ್ಲಿ ಬಿಜೆಪಿಯ ಮಲ್ಲಿಕಾರ್ಜುನ್ ಗೆಲುವಿನ ಸಮೀಪದಲ್ಲಿ ಇದ್ದಾರೆ ಎಂದರು ಕೂಡ ಕಾಂಗ್ರೆಸ್ ನ ಜೋಗಿ ಪ್ರಕಾಶ್ ಭರ್ಜರಿ ಪೈಪೋಟಿ ನೀಡಿ ನಮ್ಮದೆ ಗೆಲುವು ಎನ್ನುತ್ತಿದ್ದಾರೆ. ಮೂರನೆಯ ವಾರ್ಡ್ನಲ್ಲಿ ಕಾಂಗ್ರೆಸ್ ನ ನಿಸಾರ್ ಅಹಮದ್ ಗೆಲುವಿನ ಸಮೀಪದಲ್ಲಿ ಇದ್ದಾರೆ.ಆದರೆ ಪಕ್ಷೇತರ ಅಭ್ಯರ್ಥಿ ಷಡಕ್ಷರಿಯವರನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ದಳದ ಎಸ್ ಶಿವಾನಂದ್ ರವರಿಗೆ ಮೈತ್ರಿ ಪಕ್ಷದ ಬಿಜೆಪಿಯವರ ಅಸಹಕಾರದಿಂದಾಗಿ ತುಂಬ ಕಷ್ಟ.
ನಾಲ್ಕನೆಯ ವಾರ್ಡ್ನಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಪರಿಣಾಮ ಕಾಂಗ್ರೆಸ್ ಮಹಿಳಾ ಅಭ್ಯರ್ಥಿ ರತ್ನಮ್ಮ ಮತ್ತು ಬಿಜೆಪಿಯಿಂದ ರೇವಣ್ಣರ ಮಧ್ಯೆ ನೇರ ನೇರ ಪೈಪೋಟಿ ನಡೆದಿದ್ದು ರೇವಣ್ಣ ಕೂದಲೆಳೆಯ ಅಂತರದಲ್ಲಿ ಮುನ್ನಗ್ಗುವ ಮಾತುಗಳು ಕೇಳಿ ಬರುತ್ತಿವೆ.ಕಾಂಗ್ರೆಸ್ ನ ನಿರ್ಲಕ್ಷ್ಯ ಮಾಡುವಂತಿಲ್ಲ.
ಐದನೆಯ ವಾರ್ಡ್ನಲ್ಲಿ ಅತಿ ಹೆಚ್ಚು ಜನರು ಸ್ಪರ್ಧೆ ಮಾಡಿದ್ದು ಕಾಂಗ್ರೆಸ್ ಅಣ್ಣಪ್ಪ ವಿರುದ್ಧ ಬಿಜೆಪಿಯ ಪ್ರಕಾಶ್ ಸೆಣಸಾಡಿದ್ದಾರೆ.ಇಲ್ಲಿ ಪಕ್ಷೇತರರಾಗಿ ಬಿ.ಅನಂದ್ ಕುಮಾರ್,ಶ್ರೀನಿವಾಸ್, ಎಸ್,ಕುಮಾರ್ ಮತ್ತು ಸುನಂದಾ, ಡಿ.ಪಿ.ಲತಾ, ಸ್ಪರ್ಧೆಯಿಂದ ಫಲಿತಾಂಶ ನಿಖರವಾಗಿ ಹೇಳುವುದು ಕಷ್ಟ. ಕಾಂಗ್ರೆಸ್ ಮುನ್ನಡೆ ಇದ್ದರು ಬಿಜೆಪಿ ನಿರ್ಲಕ್ಷ್ಯ ಮಾಡುವಂತಿಲ್ಲ.
ಆರನೆಯ ವಾರ್ಡ್ ನಲ್ಲಿ ರೋಚಕ ಚುನಾವಣೆ ನಡೆದಿದೆ ಪ್ರಾರಂಭದಿಂದಲೂ ರಂಗಸ್ವಾಮಿ ಮುನ್ನಡೆ ಇದ್ದರೂ ಕೊನೆಯ ಎರಡು ದಿನ ಶಾಸಕರ ಮಗಳ ಚಮತ್ಕಾರ ಡಲ್ ನಂತೆ ಕಂಡರೂ ಜಿಂಕೆ ಮರಿ ರಂಗಸ್ವಾಮಿ ಗೆಲುವು ತಡೆಯಲು ಸಾಧ್ಯವಾಗುವುದಿಲ್ಲ .ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಸುಲಭವಾಗಿ ಸೋಲಬಹುದು ಎಂಬ ಅಂತರ ಕಡಿಮೆ ಮಾಡಿಕೊಳ್ಳ ಬಹುದು.
ಏಳನೆಯ ವಾರ್ಡ್ ಬಿಜೆಪಿ ಯ ಎನ್,ಪೂಜಾ ಮತ್ತು ಕಾಂಗ್ರೆಸ್ ನ ಎನ್.ಸುಮಲತಾರ ಮಧ್ಯೆ ಪಕ್ಷೇತರರಾದ ರೇಖಾ ಮತ್ತು ಮೇಘನಾ ಯಾರನ್ನೂ ಸುಲುಭವಾಗಿ ಗೆಲ್ಲಲು ತಡೆ ಒಡ್ಡಿದ್ದಾರೆ.ನಿಖರ ಫಲಿತಾಂಶ ಹೇಳಲು ಜನರಿಗೆ ಕಷ್ಟವಾಗಿದೆ. ಎಂಟನೆಯ ವಾರ್ಡ್ನಲ್ಲಿ ಕಾಂಗ್ರೆಸ್ ತೀರ್ಥಪ್ರಸಾದ್ ಸುಲಭವಾಗಿ ಗೆಲ್ಲುವ ಅವಕಾಶಕ್ಕೆ ಕೊನೆಯ ಎರಡು ದಿನಗಳಲ್ಲಿ ಬಿಜೆಪಿಯ ಸಂತೋಷ್ ತೀವ್ರ ಪೈಪೋಟಿ ನೀಡಿದ್ದಾರೆ. ಆದರೂ ಕಾಂಗ್ರೆಸ್ ಸ್ವಲ್ಪ ಮುನ್ನಡೆ ಇರಬಹುದು ಹೆಚ್ಚು ಕಡಿಮೆ ಆದರು ಆಶ್ಚರ್ಯ ಇಲ್ಲ. ಏಕೆಂದರೆ ಗೆದ್ದಾಗಿದೆ ಎಂಬ ಹುರುಪು ಉಲ್ಟಾ ಪಲ್ಟಾ ಮಾಡಲು ಬಹುದು.
ಒಂಬತ್ತನೆಯ ವಾರ್ಡ್ನಲ್ಲಿ ಬಿಜೆಪಿ ಮಧುಸೂದನ್ ಸುಲುಭವಾಗಿ ಗೆಲ್ಲುವ ಅವಕಾಶಕ್ಕೆ ಸ್ವಲ್ಪ ಬ್ರೇಕ್ ಹಾಕಲು ನವೀನ್ ಪ್ರಯತ್ನ ಅಷ್ಟೇ ಮಾಡಿದ್ದಾರೆ. ಹತ್ತನೆಯ ವಾರ್ಡ್ನಲ್ಲಿ ಕಾಂಗ್ರೆಸ್ ನ ಮೇಘನಾ ಮತ್ತು ಬಿಜೆಪಿಯ ಬಿಂದು ಮಧ್ಯೆ ತೀವ್ರ ಸ್ಪರ್ಧೆಯಲ್ಲಿ ಪೈಪೋಟಿ ಹೆಚ್ಚಾಗಿ ಫಲಿತಾಂಶ ಕಷ್ಟ ಎನ್ನುತ್ತಿದ್ದಾರೆ. ಹನ್ನೊಂದನೆಯ ವಾರ್ಡ್ನಲ್ಲಿ ಕಾಂಗ್ರೆಸ್ ನ ಕವಿತಾ ಮತ್ತು ಬಿಜೆಪಿಯ ಶೋಭ ಮಧ್ಯೆ ಸ್ಪರ್ಧೆ ನಡೆದಿದ್ದು ಬಿಜೆಪಿ ಮುನ್ನಡೆ ಕಂಡುಕೊಂಡಂತೆ ಕಾಣುತ್ತಿದೆ.
ನ್ಯೂಸ್ ಕಿಂಗ್ ಸಮೀಕ್ಷೆಯಂತೆ ಕಾಂಗ್ರೆಸ್ ನಾಲ್ಕು ಸ್ಥಾನ ಸುಲಭವಾಗಿ ಗೆದ್ದರೆ ಬಿಜೆಪಿ ಕೂಡ ನಾಲ್ಕು ಸ್ಥಾನ ಗೆಲ್ಲುವುದು ಖಚಿತ.ಇನ್ನುಳಿದ ಮೂರು ಸ್ಥಾನಗಳ ಗೆಲುವು ಆತಂತ್ರ ಎಂಬ ಲೆಕ್ಕಾಚಾರ ಕಂಡುಬರುತ್ತದೆ. ಇನ್ನೊಂದು ದಿನ ಹೀಗೆ ಲೆಕ್ಕಾಚಾರ ಮಾಡುವುದು ಸಹಜ.
Congress-BJP back-and-forth calculations
Leave a comment