Home namma chikmagalur chikamagalur ಸಖರಾಯಪಟ್ಟಣದಲ್ಲಿ ಸಿನಿಮಾ ಶೈಲಿಯ ದರೋಡೆ
chikamagalurHomeLatest Newsnamma chikmagalur

ಸಖರಾಯಪಟ್ಟಣದಲ್ಲಿ ಸಿನಿಮಾ ಶೈಲಿಯ ದರೋಡೆ

Share
Share

ಚಿಕ್ಕಮಗಳೂರು: ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿನಿಮಾ ಶೈಲಿಯ ದರೋಡೆ ಪ್ರಕರಣವೊಂದು ನಡೆದಿದ್ದು, ಲಿಫ್ಟ್ ಕೇಳುವ ನೆಪದಲ್ಲಿ ಕಾರು ಹತ್ತಿದ ಮಹಿಳೆಯರಿಬ್ಬರು ದರೋಡೆಕೋರರೊಂದಿಗೆ ಸೇರಿ ಹಣ ಮತ್ತು ಮೊಬೈಲ್ ದೋಚಿದ್ದಾರೆ.

ತುಮಕೂರು ಜಿಲ್ಲೆಯ ಪ್ರವೀಣ್ ಮತ್ತು ಚೇತನ್ ಎಂಬುವವರು ಕಡೂರಿನಿಂದ ಚಿಕ್ಕಮಗಳೂರಿಗೆ ಕಾರಿನಲ್ಲಿ ಹೊರಟಿದ್ದಾಗ, ಪರಿಚಯಸ್ಥರ ಶಿಫಾರಸಿನ ಮೇರೆಗೆ ಶ್ರಾವ್ಯ ಮತ್ತು ಕಾವ್ಯ ಎಂಬ ಹೆಸರಿನ ಇಬ್ಬರು ಮಹಿಳೆಯರನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದರು.

ಮಾರ್ಗಮಧ್ಯೆ ಹಿರೇಗೌಜ ಬಸ್ ನಿಲ್ದಾಣದ ಬಳಿ ವಿಡಿಯೋ ಕಾಲ್ ಮಾಡುವ ನೆಪದಲ್ಲಿ ಕಾರನ್ನು ನಿಲ್ಲಿಸಿದ ಮಹಿಳೆಯರು, ಅಲ್ಲಿಯೇ ಹೊಂಚು ಹಾಕಿದ್ದ ಐವರು ದರೋಡೆಕೋರರ ಗುಂಪಿಗೆ ದಾರಿ ಮಾಡಿಕೊಟ್ಟಿದ್ದಾರೆ. ಕಾರಿಗೆ ಅಡ್ಡಬಂದ ದುಷ್ಕರ್ಮಿಗಳು ಪ್ರವೀಣ್ ಮತ್ತು ಚೇತನ್ ಮೇಲೆ ಹಲ್ಲೆ ನಡೆಸಿ, ಚಾಕು ತೋರಿಸಿ ಬೆದರಿಸಿ ಪರ್ಸ್ ಹಾಗೂ ಬೆಲೆಬಾಳುವ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡಿದ್ದಾರೆ.

ಈ ವೇಳೆ ಪ್ರವೀಣ್ ಗುಟ್ಟಾಗಿ ತಮ್ಮ ಸ್ನೇಹಿತ ಮಂಜುನಾಥ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಮಂಜುನಾಥ್ ಮತ್ತು ಅವರ ಸ್ನೇಹಿತರು ದರೋಡೆಕೋರರು ಇದ್ದ ಕಾರನ್ನು ಹಿಂಬಾಲಿಸಿ ಹಿರೇಗೌಜ ಕ್ರಾಸ್ ಬಳಿ ಅಡ್ಡಗಟ್ಟಿದ್ದಾರೆ. ಸ್ಥಳೀಯರ ಸಹಾಯದಿಂದ ರಮೇಶ್, ನವೀನ್, ರಘು, ಹರೀಶ್ ಹಾಗೂ ಶ್ರಾವ್ಯ (ವೀಣಾ) ಮತ್ತು ಕಾವ್ಯ (ಮಧು) ಎಂಬುವವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

ತಪ್ಪಿಸಿಕೊಂಡಿರುವ ಸುಹಾಸ್ ಎಂಬಾತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಬಂಧಿತರಿಂದ ನಗದು ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Cinema-style robbery in Sakharayapattana

Share

Leave a comment

Leave a Reply

Your email address will not be published. Required fields are marked *

Don't Miss

ದೇವನೂರು ಸರ್ಕಾರಿ ಶಾಲೆ ನೂತನ ಕಟ್ಟಡ ಜೂನ್‌ನಲ್ಲಿ ಉದ್ಘಾಟನೆ

ಚಿಕ್ಕಮಗಳೂರು: ಕಡೂರು ತಾಲ್ಲೂಕು ದೇವನೂರಿನ ಸರ್ಕಾರಿ ಶಾಲೆಯಲ್ಲಿ ೧೨೨ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ೫೦ ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ೪ ಶಾಲಾ ಕೊಠಡಿ, ಪ್ರತ್ಯೇಕ ಶೌಚಾಲಯ ನಿರ್ಮಾಣದ ಜೊತೆಗೆ ಅಗತ್ಯ...

ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ಸರ್ವಕಾಲಿಕ ದಾಖಲೆಯ ಬಜೆಟ್ ಆಗಲಿದೆ

ಚಿಕ್ಕಮಗಳೂರು: ಸಿದ್ದರಾಮಯ್ಯನವರು ಮಂಡಿಸಲಿರುವ ಬಜೆಟ್ ಸರ್ವಕಾಲಿಕ ದಾಖಲೆಯ ಬಜೆಟ್ ಆಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಭವಿಷ್ಯ ನುಡಿದರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರದ ಆರ್ಥಿಕ ನೀತಿ ಹಾಗೂ ಮುಂಬರುವ ಬಜೆಟ್...

Related Articles

ರೆಸಾರ್ಟ್‌ನಲ್ಲಿ ಹೌಸ್ ಕೀಪಿಂಗ್ ಮೇಲೆ ಹಲ್ಲೆ- ಮೊಬೈಲ್ ಕಳವು

ಚಿಕ್ಕಮಗಳೂರು: ರೆಸಾರ್ಟ್ ಸಿಬ್ಬಂದಿಯೊಬ್ಬರು ಸಂಚಿಗೆ ಬಲಿಯಾಗಿ ಹಣ ಹಾಗೂ ಮೊಬೈಲ್ ಕಳೆದುಕೊಂಡಿದ್ದಾರೆ. ಕಳಸ ತಾಲ್ಲೂಕಿನ ರಿವರ್...

ಅಂಗನವಾಡಿ ಶಿಕ್ಷಕಿಯ ನಿರ್ಲಕ್ಷ್ಯ-ಪುಟ್ಟ ಕಂದಮ್ಮನ ಮರ್ಮಾಂಗಕ್ಕೆ ಗಾಯ

ಚಿಕ್ಕಮಗಳೂರು: ಅಂಗನವಾಡಿಗೆ ಮಕ್ಕಳನ್ನು ಕಳುಹಿಸುವ ಪೋಷಕರು ಓದಲೇ ಬೇಕಾದ ಸುದ್ದಿ ಇದು. ಅಂಗನವಾಡಿ ಶಿಕ್ಷಕಿಯ ನಿರ್ಲಕ್ಷ್ಯದಿಂದ...

ಮೋಟಾರ್ ಬೈಕ್‌ ಗೆ ಜೆಸಿಬಿ ಡಿಕ್ಕಿ – ವ್ಯಕ್ತಿ ಸಾವು

ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಗಸರಹಳ್ಳಿ ರಸ್ತೆಯಲ್ಲಿ ಜೆಸಿಬಿ ಚಾಲಕನ ಬೇಜವಾಬ್ದಾರಿಯಿಂದ ನಡೆದ ಅಪಘಾತದಲ್ಲಿ...

ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು-ಇಬ್ಬರು ಆರೋಪಿಗಳ ಬಂಧನ

ಚಿಕ್ಕಮಗಳೂರು:  ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು...