ಚಿಕ್ಕಮಗಳೂರು :
ರಾಜ್ಯಾದ್ಯಂತ ಒಕ್ಕಲಿಗರ ಕಣ್ಣು ಕೆಂಪಗಾಗಿಸಿದ್ದ ಕರಿಯಾ ಪದ ಬಳಕೆ ಇದೀಗ ಕಾನೂನು ಹೋರಾಟದ ಸ್ವರೂಪ ಪಡೆದುಕೊಂಡಿದೆ. ಜನಾಂಗೀಯ ನಿಂದಣೆ ಪ್ರಕರಣ ಒಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರನ್ನು ‘ಕರಿಯ’ ಎಂದು ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಕರೆದಿರುವುದನ್ನು ಖಂಡಿಸಿ ಚಿಕ್ಕಮಗಳೂರು ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಎಂಬುವವರು ಕೊಪ್ಪ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಉರ್ದು ಭಾಷೆಯಲ್ಲಿ ಕಾಲಿಯಾ,, ಅಂದರೆ ಕರಿಯಸ ಎಂದು ಕರೆದು ನಿಂದಿಸಿದ್ದು.
ಜಮೀರ್ ಅಹ್ಮದ್ ರವರ ಹೇಳಿಕೆಯು ಜನಾಂಗೀಯ ನಿಂದನೆ ಹಾಗೂ ವರ್ಣಭೇದ ನೀತಿಯನ್ನು ಪ್ರಚೋದಿಸುವಂತಿದ್ದು. ಅಲ್ಲದೇ ದೇವೇಗೌಡರ ಕುಟುಂಬದ ವಿರುದ್ಧ ಕೋಮು ಸೌಹಾರ್ದವನ್ನು ಕೆಣಕಿ ಸಮಾಜದಲ್ಲಿ ಶಾಂತಿ ಭಂಗ ಉಂಟು ಮಾಡುವ ಹೇಳಿಕೆ ಯೊಂದನ್ನು ನೀಡಿರುವ ಕಾರಣ ತಕ್ಷಣ ಜಮೀರ್ ಅಹ್ಮದ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
Leave a comment