ತರೀಕೆರೆ: ತಾಲ್ಲೂಕು ವ್ಯವಸಾಯ ಉತ್ಪನ್ನಗಳ ಸಹಕಾರ ಸಂಘದ ಅಧ್ಯಕ್ಷರಾಗಿ ಜನತಾದಳದ ಎಂ.ನರೇಂದ್ರ ಬಿಜೆಪಿ ಶರತ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಟಿ,ಎ,ಪಿ,ಸಿ,ಎಂ,ಎಸ್ ನ ನಿರ್ದೇಶಕ ಸ್ಥಾನದ ಚುನಾವಣೆ ಕಳೆದ ವಾರ ನಡೆದಿತ್ತು.ಆಗಾ ಜನತಾದಳದ ಎಂ.ನರೇಂದ್ರ ಕಾಂಗ್ರೆಸ್ ನವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ದಳದ ನಾಲ್ಕು ಮತ್ತು ಕಾಂಗ್ರೆಸ್ ನ ನಾಲ್ಕು ಸ್ಥಾನ ಗೆದ್ದು ಮೀಸೆ ತಿರುವುತ್ತಿದ್ದರು.ಮಾಜಿ ಶಾಸಕ ಡಿ.ಎಸ್.ಸುರೇಶ್ ರ ನಿರ್ಲಕ್ಷ್ಯತನದಿಂದ ಆರು ಸ್ಥಾನವನ್ನು ಬಿಜೆಪಿ ಪಡೆದಿತ್ತು. ಈ ಸಂಬಂಧ ಕೋರ್ಟ್ ಮೆಟ್ಟಿಲು ಹತ್ತಿದ್ದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಚುನಾವಣೆಯಲ್ಲಿ ಬಿಜೆಪಿ ಮತ್ತು ದಳ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಅನಿವಾರ್ಯವಾಗಿ ತರೀಕೆರೆ ಟಿ,ಎ,ಪಿ,ಸಿ,ಎಂ,ಎಸ್ ನಲ್ಲಿ ಹೊಂದಾಣಿಕೆ ಮಾಡಲು ವಿಧಾನ ಪರಿಷತ್ ಸದಸ್ಯ ಎಸ್,ಎಲ್,ಬೋಜೇಗೌಡ ಮತ್ತು ಬಿಜೆಪಿ ಜಿಲ್ಲಾ ಅಧ್ಯಕ್ಷ ದೇವರಾಜ್ ಶೆಟ್ಟಿ ಡಿ.ಎಸ್. ಸುರೇಶ್ ನಿವಾಸದಲ್ಲಿ ಸಭೆ ಸೇರಿ ಕಾಂಗ್ರೆಸ್ ನವರಿಗೆ ಟಾಂಗ್ ಕೊಟ್ಟು ದಳ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿವೆ.
ರಾಷ್ಟ್ರ,ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಸಂಘ ಸಂಸ್ಥೆಗಳ ಚುನಾವಣೆಗೆ ರಾಜಕಾರಣಿಗಳು ಗೋಸುಂಬೆಯಂತೆ ಬಣ್ಣ ಬದಲಾಯಿಸುವುದು ಸಾಮಾನ್ಯ ಎನ್ನುವಂತಾಗಿದೆ.ಅದರಲ್ಲೂ ಜನತಾದಳದವರು ಘಳಿಗೆಗೆ,ಗಂಟೆಗೆ ಬಣ್ಣ ಬದಲಾಯಿಸುವುದರಲ್ಲಿ ನಿಪುಣರು ಎಂದು ಜನರಾಡಿಕೊಳ್ಳುತ್ತಿದ್ದಾರೆ.ದಳ ಜಿಲ್ಲಾ ಅಧ್ಯಕ್ಷ ಅಜಿತ್ ಮೂಡಿಗೆರೆಯಲ್ಲಿ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡಿದರೆ ಸ್ವತಃ ಬೋಜೇಗೌಡರು ಯಾವಾಗ ಯಾರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ದಾಳ ಉರುಳಿಸುವ ಕಲೆಗಾರಿಕೆಗೆಯ ಎಕ್ಸ್ ಫರ್ಟ್ ಆಗಿದ್ದಾರೆ ಎನ್ನಲಾಗುತ್ತಿದೆ.
BJP-Dal’s snake and ladder game: M. Narendra President
Leave a comment