ಚಿಕ್ಕಮಗಳೂರು : ಸಹಕಾರ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಅಲ್ಲಿನ ಆಳ ಅಗಲ ಅರೆದು ಕುಡಿದವರು ಒಮ್ಮೆಯಾದರೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗ ಬೇಕೆಂಬ ಕನಸು ಕಂಡವರಿದ್ದರು ಹಿರಿಯ ಸಹಕಾರಿ ಕುಳಗಳ ಮಧ್ಯೆ ಮೊದಲ ಬಾರಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಅಧ್ಯಕ್ಷರಾಗಿ ಯಶಸ್ಸುಗಳಿಸುವುದು ಅಷ್ಟು ಸುಲಭವಲ್ಲ, ಅದರಲ್ಲೂ ಬೇರೆಯದ್ದೆ ಪಕ್ಷದ ಸರ್ಕಾರ ಇದ್ದಾಗ ಬ್ಯಾಂಕ್ ನಿಭಾಯಿಸುವುದು ಕಷ್ಟಕರ , ಈ ನಡುವೆ ಬೆಳ್ಳಿ ಪ್ರಕಾಶ್ ಧೈರ್ಯ ಮೆಚ್ಚಲೇಬೇಕು ಎಂದು ಅವರ ವಿರೋಧಿಗಳು ಕೂಡಾ ಹೇಳುತ್ತಾರೆ.
ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಕಳೆದ ಒಂದೂವರೆ ವರ್ಷದಿಂದ ಹಿಡಿದು ಎಳೆಯುತ್ತಿದ್ದಾರೆ ಅದರೆ ಆ ದೈತ್ಯ ಜಪ್ಪಯ್ಯ ಅನ್ನುತ್ತಿಲ್ಲ. ಕಡೂರಿನ ಮಾಜಿ ಶಾಸಕ ಬೆಳ್ಳಿಪ್ರಕಾಶ್ ಅದೃಷ್ಟವಂತ ಜೊತೆಗೆ ಶ್ರಮದಿಂದ ಚಿಕ್ಕಮಗಳೂರು ಜಿಲ್ಲೆಯಿಂದ ಅಪೆಕ್ಸ್ ಬ್ಯಾಂಕ್ ಗೆ ಅಯ್ಕೆಯಾದ ಪ್ರಥಮರೆಂಬ ದಾಖಲೆ ಬರೆದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯವರನ್ನು ಸೋಲಿಸಿ ಕಾಂಗ್ರೆಸ್ ನ 5 ಜನ ಶಾಸಕರು ಅಯ್ಕೆಯಾದ ನಂತರ ಬಿಜೆಪಿ ಯವರ ಕೈಯಲ್ಲಿರುವ ಡಿಸಿಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ ನಲ್ಲಿರುವ ಅಧ್ಯಕ್ಷರುಗಳನ್ನು ಕೆಳಗಿಳಿಸಲು ಕಾಂಗ್ರೆಸ್ ನ ಐವರು ಶಾಸಕರಗಳು ಮುಖ್ಯಮಂತ್ರಿ ಮತ್ತು ಸಹಕಾರ ಸಚಿವರ ಬಳಿ ನಿಯೋಗ ಹೋಗಿ ಮನವಿ ಕೊಟ್ಟು ಕೊಟ್ಟು ಸುಸ್ತಾಗಿದ್ದಾರಂತೆ. ರಾಜಕೀಯವಾಗಿ ವಿರೋಧಿಸುವುದು ಸಹಜ ಆದರೆ ಅವರು ಕೂಡ ಚುನಾಯಿತ ಪ್ರತಿನಿಧಿಗಳು ಎಂಬ ಜಾಣ ಮರೆವು ಇರುವುದಕ್ಕಿಂತ ಇದೊಂದು ರಾಜಕೀಯ ದ್ವೇಷ ಎನ್ನಲೇಬೇಕು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್. ಸುರೇಶ್ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಂಡೋಪ ತಂಡವಾಗಿ ವಿದೇಶಿ ಪ್ರವಾಸ ಮಾಡುತ್ತಿರುವುದು ನೋಡಿ ಕೆಲವರು ಅಂಡು ಸುಟ್ಟು ಕೊಂಡವರ ರೀತಿ ಕೂರಲು ಆಗದೆ ನಡೆಯಲು ಆಗದೆ ಚಡಪಡಿಸುತ್ತಿದ್ದಾರೆ.
Leave a comment