ಚಿಕ್ಕಮಗಳೂರು : ರಾಜ್ಯದಲ್ಲಿ ಬಾಣಂತಿಯರ ಸಾವಿನ ಸರಣಿ ಬಳ್ಳಾರಿ, ಬೆಳಗಾವಿ ವಿಜಾಪುರದಲ್ಲಿ ನಡೆದಿದ್ದು ಚಿಕ್ಕಮಗಳೂರಿನಲ್ಲಿ ಕೂಡ ಇಂತಹ ಪ್ರಕರಣ ಸಂಭವಿಸಬಹುದು ಎಂಬ ಶಂಕೆ ಇದೆ. ಶಂಕರಪುರದ ಕೂಲಿ ಕಾರ್ಮಿಕ ಪ್ರವೀಣ್ ಎಂಬುವರ ಪತ್ನಿ ಸವಿತಾ ಎಂಬುವವರು ಎರಡನೇ ಹೆರಿಗೆಗೆ ಮೊನ್ನೆ ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು ನಿನ್ನೆ ಡಾ.ಲೋಹಿತ್ ಎಂಬುವವರು ಹೆರಿಗೆ ಮಾಡಿಸಿ ಬಾಣಂತಿಗೆ ಡ್ರಿಪ್ ಹಾಕಿದ ತಕ್ಷಣ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದ್ದು ಸಾವು ಬದುಕಿನ ಮಧ್ಯೆ ಸೆಣಸಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬಳ್ಳಾರಿಯಲ್ಲಿ ಉಪಯೋಗಿಸಿರುವ ಕಂಪನಿಯ ಪಶ್ಚಿಮ ಭಂಗ ಫಾರ್ಮಾಸಿಟಿಕಲ್ ಡ್ರಿಪ್ ಉಪಯೋಗಿಸಿರುವುದಾಗಿ ತಿಳಿದುಬಂದಿದೆ. ಕಳೆದ ಕೆಲ ದಿನಗಳಿಂದ ಪಶ್ಚಿಮ ಭಂಗ ಕಂಪನಿಯ ಸ್ಟಾಕ್ ತರಿಸಿರುವುದು ಖಚಿತವಾಗಿದ್ದು ಮೊನ್ನೆ ಕೂಡ ಜಿಲ್ಲಾ ಆಸ್ಪತ್ರೆಗೆ 51 ಬಾಕ್ಸ್ ಗಳಲ್ಲಿ 3753 ಬಾಟಲ್ ಸರಬರಾಜು ಆಗಿದೆ. ಇದನ್ನು ಸವಿತಾರಿಗೆ ನೀಡಿರಬಹುದು ಎಂದು ಹೇಳಲಾಗುತ್ತಿದೆ. ಇದರ ಸತ್ಯಾಸತ್ಯತೆ ತನಿಖೆಯಿಂದ ಮಾತ್ರ ಗೊತ್ತಾಗಲಿದೆ. ಇದರಿಂದಾಗಿ ಮತ್ತಷ್ಟು ಜನರಿಗೆ ತೊಂದರೆ ಆಗಬಹುದು ಎನ್ನಲಾಗಿದೆ.
ಬೆಳಗಾವಿಯಲ್ಲಿ ವೈದ್ಯಕೀಯ ಸಚಿವರು ಈ ಬಗ್ಗೆ ಸಭೆ ಕರೆದಿದ್ದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮೋಹನ್ ಕುಮಾರ್ ಯಾರ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ .ಜಿಲ್ಲಾ ಆಸ್ಪತ್ರೆಯಿಂದ ಕೆ.ಅರ್.ಎಸ್ ಆಸ್ಪತ್ರೆಗೆ ಸವಿತಾರನ್ನು ಸಿಫ್ಟ್ ಮಾಡಿದ್ದು ಅಲ್ಲಿ ಕೋಮದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿರುವ ಮೋಹನ್ ಕುಮಾರ್ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ನೊಂದವರು ಒತ್ತಾಯ ಮಾಡಿದ್ದಾರೆ.
Leave a comment