ಚಿಕ್ಕಮಗಳೂರು : ನಾಳೆ ದತ್ತ ಜಯಂತಿ ಕೊನೆ ದಿನ ಹಿನ್ನೆಲೆಯಲ್ಲಿ ಇಂದು ದತ್ತ ಮಾಲಾಧಾರಿಗಳು ಮನೆ ಮನೆಗೆ ತೆರಳಿ ಭಿಕ್ಷಾಟನೆ ಮೂಲಕ ಪಡಿ ಸಂಗ್ರಹಿಸಿದರು. ಕಳೆದ 8 ದಿನಗಳಿಂದ ಮಾಲೆ ಧರಿಸಿ ವೃತದಲ್ಲಿದ್ದ ಭಕ್ತರು ಇಂದು ಇರುಮುಡಿಗೆ ಅಕ್ಕಿ ಬೆಲ್ಲ ಸಂಗ್ರಹ ಮಾಡಿದರು.
ದತ್ತಜಯಂತಿ ಹಿನ್ನೆಲೆಯಲ್ಲಿ
ಮಾಲಾಧಾರಿಯಾಗಿರುವ ಸಿ.ಟಿ.ರವಿ ಹಾಗೂ ಬಿಜೆಪಿಯ ಕೆಲ ಮುಖಂಡರು ಭಿಕ್ಷಾಟನೆ ನಡೆಸಿದರು,
ಚಿಕ್ಕಮಗಳೂರು ನಗರದಲ್ಲಿ ಭಿಕ್ಷಾಟನೆ ಮೂಲಕ ದತ್ತ ಭಕ್ತರು ಪಡಿ ಸಂಗ್ರಹ ಮಾಡಿದರು
ಸಿ.ಟಿ.ರವಿ ಸೇರಿ ಹಿಂದುಪರ ಸಂಘಟನೆಗಳ ಮಾಲಾಧಾರಿಗಳಿಂದ ಭಿಕ್ಷಾಟನೆ ನಡೆಸಲಾಯಿತು, ನಾರಾಯಣಪುರ ರಾಘವೇಂದ್ರ ಮಠದ ರಸ್ತೆಯಲ್ಲಿ ಮನೆ-ಮನೆಗೆ ತೆರಳಿ ಭಿಕ್ಷಾಟನೆ ಮೂಲಕ ಪಡಿ ಸಂಗ್ರಹಿದರು, ಪಡಿ ರೂಪದಲ್ಲಿ ಅಕ್ಕಿ, ಬೆಲ್ಲ, ಕಾಯಿಯನ್ನು ಸ್ಥಳೀಯರು ನೀಡಿದರು, ದತ್ತ ಭಜನೆಯೊಂದಿಗೆ ಮನೆಮನೆಗೆ ತೆರಳಿ ಸಿ.ಟಿ ರವಿ ಪಡಿ ಸಂಗ್ರಹ ಮಾಡಿದರು, ಪಡಿಯನ್ನ ನಾಳೆ ಇರುಮುಡಿ ರೂಪದಲ್ಲಿ ದತ್ತಾತ್ರೇಯರಿಗೆ ಮಾಲಾಧಾರಿಗಳು ಅರ್ಪಿಸಲಿದ್ದಾರೆ, ಚಿಕ್ಕಮಗಳೂರು ನಗರದಲ್ಲಿ ದತ್ತಭಕ್ತರು ಪಡಿ ಸಂಗ್ರಹಿಸಿದ್ದಾರೆ
Leave a comment