ಚಿಕ್ಕಮಗಳೂರು :
ಜಿಲ್ಲೆಯ ವಕ್ಫ್ ಆಸ್ತಿ ಸಮಸ್ಯೆ ಬಗೆಹರಿಸಲು ರೈತರು ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಅಭಿಯಾನದ ಮೂಲಕ ಅಹೋ ರಾತ್ರಿ ಧರಣಿಗೆ ಬಿಜೆಪಿ ಮುಂದಾಗಿದೆ.
ನಾಳೆ ಬೆಳಿಗ್ಗೆ 10 ಗಂಟೆ ಯಿಂದ ಶುಕ್ರವಾರ ಬೆಳಿಗ್ಗೆ 10 ಗಂಟೆಯ ವರೆಗೆ ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ನಲ್ಲಿ ಜಿಲ್ಲಾ ಬಿಜೆಪಿ ಇಡೀ ಜಿಲ್ಲೆಯ ವಕ್ಫ್ ಆಸ್ತಿಗಳು ಘೋಷಣೆ ಹಿನ್ನೆಲೆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರೈತರು ಹಾಗೂ ವಕೀಲರು ಹಾಗೂ ತಮ್ಮ ಅಹವಾಲುಗಳನ್ನು ಪ್ರತಿಭಟನಾ ಸ್ಥಳಕ್ಕೆ ಬಂದು ನೀಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಎಂಆರ್ ದೇವರಾಜ್ ಶೆಟ್ಟಿ ಮನವಿ ಮಾಡಿದ್ದಾರೆ. ನಮ್ಮ ಭೂಮಿ ನಮ್ಮ ಹಕ್ಕು ಶೀರ್ಷಿಕೆಯಡಿ ಜನಜಾಗೃತಿ ಆಂದೋಲನ ಇದಾಗಿದ್ದು ಶೋಷಣೆಗೆ ಒಳಗಾದ ಜನರು, ಮಠ ಮಂದಿರಗಳು ಶಾಲೆ ಗಳು ನಮ್ಮ ಜೊತೆ ಆಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ವಕ್ಫ್ ಸಮಸ್ಯೆಗೆ ತಾರ್ಕಿಕ ಅಂತ್ಯ ಹುಡುಕುವ ಪ್ರಯತ್ನ ಇದಾಗಿದೆ ಎಂದ ಅವರು ಹೇಳಿದರು.
Leave a comment