Home namma chikmagalur ajjampura ಅಭಿವೃದ್ಧಿ ಕಾಣದ ಐತಿಹಾಸಿಕ ಅಂತರಘಟ್ಟೆ
ajjampuraHomeLatest Newsnamma chikmagalur

ಅಭಿವೃದ್ಧಿ ಕಾಣದ ಐತಿಹಾಸಿಕ ಅಂತರಘಟ್ಟೆ

Share
Share

ಅಜ್ಜಂಪುರ; ಅಜ್ಜಂಪುರ ಸಮೀಪದ ಅಂತರಘಟ್ಟೆ ಶ್ರೀ ದುರ್ಗಾಂಭ ದೇವಿಯ ಜಾತ್ರೆಗೆ ಪ್ರಖ್ಯಾತಿ ಪಡೆದಿದೆ. ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ ಮತ್ತು ರಾಜ್ಯದ ವಿವಿಧ ಕಡೆ ನೆಲೆಸಿರುವ ಲಕ್ಷಾಂತರ ಭಕ್ತರು ಪ್ರತಿ ವರ್ಷ ಜಾತ್ರೆಗೆ ದೇವಿಯ ರಥೋತ್ಸವದಲ್ಲಿ ಪಾಲ್ಗೊಂಡು ದರ್ಶನ ಪಡೆಯುತ್ತಾರೆ.

ರಥೋತ್ಸವ ನಡೆಯುವ ಎರಡು ದಿನ ಭಕ್ತರು ಎತ್ತಿನ ಗಾಡಿ,ಟ್ರಾಕ್ಟರ್, ಬೈಕ್ ಮತ್ತು ಬಸ್ಸು ಗಳಲ್ಲಿ ಜಾಮಾಯಿಸುತ್ತಾರೆ.ಹೀಗಾಗಿ ಎರಡು ದಿನದಲ್ಲಿ ಕೋಟ್ಯಾಂತರ ವಹಿವಾಟು ನಡೆಯುತ್ತದೆ ಮತ್ತು ದೇವಿಗೆ ಕಾಣಿಕೆ ರೂಪದಲ್ಲಿ ಹಣ ಹರಿದು ಬರುತ್ತದೆ.ಜಾತ್ರೆಯ ದಿನಗಳಲ್ಲಿ ತಿಂಗಳು ಪೂರ್ತಿ ಭಕ್ತರು ಬಂದು ಹೋಗುತ್ತಾರೆ.

ವರ್ಷವೂ ಜನ ಜಂಗುಳಿ ಇದ್ದೇ ಇರುತ್ತದೆ.ಇದರಿಂದ ಸರ್ಕಾರಕ್ಕೆ ನೂರಾರು ಕೋಟಿ ,ಕೋಟಿ ಆದಾಯವಿದೆ ಆದರೂ ಅಭಿವೃದ್ಧಿ ಕಾಣದೆ ನಲುಗುತ್ತಿದೆ.ಭಕ್ತರು ಹಿಡಿ ಶಾಪ ಹಾಕುತ್ತಾರೆ.
ಹಳೆ ಕಾಲದ ದೇವಸ್ಥಾನವಾಗಿರುವುದರಿಂದ ಮಳೆ ಕಾಲದಲ್ಲಿ ಸೊರುತ್ತಿದೆ.ಮೇಲೆ ತಗಡು ಹಾಕಿ ರಕ್ಷಣೆ ಮಾಡುತ್ತಿದ್ದಾರೆ.

ದೇವಾಲಯದ ರಸ್ತೆ ಕಿರಿದಾಗಿದ್ದು ಜನ,ವಾಹನ, ಎತ್ತಿನ ಗಾಡಿಗಳು ಬಂದು ಹೋಗುವುದು ತುಂಬಾ ಕಷ್ಟ ವಾಗುತ್ತಿದೆ ಆದ್ದರಿಂದ ಡಬಲ್ ರಸ್ತೆ ಮಾಡಿ ಡಿವೈಡರ್ ಅಳವಡಿಸಿ ಕಾಂಕ್ರೀಟ್ ರಸ್ತೆ ಮಾಡಿ ಲೈಟ್ ಅಳವಡಿಸಿದರೆ ಶಾಶ್ವತ ಪರಿಹಾರ ಮಾಡಿದಂತೆ ಆಗುತ್ತದೆ.ಧೂಳು, ಧೂಳು ತುಂಬಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದ್ದು ಈ ಬಗ್ಗೆ ಶಾಶ್ವತ ಪರಿಹಾರವನ್ನು ಮಾಡಬೇಕು ಅಂದರೆ ಆದಷ್ಟು ಕಾಂಕ್ರೀಟ್ ರಸ್ತೆಯ ಜೊತೆಗೆ ಚರಂಡಿ ಮಾಡಿದರೆ ಉತ್ತಮ ಎಂದು ಭಕ್ತರು ಹೇಳುತ್ತಿದ್ದಾರೆ.

ಜಾತ್ರೆ ಬಂದರೆ ಇಲ್ಲಿನ ಭಕ್ತರು ಲಕ್ಷ, ಲಕ್ಷ ಕೊಟ್ಟು ಎತ್ತು ಮತ್ತು ಗಾಡಿ ಖರೀದಿ ಮಾಡುವ ಕ್ರೇಜ್ ಹೊಂದಿದ್ದಾರೆ ಹೀಗಾಗಿ ಅಂತರಘಟ್ಟೆ ಸಂಪರ್ಕ ಮಾಡುವ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಡಾಂಬರ್ ರಸ್ತೆ ಮಾಡಿದರೆ ಒಳ್ಳೆಯದು.ಕುಡಿಯುವ ನೀರಿಗೆ ಹೆಚ್ಚಿನ ತೊಂದರೆ ಇದೆ ಇದಕ್ಕೆ ಶಾಶ್ವತ ಪರಿಹಾರವಾಗಿ ಭದ್ರ ಕಾಲುವೆಯ ನೀರು ಕೆರೆಗಳಿಗೆ ಹರಿಸುವುದರ ಜೊತೆಗೆ ಜನರಿಗೆ ಯೋಗ್ಯವಾದ ಕುಡಿಯುವ ನೀರು ಸಿಗುವಂತೆ ಮಾಡಬೇಕು .ರಸ್ತೆಗಳು ಗುಂಡಿ ಗೊಟರುಗಳಿಂದ ತುಂಬಿ ಆನೇಕ ಅಪಘಾತಗಳಿಗೆ ಕಾರಣವಾಗಿದೆ.ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಜನ ಪ್ರತಿನಿಧಿಗಳು ಗಮನ ಹರಿಸುವುದು ಒಳ್ಳೆಯದು.

ಪೊಲೀಸ್ ವ್ಯವಸ್ಥೆ ಹೆಚ್ಚಿಸುವ ಜೊತೆಗೆ ವೈದ್ಯರು ಮತ್ತು ಸಿಬ್ಬಂದಿ ಹೆಚ್ಚಿಸ ಬೇಕು.ಜಾತ್ರೆ ನಡೆಯುವ ಸಮಯದಲ್ಲಿ ತೇಪೆ ಹಾಕುವ ಬದಲು ಸಿದ್ದರಾಮಯ್ಯನವರ ಸರ್ಕಾರ ಗ್ಯಾರಂಟಿ, ಗ್ಯಾರಂಟಿ ಎಂದು ಬೊಬ್ಬೆ ಹೊಡೆಯುವ ಬದಲು ಅಭಿವೃದ್ಧಿ ಕೆಲಸಗಳು ಶಾಶ್ವತವಾಗಿರುವಂತಹ “ಗ್ಯಾರಂಟಿ” ಕೊಡಬೇಕು ಎಂದು ಇಲ್ಲಿನ ಭಕ್ತರ ಮತ್ತು ಅಂತರಘಟ್ಟೆ ಜನರ ಒತ್ತಾಯ ವಾಗಿದೆ.
ಕನ್ನಡದ ಸಾಹಿತಿ ಗೊ.ರು.ಚನ್ನಬಸಪ್ಪನವರು ಈ ಊರು ಕುರಿತು “ಸಾಕ್ಷಿ ಕಲ್ಲು” ಎಂಬ ಜನಪ್ರಿಯ ನಾಟಕ ಬರೆದು ಯಶಸ್ವಿ ಪ್ರದರ್ಶನ ಕಂಡಿತ್ತು ಈ ಸಾಕ್ಷಿ ಕಲ್ಲು ಉಳಿಸಲಾದರು ಅಂತರಘಟ್ಟೆ ಅಭಿವೃದ್ಧಿ ಹೊಂದಲಿ.

ಇದೇ ತಿಂಗಳು 25 ರಿಂದ ಜಾತ್ರೆ ಪ್ರಾರಂಭವಾಗಿ ರಥೋತ್ಸವ ನಡೆಯುತ್ತಿದೆ ಹೀಗಾಗಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದು ಭಕ್ತರ ಬಯಕೆ.

An undeveloped historical crossroads

Share

Leave a comment

Leave a Reply

Your email address will not be published. Required fields are marked *

Don't Miss

ಸಿ.ಡಿ.ಎ ಮಾಜಿ ಅಧ್ಯಕ್ಷ ಆನಂದ್ ಮೇಲೆ ಹಲ್ಲೆ …?

ಚಿಕ್ಕಮಗಳೂರು: ಮಾಜಿ ಸಚಿವ ಸಿ.ಟಿ.ರವಿ ಆಪ್ತ ಸುದರ್ಶನ್ ಬಲಗೈ ಬಂಟ ಹಾಲಿ ಮೂಗ್ತಿಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಆನಂದ್ ನ ರಸಲೀಲೆ ನಡೆಸುತ್ತಿದ್ದಾರೆ ಎಂದು ಕೆಲವರು ಹೋಮ್ ಸ್ಟೇಗೆ ನುಗ್ಗಿ ಗಲಾಟೆ...

ರೈತರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ನೀಡುವುದೇ ಚೈತ್ರೋತ್ಸವದ ಉದ್ದೇಶ

ಚಿಕ್ಕಮಗಳೂರು: ಜಿಲ್ಲೆಯರೈತರು ಮತ್ತು ಬೆಳೆಗಾರರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುವುದೇಚೈತ್ರೋತ್ಸವದಉದ್ದೇಶಎಂದುಜಿಲ್ಲಾಧಿಕಾರಿಎಂ.ಎನ್ ನಾಗರಾಜ್ ತಿಳಿಸಿದರು. ಅವರುಇಂದು ನಗರದ ನೇತಾಜಿ ಸುಭಾಷ್‌ಚಂದ್ರಬೋಸ್‌ಜಿಲ್ಲಾಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು...

Related Articles

ಲಾಭಾಂಶ ಆಮಿಷ ಯುವಕನಿಗೆ ಲಕ್ಷಾಂತರ ರೂಪಾಯಿ ವಂಚನೆ

ಚಿಕ್ಕಮಗಳೂರು: ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ...

ಸಿಡಿಎ ಅಧ್ಯಕ್ಷರಾಗಿ ಎಚ್‌.ಪಿ. ಮಂಜೇಗೌಡ ನೇಮಕ

ಚಿಕ್ಕಮಗಳೂರು: ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಸಿಡಿಎ) ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಪಿ. ಮಂಜೇಗೌಡ ಅವರನ್ನು...

ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ರಾಮಚಂದ್ರ ಬಿಗಿ ಪಟ್ಟು

ಚಿಕ್ಕಮಗಳೂರು: ಹಿರೇಮಗಳೂರು ರಾಮಚಂದ್ರ ಸಿ.ಡಿ.ಎ.ಅಧ್ಯಕ್ಷ ಸ್ಥಾನ ಪಡೆಯಲು ಬಿಗಿ ಪಟ್ಟು ಹಿಡಿದು ಒತ್ತಾಯ ಮಾಡುತ್ತಿದ್ದಾರೆ. ಕಳೆದ...

ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವು

ಚಿಕ್ಕಮಗಳೂರು :ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವಪ್ಪಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್...