Home namma chikmagalur ಸರ್ಕಾರಿ ಸ್ಮಶಾನ ಒತ್ತುವರಿ ತೆರವುಗೊಳಿಸಲು ಕ್ರಮ
namma chikmagalurchikamagalurHomeLatest News

ಸರ್ಕಾರಿ ಸ್ಮಶಾನ ಒತ್ತುವರಿ ತೆರವುಗೊಳಿಸಲು ಕ್ರಮ

Share
Share

ತರೀಕೆರೆ: ಹಲವು ಗ್ರಾಮಗಳಲ್ಲಿ ಸರ್ಕಾರಿ ಸ್ಮಶಾನ ಒತ್ತುವರಿಯಾಗಿದೆ ಮತ್ತು ನಕಾಶೆ ಕಂಡ ದಾರಿ ಒತ್ತುವರಿಯಾಗಿರುವ ಬಗ್ಗೆ ಹಲವು ದೂರುಗಳಿವೆ. ದೂರು ಅರ್ಜಿಗಳು ಬಂದಿರುವ ಸ್ಮಶಾನ ಮತ್ತು ದಾರಿಗಳನ್ನು ಸರ್ವೇ ಮಾಡಿಸಿ ಒತ್ತುವರಿಯಾಗಿದ್ದರೆ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಕೆ.ಜೆ. ಕಾಂತರಾಜ್ ಹೇಳಿದರು.

ಅವರು ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಉಪವಿಭಾಗೀಯ ಮಟ್ಟದ ಪರಿಶಿ? ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದಲಿತರ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅರಣ್ಯ ಮತ್ತು ಕಂದಾಯ ಇಲಾಖೆಗಳ ಮಧ್ಯೆ ಇರುವ ತಕರಾರುಗಳನ್ನು ಸ್ಥಳ ಪರಿಶೀಲನೆ ನಡೆಸಿ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಸಮಿತಿ ಸದಸ್ಯ ನಾಗರಾಜ್ ಮಾತನಾಡಿ, ಅಮೃತಾಪುರ ಹೋಬಳಿಯ ನಾಗರಾಜಪುರ ಗ್ರಾಮದ ಸ.ನಂ. ೩೪ ರಲ್ಲಿ ಸುಮಾರು ೧೨ ವ?ಗಳಿಂದ ಅನುಭವದಲ್ಲಿದ್ದು, ತೆಂಗು ಮತ್ತು ಮಾವು ಬೆಳೆದಿದ್ದು, ಕಳೆದ ೨ ವ?ಗಳಿಂದ ಸದರಿ ಜಾಗದಲ್ಲಿ ಉಳುಮೆ ಮಾಡಲು ಅರಣ್ಯ ಇಲಾಖೆಯವರು ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.

ದಲಿತ ಮುಖಂಡ ಹೆಚ್.ವಿ. ಬಾಲರಾಜ್ ಹಾದೀಕೆರೆ ಗ್ರಾಮದ ಸರ್ವೆ ನಂಬರ್ ೧೬೭ ಲ್ಲಿ ೫-೩೮ ಎಕರೆ ಸ್ಮಶಾನ ಜಾಗವನ್ನು ಅಳತೆ ಮಾಡಿಸಿ ತಂತಿ ಕಂಬ ಅಳವಡಿಸಬೇಕು. ಮೂಲ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಸಭೆಯ ಗಮನಕ್ಕೆ ತಂದರು.
ಉಪವಿಭಾಗೀಯ ಮಟ್ಟದ ಪರಿಶಿ? ಜಾತಿ ಮತ್ತು ಪರಿಶಿ? ಪಂಗಡ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಎನ್.ಆರ್. ಪುರ ರಾಮು ಮಾತನಾಡಿ, ಎನ್.ಆರ್. ಪುರ ತಾಲೂಕು ಗುಬ್ಬಿಗ ಗ್ರಾ.ಪಂ. ವ್ಯಾಪ್ತಿಯ ಈಚಿಕೆರೆ ಗ್ರಾಮದ ಸ.ನಂ.೪೧ ರಲ್ಲಿ ಮೂರು ಜನರಿಗೆ ತಲಾ ೩-೨೦ ಎಕರೆ ಜಾಗಕ್ಕೆ ಹಂಗಾಮಿ ಸಾಗುವಳಿ ಚೀಟಿ ನೀಡಲಾಗಿದೆ. ಸರ್ವೇ ಕಾರ್ಯ ನಡೆಸಿ, ಕಲ್ಲು ಬಾಂಧು ಹಾಕಿಸಿಕೊಡಬೇಕು ಎಂದರು.

ಮುಖಂಡ ಎಂ. ಓಂಕಾರಪ್ಪ ಮಾತನಾಡಿ, ನೇರಲಕೆರೆ ಗ್ರಾಮದ ಬಿ.ಆರ್. ಸಮುದಾಯ ಭವನದ ಪಕ್ಕದಲ್ಲಿರುವ ಸರಕಾರಿ ಜಾಗ ಒತ್ತುವರಿಯಾಗಿದ್ದು, ಈ ಜಾಗವನ್ನು ಕಂದಾಯ ಇಲಾಖೆಯ ವಶಕ್ಕೆ ಪಡೆದು ಅರ್ಹರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಸಭೆಯ ಗಮನಕ್ಕೆ ತಂದರು.

ದಲಿತ ಮುಖಂಡ ಸುನಿಲ್ ಮಾತನಾಡಿ, ದೋರನಾಳು ಗ್ರಾಮದಲ್ಲಿ ೨೫೦ ಪರಿಶಿ? ಜಾತಿ ಮತ್ತು ಪರಿಶಿ? ಪಂಗಡದ ಕುಟುಂಬಗಳಿವೆ. ಸ.ನಂ. ೨೨೫ ರಲ್ಲಿರುವ ಗೋಮಾಳ ಜಾಗದಲ್ಲಿ ಅರ್ಹ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ವಿಶ್ವಜಿತಮೆಹತಾ, ಕಡೂರು ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ಅಜ್ಜಂಪುರ ತಹಸೀಲ್ದಾರ್ ವಿನಾಯಕ್ ಸಾಗರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಸಮಿತಿ ಸದಸ್ಯ ನಾಗರಾಜ್, ಮುಖಂಡರಾದ ಎನ್. ವೆಂಕಟೇಶ್, ಜಿ.ಟಿ. ರಮೇಶ್, ವೈ.ಎಸ್.ಮಂಜಪ್ಪ, ಎಸ್.ಕೆ. ಸ್ವಾಮಿ, ರಾಮಚಂದ್ರ, ಸುನೀಲ್, ಶಂಕರ ನಾಯ್ಕ, ಶಿವರಾಜ್, ಇದ್ದರು.

Action taken to clear encroachment of government cemetery

 

Share

Leave a comment

Leave a Reply

Your email address will not be published. Required fields are marked *

Don't Miss

ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ

ಚಿಕ್ಕಮಗಳೂರು: ರಾಜ್ಯದ ಅತ್ಯುನ್ನತ ಶಿಖರವಾದ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಹಾಗೂ ಮಣ್ಣು, ಅದಿರು ಸಾಗಾಣೆ ನಡೆಯುತ್ತಿರುವ ಆರೋಪ ಕೇಳಿಬಂದಿದ್ದು, ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯೇತರ...

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮಿನಿ ಪಲ್ಟಿ

ಚಿಕ್ಕಮಗಳೂರು : ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮಿನಿ ಕಾರೊಂದು ಚಾಲಕನ ನಿರ್ಲಕ್ಷ್ಯದಿಂದ ಪಲ್ಟಿಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ದಿಣ್ಣೆಕೆರೆ ಗ್ರಾಮದ ಬಳಿ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಕೂದುವಳ್ಳಿಯ ಲಿಟಲ್...

Related Articles

A.C.F ಕೆ.ಎಸ್.ಮೋಹನ್ ನಿವಾಸದ ಮೇಲೆ ಲೋಕಾಯುಕ್ತಾ ದಾಳಿ

  ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಅರಣ್ಯ ಅಧಿಕಾರಿ ಕೆ.ಎಸ್.ನಿವಾಸ ಮತ್ತು ಸಂಭಂದಿಸಿದ ಹಲವು...

ಸಿ.ಟಿ.ರವಿಗೆ ಶೋಷಿತ ವರ್ಗದ ಅಪ್ಪಂದಿರಿಂದ ತಕ್ಕ ಪಾಠ

ಚಿಕ್ಕಮಗಳೂರು : ಆರ್‌ಎಸ್‌ಎಸ್ ನೊಂದಣಿ ಮಾಡಿಸಲು ಅವನಪ್ಪನಿಂದಲೂ ಆಗಲಿಲ್ಲ ಎಂದು ಪ್ರಿಯಾಂಕ ಖರ್ಗೆ ಬಗ್ಗೆ ಹೇಳಿರುವ...

ವಿಳಾಸ ಕೇಳುವ ನೆಪದಲ್ಲಿ ಎಂಟು ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್‌ ಕಳವು

ಚಿಕ್ಕಮಗಳೂರು: ವಿಳಾಸ ಕೇಳುವ ನೆಪದಲ್ಲಿ ಗಮನ ಬೇರೆಡೆಗೆ ಸೆಳೆದು ಬರೋಬ್ಬರಿ ಎಂಟು ಲಕ್ಷ ರೂಪಾಯಿ ಹಣವಿದ್ದ...

ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ತರಾತುರಿಯಲ್ಲಿ ಮನೆಗೆ ಬೀಗ ಹಾಕದೆ ಹೊರಟ ದಂಪತಿಯ ನಿರ್ಲಕ್ಷ್ಯವನ್ನು ಬಂಡವಾಳ ಮಾಡಿಕೊಂಡ ಕಳ್ಳರು, ಮನೆಯಲ್ಲಿದ್ದ...