Home namma chikmagalur chikamagalur ಮಲ್ಲೇಗೌಡ ಆಸ್ಪತ್ರೆಯಲ್ಲಿ ಯುವಕನ ಮೇಲೆ ಹಲ್ಲೆ
chikamagalurCrime NewsHomeLatest Newsnamma chikmagalur

ಮಲ್ಲೇಗೌಡ ಆಸ್ಪತ್ರೆಯಲ್ಲಿ ಯುವಕನ ಮೇಲೆ ಹಲ್ಲೆ

Share
Share

ಚಿಕ್ಕಮಗಳೂರು: ಹಳೇ ಗಲಾಟೆಯೊಂದರ ವಿಚಾರವಾಗಿ ನಗರದ ಮಲ್ಲೇಗೌಡ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಮುಂಭಾಗದಲ್ಲೇ ಯುವಕನೋರ್ವನ ಮೇಲೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಟಿಂಬರ್ ಕೆಲಸ ಮುಗಿಸಿ ಊಟ ಮಾಡುವಾಗ ನಡೆದ ಗಲಾಟೆಯಲ್ಲಿ ಗಾಯಗೊಂಡಿದ್ದ ತನ್ನ ಸ್ನೇಹಿತರಾದ ತೌಸಿಫ್ ಮತ್ತು ಸಚಿನ್‌ರನ್ನು ಚಿಕಿತ್ಸೆಗೆ ದಾಖಲಿಸಿ, ಆಸ್ಪತ್ರೆಯ ಹೊರಗೆ ಕುಳಿತಿದ್ದ ಶಿವಪುರದ ಅರುಣ್ ಕುಮಾರ್ ಎಂಬುವವರ ಮೇಲೆ ಆಕಾಶ್, ಜೀವನ್ ಹಾಗೂ ಇತರರು ಏಕಾಏಕಿ ದಾಳಿ ನಡೆಸಿದ್ದಾರೆ.

ಅರುಣ್ ಕುಮಾರ್ ಆಸ್ಪತ್ರೆಯ ಒಳಗೆ ಓಡಲು ಯತ್ನಿಸಿದಾಗ ತಡೆದು, ಅವಾಚ್ಯವಾಗಿ ನಿಂದಿಸಿ, ಕಣ್ಣಿನ ಭಾಗ ಹಾಗೂ ಮುಖಕ್ಕೆ ತೀವ್ರವಾಗಿ ಗುದ್ದಿ, ಕೆಳಗೆ ಕೆಡವಿ ತುಳಿದಿದ್ದಾರೆ.

ಜೊತೆಯಲ್ಲಿದ್ದ ಸ್ನೇಹಿತರು ಗಲಾಟೆ ಬಿಡಿಸಿದ್ದು, ಗಾಯಾಳು ಅರುಣ್ ಕುಮಾರ್ ನೀಡಿದ ಹೇಳಿಕೆಯನ್ವಯ ನಗರ ಪೊಲೀಸರು ಮೊಕದ್ದಮೆ ಹೂಡಿದ್ದಾರೆ.

A young man was attacked at Mallegowda Hospital.

Share

Leave a comment

Leave a Reply

Your email address will not be published. Required fields are marked *

Don't Miss

ನೀಟ್ ವಿದ್ಯಾರ್ಥಿಗಳ ಹಲ್ಲೆ ಖಂಡಿಸಿ ಸಿಪಿಐನಿಂದ ಪ್ರತಿಭಟನೆ

ಚಿಕ್ಕಮಗಳೂರು:  ನೀಟ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಸಿಪಿಐ ತಾಲ್ಲೂಕು ಘಟಕದಿಂದ ಗುರುವಾರ ನಗರದ ಆಜಾದ್‌ಪಾರ್ಕ್ ವೃತ್ತ ದಲ್ಲಿ ಮುಖಂಡರುಗಳು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ...

ಮಳೆಗಾಗಿ ಅಯ್ಯನಕೆರೆ, ಮದಗದಕೆರೆ ತಪ್ಪಲಿನಲ್ಲಿ ವಿಶೇಷ ಪೂಜೆ

ಚಿಕ್ಕಮಗಳೂರು: ಮಳೆ ಕೊರತೆಯಿಂದ ಆತಂಕಗೊಂಡಿರುವ ಕಡೂರು ತಾಲೂಕಿನ ಅಯ್ಯನಕೆರೆ ಹಾಗೂ ಮದಗದಕೆರೆ ತಪ್ಪಲಿನ ಗ್ರಾಮಸ್ಥರು ಉತ್ತಮ ಮಳೆಯಾಗಿ ಕೆರೆಗಳು ತುಂಬಲಿ ಎಂಬ ಆಶಯದೊಂದಿಗೆ ವಿಶೇಷ ಪೂಜೆ ನೆರವೇರಿಸಿದರು. ಸುಮಾರು 1,300 ಹೆಕ್ಟೇರ್...

Related Articles

ಸಮ ಸಮಾಜ ನಿರ್ಮಿಸಲು ಒಂದಾಗಿ ಹೋರಾಟ ನಡೆಸುವುದು ಇಂದಿನ ಅಗತ್ಯ

ಚಿಕ್ಕಮಗಳೂರು: ಸಮಾನತೆಯ ಆಶಯ ದೊಂದಿಗೆ ಸಮ ಸಮಾಜ ನಿರ್ಮಿಸಲು ಒಂದಾಗಿ ಹೋರಾಟ ನಡೆಸುವುದು ಇಂದಿನ ಅಗತ್ಯ...

ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು

ಶೃಂಗೇರಿ : ತಾಲೂಕಿನ ನೆಮ್ಮಾರ್ ಸರ್ಕಲ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ...

ಶಂಕರ ಭಾರತಿ ಗೋಶಾಲೆಗೆ ₹10 ಲಕ್ಷ ವೆಚ್ಚದ ನೂತನ ಗೋಶೆಡ್ ನಿರ್ಮಾಣ

ಚಿಕ್ಕಮಗಳೂರು: ರಾಜ್ಯ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸ್ಟೇಟ್...

ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಪ್ರತಿಭಟನೆ

ಚಿಕ್ಕಮಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ...