Home ಅಜ್ಜಿ-ಅಪ್ಪಾನೇ ದಂಧೆ ಕೋರರು-ವೇಶ್ಯೆ ವಾಟಿಕೆಯಲ್ಲಿ ನರಳಿದ ಅಪ್ರಾಪ್ತೆ
HomeKadurLatest Newsnamma chikmagalur

ಅಜ್ಜಿ-ಅಪ್ಪಾನೇ ದಂಧೆ ಕೋರರು-ವೇಶ್ಯೆ ವಾಟಿಕೆಯಲ್ಲಿ ನರಳಿದ ಅಪ್ರಾಪ್ತೆ

Share
Share

ಬೀರೂರು: ಮನುಷ್ಯತ್ವ ಮರೆತು ಹಣಕ್ಕಾಗಿ ಹದಿನಾರರ ಬಾಲಕಿಯನ್ನು ಅಜ್ಜಿ ನಾಗಮ್ಮ ಮತ್ತು ಅಪ್ಪ ಗಿರೀಶ್ ವೇಶ್ಯೆ ವಾಟಿಕೆಯ ಕಿಂಗ್ ಪಿನ್ ಗಳಾದ ಭರತ್ ಶೆಟ್ಟಿಯ ಜೊತೆಗೆ ಡೀಲಿಂಗ್ ನಡೆಸಿದ ಅಮಾನವೀಯ ಘಟನೆ ಅಜ್ಜಂಪುರ ತಾಲ್ಲೂಕಿನ ಬೀರೂರು ಪೊಲೀಸ್ ಠಾಣೆಯ ವ್ಯಾಪ್ತಿಯ ನಾಗವಂಗಲದಲ್ಲಿ ನಡೆದಿದೆ .

ಅಜ್ಜಿ ನಾಗಮ್ಮ(65) ಭರತ್ ಶೆಟ್ಟಿ ಗೆ(52) ಮೊದಲಿನಿಂದಲೂ ಗೆಳೆತನ ಇತ್ತು ಎನ್ನಲಾಗಿದೆ. ವೇಶ್ಯೆವಾಟಿಕೆಗೆ ಸಂಬಂಧಿಸಿದ ದೂರು ಕಡೂರು ಪೊಲೀಸ್ ಠಾಣೆಯಲ್ಲಿ ನಾಗಮ್ಮನ ಮೇಲೆ ದೂರು ದಾಖಾಲಾಗಿದೆ.ಇದೇ ರೀತಿಯಲ್ಲಿ ಭರತ್ ಶೆಟ್ಟಿ ಮೇಲೆ ಮೂಡಬಿದಿರೆ ಮತ್ತು ಕಾರ್ಕಳ ದಲ್ಲಿ ದೂರುಗಳು ದಾಖಲಾಗಿವೆ.

ಡಿಸೆಂಬರ್ 20 ರಂದು ಅಜ್ಜಿ ನಾಗಮ್ಮ ಬಾಲಕಿ ಅಪ್ಪ ಗಿರೀಶ್ ಸೇರಿ ಬಾಲಕಿಯನ್ನು ಪುಸಲಾಯಿಸಿ ಮೂಡಬಿದಿರೆಗೆ ಕರೆದುಕೊಂಡು ಹೋಗಿ ಶೇಖರ್ ಶೆಟ್ಟಿ ಎಂಬುವನ ಮನೆಯಲ್ಲಿ ಇರಿಸಿ ವೇಶ್ಯೆ ವಾಟಿಕೆ ನಡೆಸಿದ್ದಾರೆ.ಇಲ್ಲಗೆ ಹಲವಾರು ಗಿರಾಕಿಗಳು ಬಂದು ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಹಲವು ದಿನಗಳು ಕಾಣೆಯಾಗಿದ್ದ ಬಾಲಕಿ ಹಿಂತಿರುಗಿ ಊರಿಗೆ ಬಂದಾಗ ಅತ್ತೆ ಪವಿತ್ರ ವಿಚಾರಿಸಿದಾಗ ಅನುಮಾನ ಬರವಂತೆ ವರ್ತಿಸಿದ್ದಾಳೆ ಮತ್ತಷ್ಟು ಪ್ರಶ್ನೆ ಮಾಡಿದಾಗ ವಿಚಾರ ತಿಳಿದು ಬಂದಿದೆ ತಕ್ಷಣ ಬೀರೂರು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ದೂರು ದಾಖಲಿಸಿದ್ದಾರೆ.ಪೋಕ್ಸೊ ಮತ್ತು ಅಟ್ರಾಸಿಟಿ ದೂರು ದಾಖಲಿಸಿ ಕಿಂಗ್ ಪಿನ್ ಭರತ್ ಶೆಟ್ಟಿ ,ನಾಗಮ್ಮ, ಗಿರೀಶ್, ಶೇಖರ್ ಶೆಟ್ಟಿ ಮತ್ತಿತರರನ್ನು ಬಂಧಿಸಿ ಜೈಲು ದಾರಿ ತೋರಿಸಿದ್ದಾರೆ.

ಎಸ್.ಪಿ.ದಯಾಮಾ ಮಾರ್ಗದರ್ಶನದಲ್ಲಿ ಅಡಿಶನಲ್ ಎಸ್.ಪಿ ಮತ್ತು ಡಿ.ವೈ.ಎಸ್.ಪಿ.ಪರುಶರಾಮಪ್ಪ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ತಿಪ್ಪೇಶ್ ಮತ್ತು ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಜ್ಜಿ ನಾಗಮ್ಮನ ಚಟ,ತಂದೆ ಗಿರೀಶ್ ನಿಗೆ ಹಣದಾಸೆ ಭರತ್ ಶೆಟ್ಟಿ ಮತ್ತು ಶೇಖರ್ ಶೆಟ್ಟಿಗೆ ಹಣಗಳಿಸುವ ಆಸೆ ಅಪ್ರಾಪ್ತ ಬಾಲಕಿ ನರಳಿರುವ ಅಮಾನವೀಯ ಘಟನೆಗಳನ್ನು ನೋಡಿದಾಗ ಈ ಸಮಾಜ ಸರಿ ಹೋಗಲು ಸಾಧ್ಯವೇ ಎಂಬ ಪ್ರಶ್ನೆ ಸದಾಕಾಲವೂ ಕಾಡುತ್ತದೆ.

A minor who suffered from his father’s prostitution racket

Share

Leave a comment

Leave a Reply

Your email address will not be published. Required fields are marked *

Don't Miss

ಹಿರಿಯ ನಾಗರಿಕರಿಗೆ 3.12 ಲಕ್ಷ ರೂ ವಂಚನೆ

ಚಿಕ್ಕಮಗಳೂರು: ಸೈಬರ್ ಕ್ರಿಮಿನಲ್‌ಗಳ ಜಾಲಕ್ಕೆ ಸಿಲುಕಿ ಹಿರಿಯ ನಾಗರಿಕರೊಬ್ಬರು ಬರೋಬ್ಬರಿ 3.12 ಲಕ್ಷ ಕಳೆದುಕೊಂಡಿದ್ದಾರೆ. ನಗರದಲ್ಲಿ ವಾಸವಾಗಿರುವ 62 ವರ್ಷದ ವೆಂಕಟೇಶ್ ಇತ್ತೀಚೆಗೆ ಅವರ ಮೊಬೈಲ್‌ಗೆ ಬಂದಿದ್ದ ಒಂದು ಅಪರಿಚಿತ ಎಪಿಕೆ...

ಜಿಲ್ಲೆಯ ಒಟ್ಟು 15 ಮಂದಿಯ ಗಡಿಪಾರಿಗೆ ಶಿಫಾರಸ್ ಪತ್ರ

ಚಿಕ್ಕಮಗಳೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಭಜರಂಗದಳದ ಮುಖಂಡ ಶ್ಯಾಮ್ ವಿ ಗೌಡ, ಮುಸ್ಲಿಂ ಸಮುದಾಯದ 10 ಮಂದಿ ಸೇರಿ ಜಿಲ್ಲೆಯ ಒಟ್ಟು 15 ಮಂದಿಯ ಗಡಿಪಾರಿಗೆ ಜಿಲ್ಲಾ...

Related Articles

ಎಸ್.ಬಿದರೆಯ ಬೆಂಕಿ ಲಕ್ಷ್ಮೀ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ

ಕಡೂರು: ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿ ಎಸ್.ಬಿದರೆಯ ಬೆಂಕಿ ಲಕ್ಷ್ಮೀ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವವು ಮಂಗಳವಾರ ಶ್ರದ್ಧಾ...

ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿದ್ದ ಇಂದಿರಾ ಕ್ಯಾಂಟೀನ್ ಸ್ಥಳಾಂತರ

ಚಿಕ್ಕಮಗಳೂರು : ನಗರದ ಐ.ಜಿ. ರಸ್ತೆಯ ಬಸ್ ನಿಲ್ದಾಣದ ಸಮೀಪವಿರುವ ಇಂದಿರಾ ಕ್ಯಾಂಟೀನ್ ಅನ್ನು ಸ್ಥಳಾಂತರ...

ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳು ಮನೆ ಬಾಗಿಲಿಗೆ

ಚಿಕ್ಕಮಗಳೂರು: ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ...

ಶಾಸಕ ಜಿ.ಹೆಚ್. ಶ್ರೀನಿವಾಸ್ ವಿರುದ್ಧ ಪ್ರತಿಭಟನೆ

ಅಜ್ಜಂಪುರ : ಶಾಸಕ ಜಿ.ಹೆಚ್. ಶ್ರೀನಿವಾಸ್ ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು...