Home namma chikmagalur chikamagalur ಕಾಡಾನೆ ಸ್ಥಳಾಂತರ ಖಂಡಿಸಿ ಎನ್‌ಡಿಎ ಮೈತ್ರಿ ಕೂಟದಿಂದ ಪ್ರತಿಭಟನೆ
chikamagalurCrime NewsLatest Newsnamma chikmagalur

ಕಾಡಾನೆ ಸ್ಥಳಾಂತರ ಖಂಡಿಸಿ ಎನ್‌ಡಿಎ ಮೈತ್ರಿ ಕೂಟದಿಂದ ಪ್ರತಿಭಟನೆ

Share
Share
ಬಾಳೆಹೊನ್ನೂರು: ಭದ್ರಾ ಅಭಯಾರಣ್ಯಕ್ಕೆ ೫೬ ಕಾಡಾನೆ ಸ್ಥಳಾಂತರ ಖಂಡಿಸಿ ಸಮೀಪದ ಕಡಬಗೆರೆಯಲ್ಲಿ ಖಾಂಡ್ಯ ಹೋಬಳಿ ಬಿಜೆಪಿ, ಜೆಡಿಎಸ್ ಹಾಗೂ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ವತಿಯಿಂದ ಗುರುವಾರ ಪ್ರತಿಭಟನಾ ನಡೆಸಲಾಯಿತು.
ಪ್ರತಿಭಟನೆಯ ಆರಂಭದಲ್ಲಿ ಸಂಗಮೇಶ್ವರಪೇಟೆಯ ಹೆಬ್ಬೆ ವಲಯ ಅರಣ್ಯಾಧಿಕಾರಿ ಕಚೇರಿ ಮುಂಭಾಗದಿಂದ ಕಡಬಗೆರೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನೆ ಬಳಿಕ ಕೆಲಕಾಲ ಬಾಳೆಹೊನ್ನೂರು-ಚಿಕ್ಕಮಗಳೂರು ರಸ್ತೆ ಹೆದ್ದಾರಿ ತಡೆದು ಪ್ರತಿಭಟಿಸಲಾಯಿತು.
ಮಾಜಿ ಶಾಸಕ ಡಿ.ಎನ್.ಜೀವರಾಜ್ ಸಭೆಯಲ್ಲಿ ಮಾತನಾಡಿ, ಕಾಡಾನೆ ವಿಚಾರದಲ್ಲಿ ಹಲವಾರು ಪ್ರತಿಭಟನೆಗಳು ನಡೆದಿದ್ದರೂ ಸಹ ಇಲ್ಲಿನ ಶಾಸಕರು ಸೂಕ್ತ ಎಚ್ಚರಿಕೆ ವಹಿಸಿ ಕ್ರಮ ತೆಗೆದುಕೊಳ್ಳದೆ ಇದ್ದು, ಕ್ಷೇತ್ರದ ಜನರ ಕುರಿತು ಕಾಳಜಿ ಇಲ್ಲವಾಗಿದೆ. ನಮ್ಮ ಕ್ಷೇತ್ರದ ಶಾಸಕರು ಸಾವಿನ ಮನೆಗೆ ಸೈರನ್ ಹಾಕಿಕೊಂಡು ಹೋಗುವಲ್ಲಿ ನಿಸ್ಸೀಮರಾಗಿದ್ದಾರೆ. ಕ್ಷೇತ್ರಕ್ಕೆ ಎಲ್ಲಿಂದಾದರೂ ಕಾಡಾನೆ ಬಂದರೆ ಅದಕ್ಕೂ ನನಗೂ ಸಂಬಂಧವಿಲ್ಲದಂತೆ ಶಾಸಕರು ವರ್ತಿಸುತ್ತಿದ್ದಾರೆ.
ಆದರೆ ಅವರ ಮನೆ ಬಳಿ ಮಾತ್ರ ೫೦೦, ೧೦೦೦ ಮೀಟರ್ ಎತ್ತರದ ವಾಲ್ ನಿರ್ಮಿಸಿಕೊಂಡು ಪ್ರಾಣಿಗಳು ಬರದಂತೆ ಎಚ್ಚರಿಕೆ ವಹಿಸಿಕೊಂಡಿದ್ದಾರೆ. ಇಡೀ ಕ್ಷೇತ್ರಕ್ಕೆ ನಾನೊಬ್ಬನೇ ಶಾಸಕ, ನನ್ನ ರಕ್ಷಣೆಯಾದರೆ ಎಲ್ಲರ ರಕ್ಷಣೆಯಾದಂತೆ ಶಾಸಕರು ಅಂದುಕೊಂಡಿರಬೇಕು ಎಂದು ಲೇವಡಿ ಮಾಡಿದರು. ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಗದ್ದೆಮನೆ ಮಾತನಾಡಿ, ಕಳೆದ ವಾರ ಹೆನ್ನಂಗಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಕಾಡಾನೆಗಳ ಸ್ಥಳಾಂತರ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ, ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರು ಭರವಸೆ ನೀಡಿದ್ದರು.
ಆದರೆ ಆಶ್ವಾಸನೆ ನೀಡಿದ ಕೆಲವೇ ಗಂಟೆಗಳಲ್ಲಿಯೇ ಕಾಡಾನೆಗಳ ಸ್ಥಳಾಂತರ ಪ್ರಕ್ರಿಯೆ ಆರಂಭಗೊಂಡಿದೆ. ಮಲೆನಾಡಿಗರ ಮುಗ್ಧತೆಯನ್ನು ಶಾಸಕರು, ಅಧಿಕಾರಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದೇ ಘಟನೆ ಬಯಲು ಸೀಮೆ ಭಾಗದಲ್ಲಿ ನಡೆದಿದ್ದರೆ ಅರಣ್ಯ ಇಲಾಖೆಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದರು. ಬೇಲೂರಿನಲ್ಲಿ ಆನೆ ದಾಳಿ ನಡೆದಾಗ ಉಸ್ತುವಾರಿ ಸಚಿವರು ಕೂಡಲೇ ಆನೆಗಳ ಸ್ಥಳಾಂತರಕ್ಕೆ ಆದೇಶ ಮಾಡಿಸಿದ್ದರು. ಆದರೆ ಜಿಲ್ಲೆಯಲ್ಲಿ ೫ ಶಾಸಕರಿದ್ದರೂ ಕೂಡ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿಕೊಂಡು ಮಾತನಾಡಲು ಆಗಿಲ್ಲ ಎಂಬುದು ವಿಶಾದನೀಯವಾಗಿದೆ ಎಂದರು.
ಪ್ರತಿಭಟನೆ ಮುಕ್ತಾಯಗೊಂಡ ನಂತರ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಮನವಿ ಸಲ್ಲಿಸುವ ಕುರಿತು ಮೊದಲೇ ಮಾಹಿತಿ ನೀಡಿದ್ದು, ಪ್ರತಿಭಟನೆ ಮುಕ್ತಾಯಗೊಂಡರೂ ಸಹ ಸ್ಥಳಕ್ಕೆ ಅರಣ್ಯ ಇಲಾಖೆ ಆರ್‌ಎಫ್‌ಓ ಮನವಿ ಸ್ವೀಕರಿಸಲು ಆಗಮಿಸದೆ ಗೈರಾಗಿದ್ದರು. ತಡವಾಗಿ ಸ್ಥಳಕ್ಕೆ ಆರ್‌ಎಫ್‌ಓ ಆಗಮಿಸಿದ್ದು ಇದರಿಂದ ಮಾಜಿ ಶಾಸಕ ಜೀವರಾಜ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಅವರ ಕೈಗೆ ಮನವಿ ನೀಡದೆ, ನಾಡಕಚೇರಿ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ನಿಲೇಶ್, ಮಾಜಿ ಅಧ್ಯಕ್ಷ ಅರುಣ್‌ಕುಮಾರ್, ಹೋಬಳಿ ಬಿಜೆಪಿ ಅಧ್ಯಕ್ಷ ಸಾರಗೋಡು ಸುರೇಶ್, ಹೋಬಳಿ ಜೆಡಿಎಸ್ ಅಧ್ಯಕ್ಷ ರಘು ಬಿಳಗೊಳ, ಮುಖಂಡರಾದ ಭಾಸ್ಕರ್ ವೆನಿಲ್ಲಾ, ಪ್ರಭಾಕರ್ ಪ್ರಣಸ್ವಿ, ಪ್ರದೀಪ್ ಕಿಚ್ಚಬ್ಬಿ, ಯೋಗಾನಂದ ರಾಜು, ಪ್ರೇಮೇಶ್, ಶಿವಶಂಕರ್, ಕೋಕಿಲಮ್ಮ, ವಿನೋದ್ ಬೊಗಸೆ, ಹುಯಿಗೆರೆ ವಾಸು, ಬೆಳಸೆ ನಾಗೇಶ್, ಎ.ಕೆ.ಸಂದೇಶ್, ಸಂಪತ್ ಮಾಗಲು ಮತ್ತಿತರರು ಹಾಜರಿದ್ದರು.
NDA alliance protests against the relocation of wild elephants
Share

Leave a comment

Leave a Reply

Your email address will not be published. Required fields are marked *

Don't Miss

ಉದ್ದೇಬೋರಹಳ್ಳಿ ಬಳಿ ಟಿಪ್ಪರ್ ಲಾರಿ-ಬೈಕ್ ಅಪಘಾತ-ವಿದ್ಯಾರ್ಥಿ ಸಾವು

ಚಿಕ್ಕಮಗಳೂರು : ರಾಷ್ಟ್ರೀಯ ಹೆದ್ದಾರಿ 173ರ ಉದ್ದೇಬೋರಹಳ್ಳಿ ಬಳಿ ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಚಿಕ್ಕಮಗಳೂರಿನ ಎಐಟಿ (AIT) ಕಾಲೇಜಿನಲ್ಲಿ...

ಎಸ್ಟೇಟ್ ಮಾಲೀಕರ ಮನೆಯ ಮೇಲೆ ಏಕಾಏಕಿ ಗುಂಡಿನ ದಾಳಿ

ಚಿಕ್ಕಮಗಳೂರು: ಶಿಕಾರಿಗೆ ಬಂದವರಂತೆ ನಟಿಸಿ ಬಂದ ದುಷ್ಕರ್ಮಿಗಳ ತಂಡವೊಂದು ಎಸ್ಟೇಟ್ ಮಾಲೀಕರ ಮನೆಯ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ನಡೆದಿದೆ....

Related Articles

ಕಾಫಿ ಎಸ್ಟೇಟ್ ಮಾಲೀಕನಿಂದ ವಲಸೆ ಕಾರ್ಮಿಕರ ಮೇಲೆ ದೌರ್ಜನ್ಯ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಮಾಲೀಕನಿಂದ ವಲಸೆ ಕಾರ್ಮಿಕರ ಮೇಲೆ ದೌರ್ಜನ್ಯ ನಡೆದಿದೆ ಎಂಬ...

ಅಕ್ಷಯಬಾರ್ ಬಳಿ ವೃದ್ಧೆಗೆ ಜೀಪ್ ಡಿಕ್ಕಿಯಲ್ಲಿ ಚಿಕಿತ್ಸೆ ಫಲಿಸದೆ ಸಾವು

ಚಿಕ್ಕಮಗಳೂರು: ಮಲ್ಲಂದೂರು ರಸ್ತೆಯ ಅಕ್ಷಯ್ ಬಾರ್ ಬಳಿ ಕುಳಿತಿದ್ದ ವೃದ್ಧೆಯೊಬ್ಬರಿಗೆ ಜೀಪ್ ಡಿಕ್ಕಿ ಹೊಡೆದು, ಗಂಭೀರವಾಗಿ...

ಅಯ್ಯನಕೆರೆ ಕ್ರಾಸ್ ಬಳಿ ಬೈಕ್ ಡಿಕ್ಕಿಗೆ ಪಾದಚಾರಿ ವೃದ್ಧ ಸಾವು

ಸಖರಾಯಪಟ್ಟಣ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧರೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು...

ಕೊಟ್ಟಿಗೆಹಾರದಿಂದ ಮುಂಡಾಜೆಗೆ ಸುರೇಶ್ ಕುಮಾರ್ ವಿಶೇಷ ಪಾದಯಾತ್ರೆ

ಕೊಟ್ಟಿಗೆಹಾರ: ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 527 ವೀರ ಯೋಧರ ಸ್ಮರಣಾರ್ಥ ಹಾಗೂ ಪರಿಸರ...