ಕೊಪ್ಪ: ತೀರ್ಥಹಳ್ಳಿ–ಕೊಪ್ಪ ಮುಖ್ಯ ರಸ್ತೆಯ ಚಿಕ್ಕನಕೊಡಿಗೆ ಸಮೀಪ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ 80 ವರ್ಷದ ವೃದ್ಧ ಮೃತಪಟ್ಟಿದ್ದಾರೆ.
ಗಡಿಕಲ್ ನಿವಾಸಿ ಸಿದ್ದಯ್ಯ (80) ಮೃತಪಟ್ಟವರು. ಅ.17ರಂದು ಸಂಜೆ ಗಡಿಕಲ್ನಿಂದ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ಚಿಕ್ಕನಕೊಡಿಗೆಯ ಸಿಂಗಪ್ಪ ಅವರ ಮನೆಯ ಸಮೀಪ ಸಂಜೆ 6ರಿಂದ 6.35ರ ನಡುವೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದಲ್ಲಿ ತಲೆ ಹಾಗೂ ಕಾಲಿಗೆ ತೀವ್ರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಸಿದ್ದಯ್ಯ ಅವರನ್ನು ಸಂಬಂಧಿಕರು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಅಪಘಾತ ಎಸಗಿದ ವಾಹನದ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ಮೃತರ ಸಂಬಂಧಿ ಮಂಜುನಾಥ ಟಿ. ಅವರು ಕೊಪ್ಪ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತಕ್ಕೆ ಕಾರಣವಾದ ವಾಹನ ಹಾಗೂ ಚಾಲಕನ ಪತ್ತೆಗೆ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
80-year-old man dies in accident near Chikkanakodige
Leave a comment