ಅಜ್ಜಂಪುರ: ಮನೆಯ ಬೀರುವಿನ ಬೀಗ ಮುರಿದು ₹1.49 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಅಜ್ಜಂಪುರದ ಬುಕ್ಕಾಂಬೂದಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಹೊಸದುರ್ಗ ತಾಲ್ಲೂಕು ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುಳಾ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮೇ 25ರಿಂದ ಆಗಸ್ಟ್ 7ರ ನಡುವಿನ ಅವಧಿಯಲ್ಲಿ ಬೀರುವಿನ ಬೀಗ ಮುರಿದು, ಸುಮಾರು 30 ಗ್ರಾಂ ಚಿನ್ನಾಭರಣ ಹಾಗೂ 59 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳವಾದ ಆಭರಣಗಳ ಒಟ್ಟು ಅಂದಾಜು ಮೌಲ್ಯ ₹1,49,500 ಆಗಿದೆ. ಸಂಬಂಧಿಕರನ್ನು ವಿಚಾರಿಸಿದ ಬಳಿಕ ಮಂಜುಳಾ ಅವರು ಅ.17ರಂದು ಅಜ್ಜಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರು ಹಾಗೂ ಕಳವಾದ ಆಭರಣಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
Thieves steal gold jewellery worth ₹1.49 lakh
Leave a comment