ಮೂಡಿಗೆರೆ: ಶಿಶಿಲ–ಬೈರಾಪುರ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂಬುದು ಶಿಶಿಲ, ಶಿಬಾಜೆ, ಅರಸಿನಮಕ್ಕಿ, ಹತ್ಯಡ್ಕ ಹಾಗೂ ಕೊಕ್ಕಡ ಗ್ರಾಮಗಳ ಜನರ ಬಹುವರ್ಷಗಳ ಬೇಡಿಕೆಯಾಗಿದೆ. ಈ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಒತ್ತಾಯಿಸುವ ಉದ್ದೇಶದಿಂದ ನವೆಂಬರ್ 2ರಂದು ಅರಸಿನಮಕ್ಕಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಸಲು ಶಿಶಿಲ–ಬೈರಾಪುರ ರಸ್ತೆ ಹೋರಾಟ ಸಮಿತಿಯ ಸಮಾಲೋಚನಾ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕೆ.ಜಿ. ಗೋಖಲೆ ವಹಿಸಿದ್ದರು. ಬೈರಾಪುರ–ಶಿಶಿಲ ರಸ್ತೆ ಹೋರಾಟ ಸಮಿತಿಯ ಅಧ್ಯಕ್ಷ ಜೆ.ಎಚ್. ಹಾಲಪ್ಪ ಗೌಡ, ನಿವೃತ್ತ ಎಂಜಿನಿಯರ್ ಶಿವಪ್ರಕಾಶ್, ರಾಜ್ಯ ಜೆಡಿಎಸ್ ಕಾರ್ಯದರ್ಶಿ ನಿಡ್ವಾಳೆ ಚಂದ್ರಣ್ಣ, ಮೊಯ್ದೀನ್, ಅರಸಿನಮಕ್ಕಿ, ಸಿ.ಎ. ಬ್ಯಾಂಕ್ ನಿರ್ದೇಶಕ ಧರ್ಮರಾಜ ಅಡ್ಕಾಡಿ, ಶಿಶಿಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂದೀಪ್ ಎ.ಎಸ್., ಶಿಶಿಲೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೂರಜ್ ನೆಲ್ಲಿತಾಯ, ಚಾಮುಂಡೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೆ. ರಾಮಚಂದ್ರ, ಶಿಶಿಲೇಶ್ವರ ದೇವಸ್ಥಾನ ಆಡಳಿತ ಸಮಿತಿ ಸದಸ್ಯ ಶ್ರೀಧರ್ ರಾವ್, ನಿಡ್ಲೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಧನಂಜಯ ಗೌಡ ಹಾಗೂ ಉದ್ಯಮಿ ಕೆ. ನರಸಿಂಹ ಗೌಡ ಉಪಸ್ಥಿತರಿದ್ದರು.
ಹಕ್ಕೊತ್ತಾಯ ಸಮಿತಿ ರಚನೆ
ಸಭೆಯಲ್ಲಿ ರಸ್ತೆ ಅಭಿವೃದ್ಧಿ ಹೋರಾಟವನ್ನು ಸಂಘಟಿತವಾಗಿ ಮುನ್ನಡೆಸುವ ಉದ್ದೇಶದಿಂದ ಹಕ್ಕೊತ್ತಾಯ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ರಾಘವೇಂದ್ರ ನಾಯಕ್ ಹಾಗೂ ಕಾರ್ಯದರ್ಶಿಯಾಗಿ ಧರ್ಮರಾಜ ಅಡ್ಕಾಡಿ ಅವರನ್ನು ಆಯ್ಕೆ ಮಾಡಲಾಯಿತು.
ಇದರೊಂದಿಗೆ ಶಿಶಿಲ, ಶಿಬಾಜೆ, ಹತ್ಯಡ್ಕ, ಕಳೆಂಜ, ರೇಕ್ಯಾ ಹಾಗೂ ಕೊಕ್ಕಡ ಗ್ರಾಮಗಳಿಂದ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.
ಶಿಶಿಲ–ಬೈರಾಪುರ ರಸ್ತೆ ಅಭಿವೃದ್ಧಿಯು ಹಲವು ಗ್ರಾಮಗಳ ಜನರ ಸಂಚಾರ, ಸಂಪರ್ಕ ಹಾಗೂ ದೈನಂದಿನ ಬದುಕಿಗೆ ಮಹತ್ವದ್ದಾಗಿದೆ. ಬಹುಕಾಲದಿಂದ ಈಡೇರದ ಬೇಡಿಕೆಗೆ ಸರ್ಕಾರದ ಗಮನ ಸೆಳೆಯಲು ಸಮಾವೇಶದ ಮೂಲಕ ಒಗ್ಗಟ್ಟಿನ ಹೋರಾಟ ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
Convention on Nov 2 demanding development of Shishila–Bairapura road
Leave a comment