ತರೀಕೆರೆ: ತರೀಕೆರೆಯ ಕುಟುಂಬ ರಾಜಕಾರಣಕ್ಕೆ ಕಾಂಗ್ರೆಸ್ , ಬಿಜೆಪಿ, ದಳದ ಹೊಂದಾಣಿಕೆ ರಾಜಕೀಯದಿಂದ ಸ್ವಪಕ್ಷೀಯರು ನಲುಗಿರುವುದು ಇರಲಿ ನರಳಿ ಹೋಗಿದ್ದಾರೆ. ಇದಕ್ಕೆಲೋಚಗುಟ್ಟುವ ಶಾಸಕ ಶ್ರೀನಿವಾಸ್ ನಡವಳಿಕೆ ಫಲವೇ ಕಡೂರು ಶಾಸಕ ಆನಂದ್ ಆರ್ಭಟಿಸಿ ಬೆಂಕಿ ಬಿರುಗಾಳಿಯಂತೆ ನಾನ,ನೀನಾ ಎಂದು ಅಖಾಡಕ್ಕೆ ಇಳಿದು ರಾಜಕೀಯ ಮರಿ ಬಿಟ್ಟು ಬೆಳೆ ಬೆಳೆಸಲು ನೀರು, ಗೊಬ್ಬರಕ್ಕಿಂತ ಧೈರ್ಯ ತುಂಬುತ್ತಿದ್ದಾರೆ.
ಸಿದ್ದರಾಮಯ್ಯನವರ ಆಲೆಯ ಮೇಲೆ ಎರಡು ಬಾರಿ ಶಾಸಕರಾಗಿ ಕುಟುಂಬ ಹೊರತುಪಡಿಸಿ ಬೇರೆ ಯ ವಿಷಯವಿಲ್ಲ. ಶಾಸಕ ಶ್ರೀನಿವಾಸ್ ಶಾಸಕರ ಪತ್ನಿ ವಾಣಿ,ಮಗಳು ರಚನ , ಮೊದಲ ಮಗಳ ಯಜಮಾನ ಚೇತನ್ ಕೆಂಪರಾಜ್.ಇದು ಪಸ್ಟ್ ಲೀಸ್ಟ್,ಎರಡನೇ ಪಟ್ಟಿಯಲ್ಲಿ ಅವರ ಬಂಧುಗಳಲ್ಲಿ ಎರಡು,ಮೂರು ಜನ ತರೀಕೆರೆ ರಾಜಕೀಯದ ಜುಟ್ಟು ಹಿಡಿದಿರುವುದು ನೋಡಿದರೆ ಪಾಳೇಗಾರರು ಅಳಿದ ನಾಡ ಎನ್ನಿಸುತ್ತದೆ.
ವಿರೋಧ ಪಕ್ಷಗಳಲ್ಲಿ ಬಿಜೆಪಿ ಎಚ್ಚರವಾದಾಗ ಪ್ರತಿಭಟನೆ ಮಾಡುವುದು ಬಿಟ್ಟರೆ,ಅಳಿದುಳಿದ ದಳ ಲೀನವಾಗಿದೆ.ಗೋಪಿ ಕೃಷ್ಣ ಚುನಾವಣೆಗೆ ಬಂದು,ಹೋಗುವ ಸುಳಿದಾಡುವ ರಾಜಕಾರಣಿ ಆದರೆ ಇತ್ತೀಚೆಗೆ ಹಳ್ಳಿ ಸುತ್ತುತ್ತಿರುವ ಗೋಪಿ ಕುಮಾರ್ ಗೆಲವು,ಸೋಲು ಮುಖ್ಯವಲ್ಲ. ಶ್ರೀನಿವಾಸ್ ತಿರುಪತಿಯಲ್ಲಿ ಇರುವಂತೆ ಮಾಡುವೆ ಎಂದು ಶಪಥ ತಟ್ಟಿದ್ದಾರೆ.
ಶ್ರೀನಿವಾಸ್ ಗೆ ಸರಿಯಾಗಿ ಭಾಷಣ ಮಾಡಲು ಬರುವುದಿಲ್ಲ ಹೀಗಾಗಿ ಹಿಂದಿನ ಬಿಇಒ ಹರಿಕುಮಾರ್ ಭಾಷಣ ಬರದುಕೊಂಡು ಬಂದು ಪ್ರಾಕ್ಟೀಸ್ ಮಾಡಿಸುತ್ತಿದ್ದರು.ಈಗಲೂ ಮುಂದುವರೆದಿದೆ. ಶ್ರೀನಿವಾಸ್ ಬೆಂಗಳೂರಿನ ಸರ್ಕಾರದ ಕೆಲಸ ಬಿಟ್ಟು ಬೇರೆ ಕಡೆ ತಿರುಗಿ ನೋಡುವಂತಿಲ್ಲ.ದ್ವೇಷ ರಾಜಕಾರಣಕ್ಕೆ ಪೊಲೀಸ್ ರನ್ನು ಬಳಸಿ ಕೊಳ್ಳುವದು ಬಿಟ್ಟು ಕಾನೂನು ಬಾಹಿರವಾಗಿ ನಡೆಯುವ ಕ್ಲಬ್, ಬಾರ್ ಗಳಲ್ಲಿ ವಸೂಲಿ ಮಾಡುವ ಡ್ಯೂಟಿ .ವಾಣಿ ಕ್ಷೇತ್ರದಲ್ಲಿ ನಡೆಯುವ ಬಹುತೇಕ ಕಾರ್ಯಗಳಿಗೆ ಕಡ್ಡಾಯವಾಗಿ ಕರೆಯಬೇಕು.
ಅಕ್ಕಾ,ಅಕ್ಕ ಎಂದು ತಿರುಗಾಡುವ ಅಂಗನವಾಡಿ ,ಬಿಸಿಯೂಟ ಕಾರ್ಯಕರ್ತೆಯರು ಕೆಲವು ಶ್ರೀ ಶಕ್ತಿ ಸಂಘದ ವರು ಜೈ,ಜೈ,ಎಂದರೆ ಮುಗಿತು.ಇಂದಿರಾ ಗಾಂಧಿ ಕುಟುಂಬ ಕಲ್ಯಾಣಕ್ಕಾಗಿ ಎಮರ್ಜೆನ್ಸಿ ತಂದಂತೆ ಎರಡು ಮಕ್ಕಳು ಸಾಕು ಎಂಬ ಹುಕುಂ ಹೊರಡಿಸಿ ಬಲವಂತದಿಂದ ವಾಣಿ ಕೂಡ ವರ್ಷಕೊಮ್ಮೆ ಎಮರ್ಜೆನ್ಸಿ ತಂದಂತೆ ಗರ್ಭಿಣಿಯರ ಜೊತೆಗೆ ಅಮಾಯಕ ಮಹಿಳೆಯ “ಶ್ರೀಮಂತ” ಮಾಡಿಸುವುದು ಜೊತೆಗೆ ಸರ್ಕಾರಿ ಸೌಲಭ್ಯ ಕೊಡಿಸುವ ಬಗ್ಗೆ ವ್ಯಾಪಕ ದೂರುಗಳಿವೆ. ಶಾಸಕ ಕೂಡ ಪ್ರತಿಯೊಂದಕ್ಕೂ ಮೇಡಂ ಕೇಳಿ ಎನ್ನುತ್ತಾರೆ ಎಂದು ಪಕ್ಷದ ಕಾರ್ಯಕರ್ತರು ಮಾತಾಡಿ ಕೊಳ್ಳುತ್ತಿದ್ದಾರೆ.
ಇನ್ನೂ ರಚನ ರಾಜಕೀಯವಾಗಿ ಬೆಳೆಯ ಬೇಕು ಎಂದು ಕೆಲ ಹಳ್ಳಿಯಲ್ಲಿ ತಮ್ಮ ಹಿಂಬಾಲಕರನ್ನು ಕಾರಿನಲ್ಲಿ ಕುರಿಸಿ ಕೊಂಡು ಸುತ್ತಾಡುವುದರ ಜೊತೆಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಾಮಾನ್ಯವಾಗಿದೆ. ಈ ಬಾರಿ ಜಿ.ಪಂಗೆ ಹೋಗಬೇಕು ಎಂದು ಲಿಂಗದಳ್ಳಿ ಕ್ಷೇತ್ರ ಆಯ್ಕೆ ಮಾಡಿಕೊಂಡು ಓಡಾಟ ನಡೆಸುತ್ತಿದ್ದಾರೆ.ಒಟ್ಟಾರೆ ರಾಜಕೀಯವಾಗಿ ಬೆಳೆಯ ಬೇಕು ಶಾಸಕಳಾಗ ಬೇಕು ಎಂಬ ಹಂಬಲ ಇಟ್ಟುಕೊಂಡಿದ್ದಾರೆ.
ಕುಟುಂಬ ಐದಾರು ಕ್ವಾರಿ, ಏಳೆಂಟು ಬಾರ್ ಗಳು,ಕ್ಲಬ್, ಬಗರ್ ಹುಕಂ ,ಒಟ್ಟಾರೆ ಕಾನೂನು ಬಾಹಿರ ಕೆಲಸಗಳು ಬಹಿರಂಗವಾಗಿ ನಡೆಯುತ್ತಿವೆ.ಇದರ ಜೊತೆಗೆ ಹಿರಿಯ ಅಳಿಯ ಚೇತನ್ ಕೆಂಪರಾಜ್ ಅಧಿಕಾರಿ, ನೌಕರರ ವರ್ಗಾವಣೆ ಮತ್ತು ತಿಂಗಳು ತೆಗೆದುಕೊಳ್ಳುವ ವ್ಯವಹಾರ ಮಾಡುತ್ತಿದ್ದಾರೆ. ಕಡೂರಿನಲ್ಲಿ ದಳ,ತರೀಕೆರೆಯಲ್ಲಿ ಅಪ್ಪಟ ಕಾಂಗ್ರೆಸ್ ಡಬಲ್ ಗೇಮ್ ರಾಜಕೀಯದಲ್ಲಿ ಆನಂದ್ ವಿರುದ್ಧ ತಿರುಗಿ ದಂತೆ.ಬಲವಂತವಾಗಿ ಆಪರೇಷನ್ ಮಾಡಿಸಿದಂತೆ. ಗರ್ಭಿಣಿಯರ ಜೊತೆಗೆ ಬೇಕಾದವರಿಗೂ ನಿಂತಿದ್ದಾರೆ.
ಇದು ಹೊಸ ಬೆಳವಣಿಗೆ ಅಲ್ಲ ಗೆದ್ದಾಗಿನಿಂದ ಇಬ್ಬರ ಮಧ್ಯೆ ಮುಸುಕಿನ ಗುದ್ದಾಟ ಇತ್ತು ಈಗ ಆರ್ಭಟಿಸಿ ಬೆಂಕಿ ಬಿರುಗಾಳಿ ಬೀಸುತ್ತಿದೆ ಇದು ತಣ್ಣಗಾಗು ಲಕ್ಷಣಗಳು ಇಲ್ಲ. ಮತ್ತಷ್ಟು ಇನ್ನಷ್ಟು ಹೊತ್ತಿ ಉರಿಯುವ ಲಕ್ಷಣಗಳು ಹೆಚ್ಚಾಗಿವೆ. ಹೈಕಮಾಂಡ್ ಲೆವೆಲ್ ನಲ್ಲಿ ಆನಂದ್ ಪ್ರಭಲರಾಗಿದ್ದು ಮುಂದಿನ ರಾಜಕೀಯ ದಿಕ್ಸೂಚಿ ಶ್ರೀನಿವಾಸ್ ಗೆ ಡಿಚ್ಚಿ ಹೊಡೆಯಬಹುದು.ನಾನು,ನಾನು ಎಂದು ಮೆರೆಯ ಬೇಡ ಎಂದರು ಮೆರೆದರೆ ರಾಜಕೀಯ ವನವಾಸ ಖಚಿತ. ಈ ಹಿಂದೆ ಟಿಕೆಟ್ ತಪ್ಪಿದ ಅನುಭವವಾಗಿದೆ ಎಂಬ ಅರಿವಿಲ್ಲದ ವರ್ತನೆ ಮುಂದಿನ ದಿನಗಳಲ್ಲಿ ಮತ್ತೆ ಹೇಳುತೈತೆ,ಮತ್ತೆ ಹೇಳುತೈತೆ ಎಂಬ ಶಬ್ದ ಮತ್ತೆ, ಮತ್ತೆ ಕಿವಿಗೆ ಅಪ್ಪಳಿಸುತ್ತದೆ.
Tarikere Keechaka politician Kaduru MLA Anand Arbhata fire storm
Leave a comment