Home ನೂತನ 24 ತಾಲ್ಲೂಕು ಬರಪೀಡಿತ ತಾಲ್ಲೂಕು ಪಟ್ಟಿಯಲ್ಲಿ ಕಡೂರು ಇಲ್ಲ ….?
HomeKadurLatest Newsnamma chikmagalur

ನೂತನ 24 ತಾಲ್ಲೂಕು ಬರಪೀಡಿತ ತಾಲ್ಲೂಕು ಪಟ್ಟಿಯಲ್ಲಿ ಕಡೂರು ಇಲ್ಲ ….?

Share
Share

ಕಡೂರು: ಬರ ಘೋಷಣೆಯ ಮೊದಲ ಪಟ್ಟಿಯಲ್ಲಿ ಕಡೂರು ತಾಲ್ಲೂಕು ಕೈಬಿಡಲಾಗಿತ್ತು. ಇದೀಗ ಶುಕ್ರವಾರ ಕಡೂರು ಸೇರಿದಂತೆ 24 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಕಂದಾಯ ಇಲಾಖೆ ಅನುಮೋದಿಸಿ ಪಟ್ಟಿ ಬಿಡುಗಡೆ ಮಾಡಿದ್ದರೂ, ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಈ ಪಟ್ಟಿ ಇನ್ನೂ ತಲುಪಿಲ್ಲ ಎನ್ನಲಾಗುತ್ತಿದೆ.ಹೀಗಾದರೆ ಜಿಲ್ಲಾಡಳಿತ ಯಾವ ಮಟ್ಟಿಗೆ ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಅಸಮಾಧಾನ ವ್ಯಕ್ತಪಡಿಸಿದರು.

ಕಂದಾಯ ಇಲಾಖೆ ಅನುಮೋದಿಸಿ ರುವ ಬರಪೀಡಿತ ತಾಲ್ಲೂಕುಗಳ ಎರಡನೇ ಪಟ್ಟಿಯನ್ನು ಶನಿವಾರ ಪ್ರದರ್ಶಿಸಿ ಅವರು ಮಾತನಾಡಿ *2 ತಿಂಗಳಿನಿಂದ ಕಡೂರು ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಬೇಕು. ಕುಕ್ಕಸಮುದ್ರ ಕೆರೆಗೆ ಭದ್ರಾ ನೀರು ಹರಿಸಬೇಕು ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು ಎಂದು 40 ಕಿ.ಮೀ ಪಾದಯಾತ್ರೆ ನಡೆಸಿದ್ದರ ಪ್ರತಿಫಲ ಇದಾಗಿದೆ ಎಂದು ನಾನು ಭಾವಿಸುವು ದಿಲ್ಲ. ಆದರೆ, ಕಡೂರಿನ ಜನರು ಪ್ರತಿ ಯೊಂದು ಸೌಲಭ್ಯವನ್ನೂ ಹೋರಾಟದ ಮೂಲಕವೇ ಪಡೆಯಬೇಕಾದ ಅನಿವಾರ್ಯ ಬಂದಿರುವುದು ವಿಷಾದ ನೀಯ’ ಎಂದರು.

‘ಮೊದಲ ಪಟ್ಟಿಯಲ್ಲಿ ಕಡೂರು ತಾಲ್ಲೂಕು ಬರಪೀಡಿತ ಎಂದು ಘೋಷಣೆಯಾಗದಿರುವುದಕ್ಕೆ ಉಪಗ್ರಹ ಆಧಾರಿತ ಮಾಹಿತಿ ಹಾಗೂ ಕೇಂದ್ರದ ಮಾನದಂಡದಂತೆ ಬರ ಘೋಷಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣವನ್ನು ಆಧರಿಸಿ ಎರಡನೇ ಬರಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾ ಆಡಳಿತ ತಿಳಿಸಿತ್ತು. ಇದೀಗ ದತ್ತಾಂಶಕ್ಕಿಂತ ನೆಲದ ವಾಸ್ತವ ಸ್ಥಿತಿ (ಗ್ರೇಂಡ್‌ಟ್ರತ್) ಆಧರಿಸಿ ಕಡೂರು ಸೇರಿದಂತೆ ಹೊಸ ಪಟ್ಟಿಯನ್ನು ಅನುಮೋದಿಸಲಾಗಿದೆ ಎಂದು ಕಂದಾಯ ಇಲಾಖೆಯ ಆಯುಕ್ತ ಹೊನ್ನಾಂಬ ತಿಳಿಸಿದ್ದಾರೆ’ ಎಂದು ದತ್ತ ವಿವರಿಸಿದರು.

‘ಭದ್ರಾ ಮೇಲ್ದಂಡೆಯ ಚಿತ್ರದುರ್ಗ ಶಾಖಾ ಕಾಲುವೆಗೆ ಭಾನುವಾರ ನೀರು ಹರಿಸಲಾಗುವುದು. ನಾಲ್ಕು ದಿನಗಳಲ್ಲಿ ನೀರು ಚಿತ್ರದುರ್ಗ ತಲುಪಲಿದ್ದು, ನಂತರ ಕಡೂರು ತಾಲ್ಲೂಕಿನ ಮೂರು ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಮೇಂದ್ರ ತಿಳಿಸಿದ್ದಾರೆ. 4 ದಿನಗಳವರೆಗೆ ಕಾಯುತ್ತೇವೆ’ ಎಂದರು.

ತಾಲ್ಲೂಕಿನಲ್ಲಿ ಬಿತ್ತನೆಯೇ ನಡೆದಿಲ್ಲ. ಬರ ಪರಿಸ್ಥಿತಿ ಇರುವುದರಿಂದ ಸರ್ಕಾರ ಎಕರೆಗೆ ಇಂತಿಷ್ಟು ಪರಿಹಾರ ನೀಡುವುದು ಸೂಕ್ತ. ಪಶುಪಾಲನಾ ಇಲಾಖೆಯು ಮೇವಿನ ಲಭ್ಯತೆ ಕುರಿತು ನೀಡಿರುವ ಮಾಹಿತಿಗೂ, ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ರೈತರು ತಿಳಿಸಿದ ಮಾಹಿತಿಗೂ ವ್ಯತ್ಯಾಸ ಕಂಡುಬರುತ್ತಿದೆ. ಅಧಿಕಾರಿಗಳು ಸರ್ಕಾರಕ್ಕೆ ನೈಜ ಮಾಹಿತಿಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕೆ. ಬಿದರೆ ಜಗದೀಶ್, ಬಿ.ಟಿ. ಗಂಗಾಧರನಾಯ್ಕ, ಪ್ರೇಮಕುಮಾರ್, ಚೌಳಹಿರಿಯೂರು ಅಶೋಕ್‌ ಇದ್ದರು.

Kadur is not in the list of the new 24 drought-affected taluks…?

Share

Leave a comment

Leave a Reply

Your email address will not be published. Required fields are marked *

Don't Miss

ಕಡೂರು ತಾಲೂಕು ಸರ್ಕಾರದ ಬರಪಟ್ಟಿಗೆ ವೈ.ಎಸ್.ವಿ. ದತ್ತಾ ಆಗ್ರಹ

ಕಡೂರು: ಇಡೀ ಜಿಲ್ಲೆಯಲ್ಲಿ ಅತ್ಯಂತ ಬರಗಾಲಕ್ಕೆ ತುತ್ತಾಗಿರುವ ತಾಲೂಕು ಎಂದರೆ ಕಡೂರು ತಾಲೂಕು, ಈ ಸಾಲಿನಲ್ಲಿ ಪ್ರಾರಂಭದಿಂದಲೂ  ಮಳೆ ಬಂದಿಲ್ಲ, ಮುಂಗಾರು ಬಿತ್ತನೆ ಆಗಿಲ್ಲ, ಆಗಸ್ಟ್ ತಿಂಗಳು ಕಳೆಯುತ್ತಾ ಬಂದರು ರಾಗಿ...

ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಚಿಕ್ಕಮಗಳೂರು: ನಗರದ ಟಿಪ್ಪುನಗರದಲ್ಲಿ ಈದ್ ಮಿಲಾದ್ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಅವರ ಬೃಹತ್ ಕಟೌಟ್‌ಗೆ ಪಾಕಿಸ್ತಾನ ಪರವಾದ ಹಾಡನ್ನು ಅಳವಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದನ್ನು ಖಂಡಿಸಿ, ರಾಷ್ಟ್ರ ಸುರಕ್ಷಾ ಸಮಿತಿ...

Related Articles

ಕಸಾಪ ಅಧ್ಯಕ್ಷಗಿರಿಗೆ ಜಾಣಗೆರೆ ವೆಂಕಟರಾಮಯ್ಯ ಸೂಕ್ತ

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಸರ್ಕಾರ ಚುನಾವಣಾಧಿಕಾರಿಯನ್ನು...

ಚಿಕ್ಕೊಳಲೆ ಸುತ್ತ ಕುರುಡು ಕಾಡುಕೋಣದ ಉಪಟಳ

ಚಿಕ್ಕಮಗಳೂರು: ನಗರದ ಸಮೀಪದ ಚಿಕ್ಕೊಳಲೆ ಸುತ್ತಮುತ್ತ ಹಲವು ದಿನಗಳಿಂದ ಕಣ್ಣು ಕಾಣದ ಕಾಡುಕೋಣವೊಂದು ಸುತ್ತಾಡುತ್ತಿದ್ದು, ಗ್ರಾಮಸ್ಥರಲ್ಲಿ...

ರಾಜಕಾರಣದಲ್ಲೂ ಮಹಿಳೆಯರು ಸ್ಥಾನಮಾನಕ್ಕಾಗಿ ಒಗ್ಗಟ್ಟಾಗಿ ಧ್ವನಿ ಎತ್ತಬೇಕು

ಚಿಕ್ಕಮಗಳೂರು:  ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಳಿಕ ಡಿಕೆ ಶಿವಕುಮಾರ ನೇತೃತ್ವದ ರಚನೆಯಾದ ನೂತನ ಸಚಿವ...

ಗುಟ್ಕಾ ನಿಷೇಧ ವಿರೋಧಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರತಿಭಟನೆ

ಚಿಕ್ಕಮಗಳೂರು: ಗುಟ್ಕಾ ನಿಷೇಧದ ಕುರಿತು ರಾಜ್ಯ ಸರ್ಕಾರ ನೀಡಿರುವ ಹೇಳಿಕೆಯಿಂದ ಅಡಕೆ ಬೆಲೆ ಕುಸಿದು ರೈತರು...