Home namma chikmagalur chikamagalur ಉತ್ತಮ ರಾಷ್ಟ್ರ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಅನನ್ಯ
chikamagalurHomeLatest Newsnamma chikmagalur

ಉತ್ತಮ ರಾಷ್ಟ್ರ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಅನನ್ಯ

Share
Share

ನರಸಿಂಹರಾಜಪುರ: ಉತ್ತಮ ರಾಷ್ಟ್ರ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಅನನ್ಯವಾದುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಪಟ್ಟಣದ ಎಲ್‌.ಎಫ್. ಚರ್ಚ್ ಸಮುದಾಯ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಇತರೆ ಇಲಾಖೆಗಳ ಆಶ್ರಯದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಕರಾಗಿ, ರಾಷ್ಟ್ರಪತಿಯಾಗಿದ್ದ ಸರ್ವಪಲ್ಲಿ ರಾಧಕೃಷ್ಣನ್ ಅವರ ಜನ್ಮದಿನವನ್ನು ರಾಷ್ಟ್ರದಾದ್ಯಂತ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮೂಲ ಸೌಕರ್ಯಗಳಲ್ಲಿ ಶಿಕ್ಷಣವೂ ಒಂದಾಗಿದ್ದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ದೇಶಕ್ಕೆ, ಸಮಾಜಕ್ಕೆ ಉತ್ತಮ ನಾಗರಿಕರನ್ನು ಕೊಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳು ತಂದೆ ತಾಯಿ, ಗುರುಗಳಿಗೆ ಗೌರವ ನೀಡಬೇಕು. ಯಾರು ಗುರುಗಳಿಗೆ ಗೌರವ ಕೊಡುತ್ತಾರೋ ಅವರು ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ. ನಾನು ರಾಜಕಾರಣಿಯಾಗಲು ಶಕ್ತಿಕೊಟ್ಟಿದ್ದು ಶಿಕ್ಷಕರು ಎಂದು ಸ್ಮರಿಸಿದರು.

ವಿಧಾನ ಪರಿಷತ್ ಸದಸ್ಯೆ ಆರತಿಕೃಷ್ಣ ಮಾತನಾಡಿ, ಹಿಂದೆ ಅಮೆರಿಕದ ರಾಯಭಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಬೆಂಗಳೂರಿನಲ್ಲಿ ಕೃಷ್ಣ ಫೌಂಡೇಷನ್ ಹುಟ್ಟು ಹಾಕಿಮ ಅದರ ಮೂಲಕ ಶೃಂಗೇರಿ ಕ್ಷೇತ್ರದ ಅನೇಕ ಶಾಲೆಗಳಿಗೆ ಕೊಡುಗೆ ನೀಡಿ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಶೃಂಗೇರಿಯ ಮೆಣಸೆ ಶಾಲೆಗೆ ಬಸ್ ಕೊಡುಗೆಯಾಗಿ ನೀಡಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಶಿಕ್ಷಕರು ದೀಪವಿದ್ದಂತೆ. ಅಜ್ಞಾನಎಂಬ ಕತ್ತಲೆಯಿಂದ ಸುಜ್ಞಾನ ಎಂಬ ಬೆಳಕಿಗೆನೆಡೆಗೆ ಕೊಂಡೊಯ್ಯುವ ಮಹತ್ತರ ಕೆಲಸ ಮಾಡಿಕೊಂಡು ಬಂದಿದ್ದಾರೆ. ಶಿಕ್ಷಕರನ್ನು ದೇವರಸ್ಥಾನದಲ್ಲಿಡಲಾಗಿದೆ. ಗುರು ಮತ್ತು ಗುರಿ ಇದ್ದಾಗ ಯಶಸ್ಸು ಸಾಧಿಸಲು ಸಾಧ್ಯ. ಶಿಕ್ಷಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಭಾಗವಹಿಸಲು ಪ್ರೋತ್ಸಾಹಿಸುವದರ ಜತೆಗೆ ನೈತಿಕ ಶಿಕ್ಷಣ ನೀಡುವ ಕಾರ್ಯ ಮಾಡಬೇಕಾಗಿದೆ ಎಂದರು.

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಮ ಪ್ರಸಾದ್‌ ಮನೋಹರ್, ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್. ಕೀರ್ತನಾ, ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ, ಕೆಡಿಪಿ ಸದಸ್ಯರಾದ ಎಂ.ವಿ. ರಮೇಶ್, ಕೆ.ವಿ. ಸಾಜು, ಅಂಜುಮ್, ಸಮೀರಾ ನಹೀಂ, ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ತಿಮ್ಮರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನ ಅಂಜುಮ್, ಶಿಕ್ಷಣ ದಿನಾಚರಣೆಯ ಹಣಕಾಸು ಸಮಿತಿಯ ಗೇರುಬೈಲು ನಟರಾಜ್, ಪಿ.ಆರ್. ಸದಾಶಿವ, ಪ್ರಶಾಂತ್ ಶೆಟ್ಟಿ, ಕೆ.ಎಂ. ಸುಂದರೇಶ್, ಈ.ಸಿ. ಜೋಯಿ, ಜುಬೇದ, ಸುನಿಲ್ ಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎಲ್. ಮನಿಷ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ, ಅಶೋಕ್, ರಾಘವೇಂದ್ರ, ಶಿಲ್ಪಕುಮಾರಿ, ತಮನ್ನಾ ಇದ್ದರು.

ಜಿಲ್ಲಾಮಟ್ಟದ ಉತ್ತಮ ಪ್ರಶಸ್ತಿ ಪಡೆದ 24 ಶಿಕ್ಷಕರಿಗೆ, 12 ಮಂದಿ ನಿವೃತ್ತ ಶಿಕ್ಷಕರಿಗೆ, ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

The role of teachers in building a better nation is unique.

Share

Leave a comment

Leave a Reply

Your email address will not be published. Required fields are marked *

Don't Miss

ಕಡೂರು ತಾಲೂಕು ಸರ್ಕಾರದ ಬರಪಟ್ಟಿಗೆ ವೈ.ಎಸ್.ವಿ. ದತ್ತಾ ಆಗ್ರಹ

ಕಡೂರು: ಇಡೀ ಜಿಲ್ಲೆಯಲ್ಲಿ ಅತ್ಯಂತ ಬರಗಾಲಕ್ಕೆ ತುತ್ತಾಗಿರುವ ತಾಲೂಕು ಎಂದರೆ ಕಡೂರು ತಾಲೂಕು, ಈ ಸಾಲಿನಲ್ಲಿ ಪ್ರಾರಂಭದಿಂದಲೂ  ಮಳೆ ಬಂದಿಲ್ಲ, ಮುಂಗಾರು ಬಿತ್ತನೆ ಆಗಿಲ್ಲ, ಆಗಸ್ಟ್ ತಿಂಗಳು ಕಳೆಯುತ್ತಾ ಬಂದರು ರಾಗಿ...

ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಚಿಕ್ಕಮಗಳೂರು: ನಗರದ ಟಿಪ್ಪುನಗರದಲ್ಲಿ ಈದ್ ಮಿಲಾದ್ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಅವರ ಬೃಹತ್ ಕಟೌಟ್‌ಗೆ ಪಾಕಿಸ್ತಾನ ಪರವಾದ ಹಾಡನ್ನು ಅಳವಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದನ್ನು ಖಂಡಿಸಿ, ರಾಷ್ಟ್ರ ಸುರಕ್ಷಾ ಸಮಿತಿ...

Related Articles

ಕಸಾಪ ಅಧ್ಯಕ್ಷಗಿರಿಗೆ ಜಾಣಗೆರೆ ವೆಂಕಟರಾಮಯ್ಯ ಸೂಕ್ತ

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಸರ್ಕಾರ ಚುನಾವಣಾಧಿಕಾರಿಯನ್ನು...

ಚಿಕ್ಕೊಳಲೆ ಸುತ್ತ ಕುರುಡು ಕಾಡುಕೋಣದ ಉಪಟಳ

ಚಿಕ್ಕಮಗಳೂರು: ನಗರದ ಸಮೀಪದ ಚಿಕ್ಕೊಳಲೆ ಸುತ್ತಮುತ್ತ ಹಲವು ದಿನಗಳಿಂದ ಕಣ್ಣು ಕಾಣದ ಕಾಡುಕೋಣವೊಂದು ಸುತ್ತಾಡುತ್ತಿದ್ದು, ಗ್ರಾಮಸ್ಥರಲ್ಲಿ...

ರಾಜಕಾರಣದಲ್ಲೂ ಮಹಿಳೆಯರು ಸ್ಥಾನಮಾನಕ್ಕಾಗಿ ಒಗ್ಗಟ್ಟಾಗಿ ಧ್ವನಿ ಎತ್ತಬೇಕು

ಚಿಕ್ಕಮಗಳೂರು:  ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಳಿಕ ಡಿಕೆ ಶಿವಕುಮಾರ ನೇತೃತ್ವದ ರಚನೆಯಾದ ನೂತನ ಸಚಿವ...

ಗುಟ್ಕಾ ನಿಷೇಧ ವಿರೋಧಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರತಿಭಟನೆ

ಚಿಕ್ಕಮಗಳೂರು: ಗುಟ್ಕಾ ನಿಷೇಧದ ಕುರಿತು ರಾಜ್ಯ ಸರ್ಕಾರ ನೀಡಿರುವ ಹೇಳಿಕೆಯಿಂದ ಅಡಕೆ ಬೆಲೆ ಕುಸಿದು ರೈತರು...