Home ಆನ್‌ಲೈನ್ ಟ್ರೇಡಿಂಗ್ ಹೂಡಿಕೆ ಹೆಸರಿನಲ್ಲಿ ವಿದ್ಯಾರ್ಥಿನಿಗೆ ₹4.77 ಲಕ್ಷ ವಂಚನೆ
HomeLatest Newsnamma chikmagalur

ಆನ್‌ಲೈನ್ ಟ್ರೇಡಿಂಗ್ ಹೂಡಿಕೆ ಹೆಸರಿನಲ್ಲಿ ವಿದ್ಯಾರ್ಥಿನಿಗೆ ₹4.77 ಲಕ್ಷ ವಂಚನೆ

Share
Share

ಚಿಕ್ಕಮಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಭಾರಿ ಲಾಭ ನೀಡುವುದಾಗಿ ನಂಬಿಸಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರಿಂದ ₹4.77 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ. ಈ ಸಂಬಂಧ ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಆಗಸ್ಟ್ 27ರಂದು ಮನೆಯಲ್ಲಿ ಮೊಬೈಲ್ ನೋಡುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಗಮನಕ್ಕೆ ಇನ್‌ಸ್ಟಾಗ್ರಾಂನ akansha.harithaaa ಎಂಬ ಖಾತೆಯಲ್ಲಿದ್ದ ಜಾಹೀರಾತು ಬಂದಿತ್ತು. ಅದರಲ್ಲಿ ವಿದ್ಯಾರ್ಥಿನಿಯರಿಗೆ ದೊಡ್ಡ ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ ಡೈರೆಕ್ಟ್ ಮೆಸೇಜ್ ಮಾಡುವಂತೆ ತಿಳಿಸಲಾಗಿತ್ತು. ಇದನ್ನು ಗಮನಿಸಿದ ವಿದ್ಯಾರ್ಥಿನಿ ಸಂದೇಶ ಕಳುಹಿಸಿದಾಗ, ಟ್ರೇಡಿಂಗ್‌ನಲ್ಲಿ ಕನಿಷ್ಠ ₹750 ಹೂಡಿಕೆ ಮಾಡಿದರೆ 15 ನಿಮಿಷಗಳಲ್ಲಿ ₹14,449 ನೀಡುವುದಾಗಿ, ಸಾಧ್ಯವಾಗದಿದ್ದರೆ ಹೂಡಿಕೆ ಹಣವನ್ನು ವಾಪಸ್ ನೀಡುವುದಾಗಿ ಭರವಸೆ ನೀಡಲಾಗಿದೆ ಎನ್ನಲಾಗಿದೆ.

ಇದನ್ನು ನಂಬಿದ ವಿದ್ಯಾರ್ಥಿನಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಪಡೆಯುವ ಉದ್ದೇಶದಿಂದ ಆರೋಪಿಗಳು ಕಳುಹಿಸಿದ ವಿವಿಧ ಕ್ಯೂಆರ್ ಕೋಡ್‌ಗಳಿಗೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಮೊದಲು ₹750 ಪಾವತಿಸಿದ ಬಳಿಕ ಟ್ರಾನ್ಸ್‌ಫರ್ ಫೀಜ್ ಹೆಸರಿನಲ್ಲಿ ₹5,750, ಮತ್ತೊಮ್ಮೆ ₹5,750 ಸೇರಿದಂತೆ ₹10,000, ₹4,998, ₹5,500, ₹5,500, ₹35,000 ಹಾಗೂ ₹20,000 ಸೇರಿದಂತೆ ಹಲವು ಮೊತ್ತಗಳನ್ನು ಫೋನ್‌ಪೇ, ಗೂಗಲ್ ಪೇ ಮತ್ತು ಪೇಟಿಎಂ ಮೂಲಕ ಪಾವತಿಸಿದ್ದಾರೆ.

ಆಗಸ್ಟ್ 28ರಂದು ವಿವಿಧ ಫೀಜ್‌ಗಳ ಹೆಸರಿನಲ್ಲಿ ಮತ್ತೆ ₹30,000 ಹಾಗೂ ₹15,000 ವರ್ಗಾವಣೆ ಮಾಡಲಾಗಿದೆ. ಬಳಿಕ ಆರೋಪಿಗಳು ನೀಡಿದ ಇಂಡಸ್‌ಇಂಡ್ ಬ್ಯಾಂಕ್ ಖಾತೆಗೆ ₹10,000, ₹10,000 ಹಾಗೂ ₹30,000 ಮತ್ತು ಬಿಹಾರ ಗ್ರಾಮೀಣ ಬ್ಯಾಂಕ್ ಖಾತೆಗೆ ₹20,000 ಪಾವತಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಗಸ್ಟ್ 29ರಂದು ಬಿಹಾರ ಗ್ರಾಮೀಣ ಬ್ಯಾಂಕ್ ಖಾತೆಗೆ ₹20,000 ಹಾಗೂ ₹31,000 ಮತ್ತು ಇಂಡಸ್‌ಇಂಡ್ ಬ್ಯಾಂಕ್ ಖಾತೆಗೆ ₹50,000 ವರ್ಗಾವಣೆ ಮಾಡಿದ್ದಾರೆ. ಆಗಸ್ಟ್ 30ರಂದು ಇಂಡಸ್‌ಇಂಡ್ ಬ್ಯಾಂಕ್ ಖಾತೆಗೆ ₹17,000 ಹಾಗೂ ₹20,000, ಆಗಸ್ಟ್ 31ರಂದು ಬಿಹಾರ ಗ್ರಾಮೀಣ ಬ್ಯಾಂಕ್ ಖಾತೆಗೆ ₹15,000 ಹಾಗೂ ₹25,000 ಪಾವತಿಸಿದ್ದಾರೆ ಎನ್ನಲಾಗಿದೆ.

ಇದಲ್ಲದೆ, ಆಗಸ್ಟ್ 31ರಂದು ಕ್ಯೂಆರ್ ಕೋಡ್ ಮೂಲಕ ₹50,000 ಹಾಗೂ ಇಂಡಸ್‌ಇಂಡ್ ಬ್ಯಾಂಕ್ ಖಾತೆಗೆ ₹35,000 ಹಣವನ್ನು ವಿದ್ಯಾರ್ಥಿನಿಯ ತಂದೆಯವರ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ ಫೋನ್‌ಪೇ ಮೂಲಕ ವರ್ಗಾವಣೆ ಮಾಡಲಾಗಿದೆ.

ಹೀಗೆ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಬಹುದೆಂದು ನಂಬಿ ಆರೋಪಿಗಳು ಸೂಚಿಸಿದ ವಿವಿಧ ಕ್ಯೂಆರ್ ಕೋಡ್‌ಗಳು ಹಾಗೂ ಬ್ಯಾಂಕ್ ಖಾತೆಗಳಿಗೆ ಒಟ್ಟು ₹4.77 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದಾರೆ.

ನಂತರ ಹೂಡಿಕೆ ಮಾಡಿರುವ ಹಣದ ಲಾಭ ಅಥವಾ ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ, ಮತ್ತೆ ₹25,000 ಪಾವತಿಸುವಂತೆ ಆರೋಪಿಗಳು ಸೂಚಿಸಿದ್ದಾರೆ. ಇದರಿಂದ ಅನುಮಾನಗೊಂಡ ವಿದ್ಯಾರ್ಥಿನಿ ಮನೆಯವರಲ್ಲಿ ವಿಚಾರಿಸಿದಾಗ ಹೂಡಿಕೆ ಹೆಸರಿನಲ್ಲಿ ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ಮೂರು ಸ್ವೀಕೃತಿ ಸಂಖ್ಯೆಗಳ ಮೂಲಕ ದೂರು ದಾಖಲಿಸಿದ್ದಾರೆ. ಬಳಿಕ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದಾರೆ.

ಈ ಸಂಬಂಧ ಠಾಣಾ ಮೊ.ನಂ. 46/2026ರಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(C), 66(D) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Student cheated of ₹4.77 lakh in the name of online trading investment

Share

Leave a comment

Leave a Reply

Your email address will not be published. Required fields are marked *

Don't Miss

ರೈಲ್ವೆ ಕಾಮಗಾರಿಗೆ ಜಮೀನು ಬಳಕೆ: ಪರಿಹಾರ ನೀಡುವಂತೆ ರೈತ ಸಂಘ ಒತ್ತಾಯ

ಚಿಕ್ಕಮಗಳೂರು: ರೈಲ್ವೆ ಕಾಮಗಾರಿಗಾಗಿ ರೈತರ ಜಮೀನು ಹಾಗೂ ವಾಸದ ಮನೆಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಪರಿಹಾರ ನೀಡುವವರೆಗೆ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ...

ಬಿಎಫ್‌ಐಎಲ್‌ ಸಂಸ್ಥೆಯಲ್ಲಿ ₹5.50 ಲಕ್ಷ ದುರುಪಯೋಗ: ಇಬ್ಬರು ಸಿಬ್ಬಂದಿ ವಿರುದ್ಧ ಪ್ರಕರಣ

ನರಸಿಂಹರಾಜಪುರ: ಭಾರತ್ ಫೈನಾನ್ಸಿಯಲ್ ಇನ್‌ಕ್ಲೂಶನ್ ಲಿಮಿಟೆಡ್‌ (ಬಿಎಫ್‌ಐಎಲ್‌) ಸಂಸ್ಥೆಯ ಸೇಫ್‌ ಲಾಕರ್‌ನಲ್ಲಿದ್ದ ಚೆಕ್‌ಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ಬಾರದಂತೆ ತೆಗೆದುಕೊಂಡು ₹5.50 ಲಕ್ಷ ಹಣವನ್ನು ಬಿಡಿಸಿಕೊಂಡು ದುರುಪಯೋಗಪಡಿಸಿಕೊಂಡ ಆರೋಪದಡಿ ಇಬ್ಬರು ಸಿಬ್ಬಂದಿ ವಿರುದ್ಧ...

Related Articles

ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆಯಿಂದ ಪ್ರತಿಭಟನೆ

ಚಿಕ್ಕಮಗಳೂರು: ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಕಡೂರು ಹಾಗೂ ಚಿಕ್ಕಮಗಳೂರು ತಾಲ್ಲೂಕುಗಳನ್ನು...

ಯುವತಿ ಮೇಲೆ ಅತ್ಯಾಚಾರ-ಕೊಲೆ ಬೆದರಿಕೆ ಆರೋಪ

ಚಿಕ್ಕಮಗಳೂರು: ಯುವತಿಗೆ ಅತ್ಯಾಚಾರ ಎಸಗಿದ ಆರೋಪ ಹಾಗೂ ಬಳಿಕ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಪಂಚನಹಳ್ಳಿ...

ಮನೆಯ ಹಿಂಭಾಗದಲ್ಲಿ ಬೆಳೆದಿದ್ದ 12.250 ಕೆ.ಜಿ. ಹಸಿ ಗಾಂಜಾ ವಶ

ತರೀಕೆರೆ: ತಾಲ್ಲೂಕಿನ ಬೆಟ್ಟತಾವರೆಕೆರೆ ಗ್ರಾಮದ ನಿವಾಸಿ ದಿನೇಶ್ ಎಂಬುವವರು ತಮ್ಮ ಮನೆಯ ಹಿಂಭಾಗದಲ್ಲಿ ಬೆಳೆದಿದ್ದ ಸುಮಾರು...

ಪತ್ನಿ ಕೊಲೆ ಮಾಡಿದ ಗಂಡನಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು: ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ 1ನೇ ಹೆಚ್ಚುವರಿ ಜಿಲ್ಲಾ...