Home namma chikmagalur chikamagalur ಹೊಸಪೇಟೆ- ಅರಸೀಕೆರೆ ನಡುವೆ ವಿಶೇಷ ಡೆಮು ರೈಲು ಸೇವೆ
chikamagalurHomeLatest Newsnamma chikmagalur

ಹೊಸಪೇಟೆ- ಅರಸೀಕೆರೆ ನಡುವೆ ವಿಶೇಷ ಡೆಮು ರೈಲು ಸೇವೆ

Share
Share

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಶಿವನಿ, ಅಜ್ಜಂಪುರ, ಬೀರೂರು, ಕಡೂರು ಹಾಗೂ ದೇವನೂರು ಭಾಗದ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ನೈರುತ್ಯ ರೈಲ್ವೆಯು ಹೊಸಪೇಟೆ ಹಾಗೂ ಅರಸೀಕೆರೆ ನಡುವೆ ಕಾಯ್ದಿರಿಸದ ವಿಶೇಷ ಡೆಮು ರೈಲು ಸೇವೆಯನ್ನು ಆರಂಭಿಸಲು ಅಧಿಸೂಚನೆ ಹೊರಡಿಸಿದೆ.

ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ನಿತ್ಯ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ 8 ಬೋಗಿಗಳ ವಿಶೇಷ ರೈಲು ಸೇವೆಯನ್ನು ಜಾರಿಗೆ ತರಲಾಗುತ್ತಿದೆ. ಈ ರೈಲು ಸೇವೆಯು 2026ರ ಆಗಸ್ಟ್ 28ರಿಂದ ನವೆಂಬರ್ 27ರವರೆಗೆ ವಾರದಲ್ಲಿ ಐದು ದಿನಗಳು (ಸೋಮವಾರದಿಂದ ಶುಕ್ರವಾರದವರೆಗೆ) ಕಾರ್ಯನಿರ್ವಹಿಸಲಿದ್ದು, ಶನಿವಾರ ಮತ್ತು ಭಾನುವಾರ ಸಂಚಾರ ಇರುವುದಿಲ್ಲ.

ಹೊಸಪೇಟೆಯಿಂದ ಅರಸೀಕೆರೆಗೆ ತೆರಳುವ ರೈಲು ಸಂಖ್ಯೆ 07343 ಪ್ರತಿದಿನ ಬೆಳಿಗ್ಗೆ 6:30ಕ್ಕೆ ಹೊಸಪೇಟೆಯಿಂದ ಹೊರಟು ದಾವಣಗೆರೆ, ಚಿಕ್ಕಜಾಜೂರು ಮಾರ್ಗವಾಗಿ ಮಧ್ಯಾಹ್ನ 11:40ಕ್ಕೆ ಶಿವನಿ, 11:51ಕ್ಕೆ ಅಜ್ಜಂಪುರ, 12:09ಕ್ಕೆ ಬೀರೂರು, 12:21ಕ್ಕೆ ಕಡೂರು ಹಾಗೂ 12:43ಕ್ಕೆ ದೇವನೂರು ನಿಲ್ದಾಣ ತಲುಪಿ, ಅಂತಿಮವಾಗಿ ಮಧ್ಯಾಹ್ನ 2:20ಕ್ಕೆ ಅರಸೀಕೆರೆ ತಲುಪಲಿದೆ.

ಮರುಪ್ರಯಾಣದಲ್ಲಿ ರೈಲು ಸಂಖ್ಯೆ 07344 ಅರಸೀಕೆರೆಯಿಂದ ಮಧ್ಯಾಹ್ನ 2:30ಕ್ಕೆ ಹೊರಟು ಮಧ್ಯಾಹ್ನ 2:44ಕ್ಕೆ ದೇವನೂರು, 3:00 ಗಂಟೆಗೆ ಕಡೂರು, 3:10ಕ್ಕೆ ಬೀರೂರು, 3:28ಕ್ಕೆ ಅಜ್ಜಂಪುರ ಹಾಗೂ 3:38ಕ್ಕೆ ಶಿವನಿ ನಿಲ್ದಾಣದ ಮೂಲಕ ಸಂಚರಿಸಿ ರಾತ್ರಿ 9:30ಕ್ಕೆ ಹೊಸಪೇಟೆ ತಲುಪಲಿದೆ.

ಈ ರೈಲು ಸಂಚಾರದಿಂದಾಗಿ ತರೀಕೆರೆ, ಕಡೂರು ಭಾಗದ ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿ-ವಿಜಯನಗರ ಜಿಲ್ಲೆಗಳಿಗೆ ಪ್ರಯಾಣಿಸಲು ಸುಲಭ ಹಾಗೂ ಕಡಿಮೆ ವೆಚ್ಚದ ಸಂಪರ್ಕ ಕಲ್ಪಿಸಿದಂತಾಗಿದೆ.

Special DEMU train service between Hospet-Arasikere

Share

Leave a comment

Leave a Reply

Your email address will not be published. Required fields are marked *

Don't Miss

ಲಾರಿ ಡಿಕ್ಕಿಗೆ ಪಶುವೈದ್ಯಕೀಯ ಇಲಾಖೆ ಸಿಬ್ಬಂದಿ ಸಾವು

ಅಜ್ಜಂಪುರ: ಕರ್ತವ್ಯಕ್ಕೆ ತೆರಳುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಶುವೈದ್ಯಕೀಯ ಇಲಾಖೆಯ ಅಟೆಂಡರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗಿರಿಯಾಪುರದ ಜ್ಞಾನ ದೀಪ ಶಾಲೆ...

ವಿದ್ಯುತ್ ಸ್ಪರ್ಶ: ಬೇಲಿ ಕಟಾವು ಮಾಡುತ್ತಿದ್ದ ವಾಚ್‌ಮನ್ ಸಾವು

ತರೀಕೆರೆ: ತೋಟದ ಬೇಲಿ ಕಟಾವು ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಾಚ್‌ಮನ್ ಮೃತಪಟ್ಟಿರುವ ಘಟನೆ ತರೀಕೆರೆ ಪಟ್ಟಣದ ಗಾಳಿಹಳ್ಳಿ ಕ್ರಾಸ್‌ನಲ್ಲಿ ಆ.20ರಂದು ನಡೆದಿದೆ. ಮೃತರನ್ನು ಲಿಂಗದಹಳ್ಳಿ ಕಾವಲ್ ಆರ್.ಸಿ. ಕಾಲೋನಿ...

Related Articles

ಕಾಫಿನಾಡಿನಲ್ಲಿ ಎಚ್1ಎನ್1 ಪ್ರಕರಣ ಏರಿಕೆ: 24 ಮಂದಿಗೆ ಸೋಂಕು ದೃಢ

ಚಿಕ್ಕಮಗಳೂರು:  ಕಾಫಿನಾಡಿನಲ್ಲಿ ಕಳೆದೊಂದು ವಾರದಿಂದ ವೈರಲ್ ಫೀವರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜ್ವರ, ನೆಗಡಿ, ಕೆಮ್ಮು ಹಾಗೂ...

ಉಪ ಪೊಲೀಸ್ ಠಾಣೆಗಳ ತೆರೆಯುವಂತೆ ಗೃಹ ಸಚಿವರಿಗೆ ಒತ್ತಾಯ

ಚಿಕ್ಕಮಗಳೂರು:  ಜಿಲ್ಲೆಯ ಕೆಲವು ಕಡೆ ಉಪ ಪೊಲೀಸ್ ಠಾಣೆಗಳನ್ನು ತೆರೆಯುವಂತೆ ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ.ಭರತ್...

ಆಲ್ದೂರಿನಲ್ಲಿ ಟೈಲ್ಸ್ ಮೇಲೆ ಜಾರಿ ಬಿದ್ದ ರೈತ ಸಾವು

ಆಲ್ದೂರು: ಅಡುಗೆ ಮನೆಯ ನೆಲದ ಮೇಲೆ ಬಿದ್ದಿದ್ದ ನೀರನ್ನು ಗಮನಿಸದೆ ಟೈಲ್ಸ್ ಮೇಲೆ ಕಾಲಿಟ್ಟು ಜಾರಿ...

ಕಲ್ಯಾಣನಗರ 5ನೇ ಕ್ರಾಸ್‌ನಲ್ಲಿ ಮಹಿಳೆಯ ಮಾಂಗಲ್ಯ ಸರ ಕಳವು

ಚಿಕ್ಕಮಗಳೂರು: ಭಜನೆ ಮುಗಿಸಿಕೊಂಡು ಸ್ನೇಹಿತೆಯೊಂದಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಗೃಹಿಣಿಯೊಬ್ಬರ ಕುತ್ತಿಗೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು...