Home namma chikmagalur chikamagalur ಬದಲಾದ ಪರಿಸ್ಥಿತಿಯಲ್ಲಿ ಪಠ್ಯ ಬದಲಾಗಬೇಕಾಗಿದೆ
chikamagalurLatest Newsnamma chikmagalur

ಬದಲಾದ ಪರಿಸ್ಥಿತಿಯಲ್ಲಿ ಪಠ್ಯ ಬದಲಾಗಬೇಕಾಗಿದೆ

Share
Share

10ನೇ ತರಗತಿ ಸಮಾಜ ವಿಜ್ಞಾನ ಭೂಗೋಳ ವಿಭಾಗದಲ್ಲಿ ಅಧ್ಯಾಯ11ಭಾರತದ ಋತುಗಳು ಪುಟ ಸಂಖ್ಯೆ 100 ಮೊದಲನೇ ಪ್ಯಾರಾದಲ್ಲಿ ಬರುವ ಅಧಿಕ ಮಳೆ ಬೀಳುವ ಪ್ರದೇಶ: ಮೇಘಾಲಯದ “ಮಾಸಿನ್ ರಾಮ್”ದೇಶದಲ್ಲಿಯೇ ಅತ್ಯಧಿಕ ಮಳೆ ಪಡೆಯುವುದು.ಇದು ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಮಳೆಯನ್ನು ದಾಖಲಿಸಿದೆ.

ಹಾಗಾದರೆ, ಪ್ರಪಂಚದಲ್ಲಿಯೇ ಅತಿ ಹೆಚ್ಚು ಮಳೆಯನ್ನು ಅಥವಾ ಭಾರತದಲ್ಲೇ ಅತಿ ಹೆಚ್ಚು ಮಳೆ ಬೀಳುವುದು ಚಿರಾಪುಂಜಿ ಯಲ್ಲಿ ಅಲ್ಲ!

ಆದರೆ,9ನೇ ತರಗತಿ ಸಮಾಜ ವಿಜ್ಞಾನ ಭೂಗೋಳ ವಿಭಾಗದಲ್ಲಿ ಅಧ್ಯಾಯ11ಕರ್ನಾಟಕದ ಪ್ರಾಕೃತಿಕ ವೈವಿಧ್ಯ,ಪುಟ ಸಂಖ್ಯೆ,103 ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಕರ್ನಾಟಕದಲ್ಲೇ ಅಧಿಕ ಮಳೆ ಬೀಳುವ ಸ್ಥಳವಾಗಿದೆ.ಇದನ್ನು ದಕ್ಷಿಣ ಭಾರತದ ‘ಚಿರಾಪುಂಜಿ’ಎನ್ನುವರು ಎಂದಿದೆ.ಇದನ್ನೇ ದಕ್ಷಿಣ ಭಾರತದ ‘ಮಾಸಿನ್ ರಾಮ್’ಎಂದುಹೇಳಿದರೆ ತಪ್ಪಾಗಲಾರದು ಅನಿಸುತ್ತದೆ.

ಇತ್ತೀಚೆಗೆ ಮೇಘಾಲಯದಚಿರಾಪುಂಜಿ ಹವಾಮಾನ ವೈಪರೀತ್ಯದಿಂದ ನೇಪಥ್ಯಕ್ಕೆ ಸರಿದಿದ್ದು, ಅಧಿಕ ಮಳೆ ಬೀಳುವ ಪ್ರದೇಶದ(ಸ್ಥಳ)ದ ಕುರಿತು ವಾಯುಗುಣದ ವಾಸ್ತವಿಕ ಪರಿಸ್ಥಿತಿಯನ್ನು ಮಕ್ಕಳಿಗೆ ತಪ್ಪು ಮೂಡಿಸಿದಂತಾಗುವುದಿಲ್ಲವೆ?

ಚಿರಾಪುಂಜಿ ಇರುವುದು ಮೇಘಾಲಯ ರಾಜ್ಯದಲ್ಲೇ’ಮಾಸಿನ್ ರಾಮ್ ‘ಇರುವುದು ಮೇಘಾಲಯ ರಾಜ್ಯದಲ್ಲೇ.ಅವುಗಳ ದಾಖಲೆ ಮರೆಮಾಚಿದಂತಾಗುವುದಿಲ್ಲವೆ ?

ಇತ್ತೀಚೆಗೆ ಪ್ರಜಾವಾಣಿ ವಾರ್ತೆ ದಿನಾಂಕ:24-07-26 ರಲ್ಲಿ ವರದಿಯಾದಂತೆ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ನಲ್ಲಿ ಅತಿ ಹೆಚ್ಚು 9ಸೆ.ಮೀ. ಮಾಸ್ತಿ ಕಟ್ಟೆಯಲ್ಲಿ 8.4 ಸಂಜೆ.ಮೀ.ಹಾಗೂತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ 6.3 ಸಂಜೆ.ಮೀ.ಮಳೆ ಬಿದ್ದಿದೆ.ಹೀಗೆ *ಹುಲಿಕಲ್ ಆಗಾಗ್ಗೆ ಆಗುಂಬೆ ಗಿಂತ ಹೆಚ್ಚು ಮಳೆಯ ಪ್ರಮಾಣವನ್ನು ದಾಖಲಿಸುತ್ತಾ ಇರುತ್ತದೆ.ಕೆಲವೊಮ್ಮೆ ಕೆಲವು ವರ್ಷಗಳಲ್ಲಿ *ಹುಲಿಕಲ್ ದುರ್ಗಾ ಅಧಿಕ ಮಳೆ ದಾಖಲಿಸಿದರೂ, ನಾವು ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ (ಸ್ಥಳ) ಆಗುಂಬೆ ಎಂದು ಹೇಳುತ್ತಾ ಪಾಠ ಮಾಡುತ್ತಿರುತ್ತೇವೆ.

ಸಮಾಜ ವಿಜ್ಞಾನ ಕೂಡಾ ಒಂದು ವಿಜ್ಞಾನವೆ.ಅದು ಸದಾ ಚಲಿಸುವ ಹಾಗೂ ಪ್ರಕೃತಿ ಹಾಗೂ ಮಾನವನ ವಿಪರೀತ ಪ್ರಯೋಗಗಳಿಂದ ಸಮಾಜ ಹಾಗೂ ಪ್ರಕೃತಿ ಕೂಡಾ ತನ್ನ ಚಲನೆಯ ದಿಕ್ಕನ್ನು ಬದಲಿಸಿಕೊಳ್ಳುತ್ತದೆ.ನೈಸರ್ಗಿಕವಿಕೋಪಗಳು ಹಾಗೂ ಹವಾಮಾನ ವೈಪರೀತ್ಯದಿಂದ ಕೆಲವು ಸ್ಥಾಪಿತ ಹಾಗೂ ಪೂರ್ವ ನಿರ್ಧಾರಿತ ವಿಚಾರಗಳನ್ನು ಪಠ್ಯದಲ್ಲಿ ಹಾಗೇ ಉಳಿಸಿಕೊಂಡಿರುತ್ತೇವೆ.ಬದಲಾದ ಸನ್ನಿವೇಶ, ಸಂದರ್ಭ ಹಾಗೂ ಸಂಶೋಧನೆಗಳಿಂದ ಹಳೆಯ ವಿಚಾರಗಳು ಪಠ್ಯ ವಿಷಯಗಳು ನೇಪಥ್ಯಕ್ಕೆ ಸರಿದು ಹೊಸ ವಿಚಾರಗಳು ಪ್ರವಾಹದೋಪಾದಿಯಲ್ಲಿ ನಮ್ಮ ಶೈಕ್ಷಣಿಕ ಮುಖ್ಯ ವಾಹಿನಿಗೆ ಸೇರ್ಪಡೆಯಾಗ ಬೇಕಲ್ಲವೆ ?
ಈ ಹಿಂದೆ ಇಲಾಖೆ ಸರಬರಾಜು ಮಾಡಿದ ಭೂಗೋಳ ಸಂಗತಿ ಪುಸ್ತಕದಲ್ಲಿ ಪ್ರಪಂಚದ ಅತಿ ಉದ್ದವಾದ ನದಿ ‘ ಅಮೆಜಾನ್ ಎಂದು ದಾಖಲಿಸಲ್ಪಟ್ಟಿದೆ.ಹವಾಮಾನ ವೈಪರೀತ್ಯದಿಂದ ಅಮೆಜಾನ್ ನದಿ ತನ್ನ ದಿಕ್ಕನ್ನು ಬದಲಿಸಿಕೊಂಡು ತನ್ನ ಉದ್ದವನ್ನು ನೈಲ್ ನದಿಗಿಂತಲೂ ‘ಹೆಚ್ಚು ದಾಖಲಿಸಿದೆ ಎಂದು ಓದಿದ್ದೇನೆ.

ಆದರೆ, ಪಠ್ಯಪುಸ್ತಕದಲ್ಲಿ ಇಂದೂ ಕೂಡ ಪ್ರಪಂಚದ ಅತ್ಯಂತ ಉದ್ದವಾದ ನದಿ ಈಜಿಪ್ಟಿನ *ನೈಲ್*ನದಿ ಎಂದು ನಾವು ಪಾಠ ಮಾಡುತ್ತಿರುತ್ತೇವೆ.
ಮಕ್ಕಳೂ ಅದನ್ನೇ ಕಲಿಯುತ್ತಿದ್ದಾರೆ!

ಮಳೆಯ ದಾಖಲೆಯ ವಿಚಾರದಲ್ಲಿ ನದಿಯ ಉದ್ಧದ ವಿಚಾರದಲ್ಲಿ,ಸರಿಯಾದ ದಾಖಲೆಗಳ ಕುರಿತು ಜಿಜ್ಞಾಸೆ ಇದೆ.ಬದಲಾದ ಪರಿಸ್ಥಿತಿಗೆ ತಕ್ಕಂತೆ ಅಂಕಿ -ಅಂಶಗಳನ್ನು ಆಯಾ ವರ್ಷದ ಪಠ್ಯದಲ್ಲಿ ಸೇರಿಸಿ ಮಕ್ಕಳಿಗೆ ವಾಸ್ತವಿಕ ಜ್ಞಾನ ಮತ್ತು ಸಂಗತಿಗಳನ್ನು ತಿಳಿಸುವುದು ಸರಿಯೆನ್ನಿಸುತ್ತದೆ.

ಇತಿಹಾಸ ಮತ್ತು ಮಾನವಿಕ ವಿಜ್ಞಾನಿಗಳು ಹಾಗೂ ಭೂಗೋಳ ಸದಾ ಚಲಿಸುವ ವಿಚಾರಗಳಾಗಿದ್ದು, ಸಂಶೋಧನೆ ಗಳು ಮತ್ತು ಹವಾಮಾನ ವೈಪರೀತ್ಯದಿಂದ ಹಾಗೂ ಪ್ರಕೃತಿ ವಿಕೋಪಗಳು ಕಲಿಯುವ ವಿಷಯಗಳ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತವೆ.ಆ ಹೊಸ ಬೆಳಕಿನಲ್ಲಿ ನಡೆಯುವ ಪ್ರಯತ್ನ ಮಾಡಬಹುದಲ್ಲವೇ?

ಕರ್ನಾಟಕದಲ್ಲಿ ಆಗುಂಬೆ -ಹುಲಿಕಲ್ ದುರ್ಗಾ ಮಳೆ ಕುರಿತು, ಹಾಗೆಯೇ ರಾಷ್ಟ್ರೀಯ ಮಟ್ಟದಲ್ಲಿ ಚಿರಾಪುಂಜಿ -ಮಾಸಿನ್ ರಾಮ್, ವಿಶ್ವ ಮಟ್ಟದಲ್ಲಿ ನೈಲ್ ನದಿ-ಅಮೆಜಾನ್ ನದಿಗಳ ಉದ್ಧದ ವಿಚಾರದಲ್ಲಿ ಆಯಾ ವರ್ಷದಲ್ಲಿ ಅಥವಾ ನಿರ್ದಿಷ್ಟವಾಗಿ ನಿಗದಿಪಡಿಸಿದ ವರ್ಷಗಳಲ್ಲಿ (5-10 ವರ್ಷಕ್ಕೊಮ್ಮೆ) ದಾಖಲೆ ಪರಿಷ್ಕರಿಸಿ ಕಲಿಸುವುದು ಸೂಕ್ತವೆನಿಸುತ್ತದೆ.ಪ್ರತಿವರ್ಷ ಪಠ್ಯ ಪುಸ್ತಕ ಪರಿಷ್ಕರಣೆಗೆ ಒಳಪಡುತ್ತದಲ್ಲವೆ? ಪಠ್ಯ ಪುಸ್ತಕ ರಚನಾ ಸಮಿತಿ ಹಾಗೂ ಇಲಾಖೆ ಸಮಾಲೋಚಿಸಿದರೆ, ಮತ್ತಷ್ಟು ಖಚಿತ ಹಾಗೂ ಸತ್ಯ ಸಂಗತಿ ಹಾಗೂ ವಾಸ್ತವದ ವಿಚಾರಗಳೊಂದಿಗೆ ಶಿಕ್ಷಕರು ಮತ್ತು ಮಕ್ಕಳು ಮುಖಾಮುಖಿಯಾಗುವುದು “ಬದಲಾವಣೆಯೇ ಶಿಕ್ಷಣ”ಎಂಬ ಶಾಲಾ ಶಿಕ್ಷಣ ಇಲಾಖೆಯ ಘೋಷ ವಾಕ್ಯಕ್ಕೆ ಅರ್ಥ ಬರುತ್ತದೆ.ಈ ವಿಷಯದಲ್ಲಿ ಚರ್ಚಿಸಿ ಒಂದು ನಿರ್ಣಯಕ್ಕೆ ಬರುವುದು ಶೈಕ್ಷಣಿಕ ದೃಷ್ಟಿಯಿಂದ ಸೂಕ್ತವೆನಿಸುತ್ತದೆ.ಶಿಕ್ಷಣ ಹರಿಯುವ ನೀರಲ್ಲವೆ? ಹೊಸತನವನ್ನು ಸ್ವಾಗತಿಸೋಣ.

ಕುಂದೂರು ಅಶೋಕ್
ಅಧ್ಯಾಪಕರು ಹಾಗೂ ಲೇಖಕರು, ಚಿಕ್ಕಮಗಳೂರು

The text needs to change in the changed situation.

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರು ಜಿಲ್ಲೆಯ ಯಾರಿಗೂ ಸಚಿವ ಸ್ಥಾನವಿಲ್ಲ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಯಾವ ಶಾಸಕರಿಗೂ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಖಚಿತ ಮಾಹಿತಿ ಇದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ನ ಐದು ಶಾಸಕರಿದ್ದು ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ ಹೀಗಾಗಿ ಮಂತ್ರಿ...

ಪಂಚಾಯತ್‌ರಾಜ್‌ನಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ

ಚಿಕ್ಕಮಗಳೂರು:  ಭಾರತ ಸ್ವಾತಂತ್ರ್ಯ ನಂತರ ಜಾರಿಗೆ ಬಂದ ಪಂಚಾಯತ್ ರಾಜ್ ವ್ಯವಸ್ಥೆಯಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಿದೆ. ಆದರೆ, ಇತ್ತೀಚೆಗೆ ಪಂಚಾಯತ್‌ರಾಜ್ ವ್ಯವಸ್ಥೆಯ ಅಧಿಕಾರ ಮೊಟುಕುಗೊಳಿಸುತ್ತಿರುವುದು ವಿಷಾದನೀಯ ಎಂದು ಎಂದು ಕೇಂದ್ರ...

Related Articles

ಲಕ್ಯ ಕ್ರಾಸ್ ಬಳಿ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಚಾಲಕ ಸಾವು

ಚಿಕ್ಕಮಗಳೂರು:  ನಗರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಯ ಕ್ರಾಸ್ ಬಳಿ ಸೋಮವಾರ ಸಂಭವಿಸಿದ ಭೀಕರ...

ಶಾಹುರವರು ಜಾತೀಯತೆ ತೊಲಗಿಸಲು ಶ್ರಮಿಸಿದ ಮಾನವತಾವಧಿ

ಚಿಕ್ಕಮಗಳೂರು: ವೈಚಾರಿಕತೆಯ ಭದ್ರ ಬುನಾದಿಯನ್ನು ಸಾಮಾಜಿಕ ಪರಿವರ್ತನ ಚಳ ವಳಿಯ ಸಂದರ್ಭದಲ್ಲಿ ರಾಜಪ್ರಭುತ್ವದಲ್ಲಿ ಶಾಹೂ ಮಹಾರಾಜರು...

ಮಾಜಿ ಸೈನಿಕರಿಂದ ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆ

ಚಿಕ್ಕಮಗಳೂರು: ೨೭ನೇ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಭಾನುವಾರ ಜಿಲ್ಲಾ...

ಮಹಿಳೆಯರು ಧರಿಸುವ ‘ನೈಟಿ’ ಧರಸಿ ದೇವಸ್ಥಾನದಲ್ಲಿ ಕಳ್ಳತನ

ಚಿಕ್ಕಮಗಳೂರು:  ದೇವಸ್ಥಾನಗಳಲ್ಲಿ ಕಳ್ಳತನ ನಡೆಯುವುದು ಹೊಸದೇನಲ್ಲ. ಆದರೆ, ಪತ್ತೆಯಾಗಬಾರದು ಎಂದು ಕಳ್ಳರು ಹೂಡುವ ತಂತ್ರಗಳು ಮಾತ್ರ...