ಚಿಕ್ಕಮಗಳೂರು: ಶಾಸಕ ಟಿ.ಡಿ.ರಾಜೇಗೌಡ v/s ಮಾಜಿ ಶಾಸಕ ಡಿ.ಎನ್.ಜೀವರಾಜ್ ಮಧ್ಯೆ ನಡೆದಿರುವ ಶಾಸಕ ಸ್ಥಾನನ ಪೈಪೋಟಿಯಲ್ಲಿ ಸದ್ಯಕ್ಕೆ ಟಿ.ಡಿ.ರಾಜೇಗೌಡರ ಕೈ ಮೇಲಾಗಿದೆ.ಸುಪ್ರೀಂ ಕೋರ್ಟ್ ಜುಲೈ ತಿಂಗಳವರೆಗೆ ರಾಜೇಗೌಡ ಶಾಸಕ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂದು ತೀರ್ಪು ನೀಡಿರುವುದು ಕಾಂಗ್ರೆಸ್ ನ ಟಿ.ಡಿ.ಆರ್ ಗೆ ಸದ್ಯಕ್ಕೆ ಭಯವಿಲ್ಲ ಎನ್ನಲಾಗುತ್ತಿದೆ.
ಸ್ಥಳೀಯ ಸಂಸ್ಥೆಗಳಿಂದ ಆಯ್ಕೆ ಆಗಿರುವ ಚುನಾವಣೆ ಮಾತ್ರ ಗೊಂದಲದ ಗೂಡಾಗಿದೆ. ಗಾಯಿತ್ರಿ ಶಾಂತೇಗೌಡರ ಪರ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ ಎಂದು ವಿಜಯೋತ್ಸವ ಆಚರಣೆ ಮತ್ತು ರಾಜ್ಯ ನಾಯಕರುಗಳು ಅಭಿನಂದನಾ ಕಾರ್ಯಕ್ರಮಕ್ಕೆ ಎಂ.ಎಲ್.ಮೂರ್ತಿ ನೇತೃತ್ವ ವಹಿಸಿರುವುದು ನೋಡಿ ಕಾಂಗ್ರೆಸ್ ನ ಪದಾಧಿಕಾರಿಗಳು ಹೀಯಾಳಿಸುತ್ತಿದ್ದಾರೆ.
ಬಿಜೆಪಿಯ ಪ್ರಾಣೇಶ್ v/s ಗಾಯಿತ್ರಿ ಶಾಂತೇಗೌಡರ ದೂರು ಅರ್ಜಿ ಕಳೆದ ನಾಲ್ಕೂವರೆ ವರ್ಷಗಳಿಂದ ಹೈಕೋರ್ಟ್ ನಂತರ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತಿತ್ತು.ಸುಪ್ರೀಂ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿ ಹೈಕೋರ್ಟ್ ನಲ್ಲಿ ಬಗೆಹರಿಸಿ ಕೊಳ್ಳಲು ಸೂಚನೆಯ ಬಗ್ಗೆ ತಿಳಿಯದೆ ನಮಗೆ ಗೆಲುವಾಗಿದೆ ಎಂದು ಹಾರ,ತುರಾಯಿ ಹಾಕಿ ಜೈಕಾರ ಕೂಗಿ ಪಟಾಕಿ ಸಿಡಿಸಿ ಸಂತೋಷ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ನಾಳೆಯಿಂದ ಗಾಯತ್ರಕ್ಕ ಎಮ್.ಎಲ್ಸಿ ಎಂದು ಸಂಭ್ರಮದ ಸಮಯದಲ್ಲಿ ಗಾಯಿತ್ರಿ ಮತ್ತು ತಂಡ ಬೆಂಗಳೂರು ತಲುಪಿ ಉಪ ಸಭಾಪತಿ ಸ್ಥಾನ ಕೊಡಲೇ ಬೇಕು ಎಂದು ಬೇಡಿಕೆ ಇಟ್ಟು ಬಂದು ಎಂಎಲ್ಸಿ ಸರ್ಟಿಫಿಕೇಟ್ ಗಾಗಿ ಕಾದು ಕುಳಿತಿದೆ ಕಳೆದ ಒಂದು ವಾರದಿಂದ ಕಾಂಗ್ರೆಸ್ ನವರು ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿಯಲ್ಲಿ ಇದ್ದಾರೆ.
ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೈಕೋರ್ಟ್ ನಲ್ಲಿ ಇರುವ ತಕರಾರು ಬಗ್ಗೆ ಹೇಳಿದೆ.ಇದನ್ನು ಬಿಜೆಪಿಯ ಪ್ರಾಣೇಶ್ ಮತ್ತು ತಂಡ ತಣ್ಣಗೆ ಹೊರಹಾಕಿದ ಮೇಲೆ ಕಾಂಗೈಗಳು ಮುಂದೆ ಒಂದಲ್ಲ ಒಂದು ದಿನ ನಮಗೆ ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆ ಯಲ್ಲಿದ್ದಾರೆ.
ನ್ಯೂಸ್ ಕಿಂಗ್ ಅಂದೇ ಈ ಬಗ್ಗೆ ಸ್ಪಷ್ಟವಾದ ಸುದ್ದಿ ಬರೆದಿತ್ತು.ಹೈಕೋರ್ಟ್ ತೀರ್ಪು ಏನೇ ಬಂದರು ಮತ್ತೊಮ್ಮೆ ಸುಪ್ರೀಂ ಕೋರ್ಟ್ ಗೆ ಹೋಗುವ ಅವಕಾಶ ಇದೆ.ಸದ್ಯಕ್ಕೆ ಗಾಯಿತ್ರಿ ಶಾತೇಗೌಡ ಗೊಂದಲದಲ್ಲಿ ಇದ್ದು ದಿನವೂ ಬೆಂಬಲಿಗರ ಜೊತೆ ಚರ್ಚೆ ನಡೆಸುತ್ತಿದ್ದಾರೆ.ಏನೇ ಆದರೂ ಪ್ರಾಣೇಶ್ ನೈತಿಕವಾಗಿ ಉಪಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು.ಅಧಿವೇಶನ ಆರಂಭವಾದ ತಕ್ಷಣ ಪ್ರಾಣೇಶ್ ರನ್ನು ಇಳಿಸುವುದು ಖಚಿತ.
ಲಾಸ್ಟ್ ಸಿಫ್; ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು ಡಾ.ಬಿಸವಂತ್ ರಂಜನ್ ಮೊಹಂತಿ ಮತ್ತು ಗಫಾರ್,ಮೋಹನ್ ನೇಮಕವಾಗಿದ್ದು ಶನಿವಾರದ ದಿನ ಚಿಕ್ಕಮಗಳೂರಿಗೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ.
ಜಿಲ್ಲಾ ಅಧ್ಯಕ್ಷರಾಗಲು ಡಜನ್ ಗೂ ಹೆಚ್ಚು ಜನ ಕ್ಯೂ ನಿಂತಿದ್ದಾರೆ. ಗಾಯಿತ್ರಿ ಶಾಂತೇಗೌಡ ನನಗೆ ಅಧ್ಯಕ್ಷ ಸ್ಥಾನ ಬೇಕೆ ಬೇಕು ಎನ್ನುತ್ತಾರೆ ಕಳೆದ ಐದು ವರ್ಷಗಳಿಂದ ನೀನೆ ಎಂಎಲ್ಸಿ.ಎಂದು ಅನ್ಯಾಯವಾಗಿದೆ.ಆದ್ದರಿಂದ ಜಿಲ್ಲಾ ಅಧ್ಯಕ್ಷ ನನಗಿರಲಿ ಇಲ್ಲದಿದ್ದರೆ ಒಳ್ಳೆಯ ಬೋರ್ಡ್ ಛೇರ್ಮನ್ ಮಾಡಲಿ ಎನ್ನುತ್ತಿರುವ ಪ್ರಬಲ ಅಭ್ಯರ್ಥಿ.
ಇವರ ಜೊತೆಗೆ ಶಿವಾನಂದ ಸ್ವಾಮಿ ಮತ್ತು ಸುಧೀಂದ್ರ ಮೊರಳ್ಳಿ ಸತೀಶ್, ರವೀಶ್,ಉಮಾ ಐ.ಬಿ.ಶಂಕರ್,ಮಂಜೇಗೌಡ ಮತ್ತಿತರರು ಅಧ್ಯಕ್ಷರಾಗಲು ತುದಿಗಾಲಲ್ಲಿ ನಿಂತಿದ್ದಾರೆ.ಆದರೆ ಡಾ.ಅಂಶುಮಂತ್ ಮತ್ತು ಶಿವಾನಂದಸ್ವಾಮಿ ನೂತನ ಕಟ್ಟಡಕ್ಕೆ ನಮ್ಮ ಹೆಸರು ಬೀಳಲಿಲ್ಲಾ ಎಂಬ ನೋವಿನಲ್ಲಿ ಇದ್ದಾರೆ.ಕಾಂಗ್ರೆಸ್ ಭವನ ಮಾತ್ರ ಕಣ್ಣೀರು ಸುರಿಸಿ ಅಂಶು,ಅಂಶು ಎನ್ನುತ್ತಿದೆ ಎಂದು ಕಾಂಗ್ರೆಸ್ ನ ಒಳಗಡೆ ನಗುವಿನ ಸಂಭ್ರಮದಲ್ಲಿ ತೇಲುತ್ತಿದ್ದಾರೆ.
ಸಚಿವ ಸ್ಥಾನ ಜಿಲ್ಲೆಯ ಯಾರಿಗೂ ಸಿಗುವುದಿಲ್ಲ ಎಂಬ ನಿರೀಕ್ಷೆಯಲ್ಲಿ ಇರುವಾಗ ಅರತಿ ಕೃಷ್ಣ ಪರ ರಾಷ್ಟ್ರ ಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಲಾಭಿ ಮಾಡುತ್ತಿದ್ದು ಶ್ಯಾಮ್ ಪೀತ್ರೋಡ್ ಅರತಿ ಪರ ಬ್ಯಾಟ್ ಬೀಸಿರುವುದು ಸುಗಮ ಹಾದಿಯ ಸುಳಿವು ಸಿಗುತ್ತದೆ ಎಂಬ ಭರವಸೆಯ ಮಧ್ಯೆ ದೆಹಲಿ ಮಟ್ಟದಲ್ಲಿ ಕಡೂರು ಶಾಸಕ ಆನಂದ್ ಮತ್ತು ನಯಾನ ಮೋಟಮ್ಮನ ಹೆಸರು ಹರಿದಾಡುತ್ತಿದೆ.
ಶ್ರೀನಿವಾಸ್ ಗೆ ಠಕ್ಕರ್ ಕೊಡಲು ಆನಂದ್ ಎಂಬ ಅಡ್ಡಗಾಲು ಸುತ್ತಿಕೊಂಡರೆ ನಯನ ಕ್ಷೇತ್ರದಲ್ಲಿ ನಡೆಯುತ್ತಿರುವ ಕಿತ್ತಾಟ ನೋಡಿದರೆ ನಯನ ಮತ್ತೊಮ್ಮೆ ಇಲ್ಲಿ ಗೆಲುವು ಎಂಬ ಪದ ಕಾಣುವುದು ಕನಸಿನಲ್ಲಿ ಮಾತ್ರ ಎನ್ನಲಾಗುತ್ತದೆ.
Gayathri in the ongoing T.D. Rajegowda-Gondal controversy?
Leave a comment