Home namma chikmagalur chikamagalur ವೈದ್ಯಕೀಯ ಕಾಲೇಜ್ ನಲ್ಲಿ ಲೂಟಿ ! ಲೂಟಿ !-ನೂರಾರು ಕೋಟಿ ನುಂಗಿರುವ ಖದೀಮರು?
chikamagalurHomeLatest Newsnamma chikmagalur

ವೈದ್ಯಕೀಯ ಕಾಲೇಜ್ ನಲ್ಲಿ ಲೂಟಿ ! ಲೂಟಿ !-ನೂರಾರು ಕೋಟಿ ನುಂಗಿರುವ ಖದೀಮರು?

Share
Share

ಚಿಕ್ಕಮಗಳೂರು: ನೂತನವಾಗಿ ನಿರ್ಮಾಣ ವಾಗಿರುವ ವೈದ್ಯಕೀಯ ಕಾಲೇಜ್ ಕಟ್ಟಡದಲ್ಲಿ ಕೋಟಿ, ಕೋಟಿರೂ ನುಂಗಿರುವ ಖದೀಮರು. ಟೆಂಡರ್ ಲೋಪ ದೋಷಗಳ ಪ್ರಕಾರ ನೂರಾರು ಕೋಟಿ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಟೆಂಡರ್ ಅವಧಿ 30 ದಿನಗಳು ಆದರೆ 22 ದಿನಗಳ ಒಳಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಇದಕ್ಕೆ ಸಕ್ಷಮ ಪ್ರಾಧಿಕಾರ ದ ಅನುಮೋದನೆ ಕೊಟ್ಟಿಲ್ಲ.

ಟೆಂಡರ್ ದಾರರು ಮತ್ತು ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ಸೇರಿ ಗುಳಂ ಮಾಡಿದ್ದಾರೆ ಎನ್ನಲಾಗುತ್ತಿದೆ. ಕಾಲೇಜ್ ಕೊಠಡಿಗಳ ಸ್ಟ್ರಕ್ಚರಲ್ ವಿನ್ಯಾಸ ಮತ್ತು ಮಂಜೂರಾದ ಅಂದಾಜು ಪಟ್ಟಿಯ ಪ್ರಕಾರ ಕಾಮಗಾರಿ ನಿರ್ವಹಿಸದೆ 130ಕೋಟಿ ಹೆಚ್ಚುವರಿ ಆಗಿರುವುದೇ ಸಾಕ್ಷಿ. ಮೆಡಿಕಲ್ ಕಾಲೇಜ್ ಮಂಜೂರು ಆದಾಗ 4,54,94 ಕೋಟಿ ನಿಗಧಿ ಪಡಿಸಲಾಗಿತ್ತು ಆದರೂ ಹೆಚ್ಚುವರಿಯಾಗಿ ಅವಶ್ಯಕತೆಗಿಂತ 130ಕೋಟಿ ಹೆಚ್ಚಾಗಿರುವುದು ಗೋಲ್ ಮಾಲ್ ಎನ್ನುವುದಕ್ಕೆ ಯಾವುದೇ ಸಾಕ್ಷಿ ಬೇಕಾಗಿಲ್ಲ.

6,400ಚದರ ಅಡಿಯಲ್ಲಿ ನಿರ್ಮಿಸ ಬೇಕಾದ ಕಟ್ಟಡ ಹೆಚ್ಚುವರಿಯಾಗಿದ್ದು ,ಸ್ಟ್ರಕ್ಚರಲ್ ವಿನ್ಯಾಸ ಮತ್ತು ಡಿ.ಪಿ.ಆರ್ ತಯಾರಿಸುವಾಗ ಲೋಪದೋಷಗಳು ಹೆಚ್ಚು ಕಂಡು ಬರುತ್ತವೆ .ದಾಖಲೆ ಪ್ರಕಾರ ನಿಯಮಗಳನ್ನು ಪಾಲಿಸಿಲ್ಲಾ ಮತ್ತು ಅನುಮೋದನೆ ಪಡೆದಿರುವುದಿಲ್ಲ.ಈ ಬಗ್ಗೆ ತನಿಖೆ ಮಾಡಲು ಬಂದ ವಿಧಾನ ಪರಿಷತ್ ನ ಲೆಕ್ಕ ಪತ್ರದ ಖರ್ಚು_ ವೆಚ್ಚ ಸಮಿತಿ ಲೆಕ್ಕಾಚಾರ ಚುಕ್ತಾಮಾಡಿಕೊಂಡು ಹೋದರು . ಮದುವೆ ಮತ್ತು ಪ್ರವಾಸದ ಜೊತೆಗೆ ವ್ಯವಹಾರ ಮಾಡಿಕೊಂಡು ಹೋದರು ಎಂದು ಗುತ್ತಿಗೆದಾರ ಮುಸಿ,ಮುಸಿ ನಗುತ್ತಾನೆ.

ಕಟ್ಟಡ ನಿರ್ಮಾಣ ಮಾಡಲು ನಾಲ್ವರು ಗುತ್ತಿಗೆದಾರರು ಭಾಗವಹಿಸಿದ್ದು ಕಡಿಮೆ ದರ ನಿಗಧಿ ಪಡಿಸಿದ ಬಾಲಾಜಿ ಕೃಪಾ ಪ್ರಾಜೆಕ್ಟ್ (ಲಿ) ಅಯ್ಕೆ ಆದರೂ ಸ್ಥಳೀಯ ಗುತ್ತಿಗೆದಾರ ಮೆಟೀರಿಯಲ್ಸ್ ಮತ್ತು ಗುತ್ತಿಗೆ ಕೆಲಸ ಮಾಡಿದ ಎನ್ನಲಾಗುತ್ತಿದೆ .2023 ರಲ್ಲಿ ಕಟ್ಟಡ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದ್ದು ಸ್ಥಳಕ್ಕೆ ತಕ್ಕಂತೆ ಮತ್ತು ಅನುಮೋದಿತ ವಿನ್ಯಾಸದಲ್ಲಿ ಕಾಮಾಗಾರಿ ನಿರ್ವಹಿಸದಿರುವುದು ನೋಡಿದರೆ ನೂರಾರು ಕೋಟಿ ನುಂಗಿರುವುದನ್ನು ತನಿಖಾ ತಂಡ ಪತ್ತೆ ಹಚ್ಚಿದ್ದರು ಸ್ಥಳೀಯ ಜನಪ್ರತಿನಿಧಿಯ ಬಾಯಿ ಮುಚ್ಚಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮೇಲ್ಕಂಡ ವಿಚಾರಗಳ ಬಗ್ಗೆ ಅಕ್ರಮ ಮತ್ತು ಅನಗತ್ಯವಾಗಿ ವೆಚ್ಚವಾಗಿರುವುದರ ಬಗ್ಗೆ ನಿವೃತ್ತ ನ್ಯಾಯಾಧೀಶ ನಂಜುಂಡಯ್ಯ ಅವರನ್ನು ನೇಮಿಸಿ ದೋಷಾರೋಪಣೆ ಪಟ್ಟಿ ತಯಾರಿಸಲು ಆದೇಶ ನೀಡಲಾಗಿದ್ದು ಕ್ಲೀನ್ ಚೀಟ್ ನೀಡಿರುವುದಾಗಿ ತಿಳಿದುಬಂದಿದೆ.ಇದರ ಬಗ್ಗೆ ಇನ್ನೂ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂಬ ಒತ್ತಾಯವಿದೆ.

ಮೆಡಿಕಲ್ ಕಾಲೇಜ್ ಬೇಕಾದ ಅಗತ್ಯ ಪರಿಕರಗಳು ಮತ್ತು ಕುರ್ಚಿ ,ಟೇಬಲ್ ಇತರ ವಸ್ತು ಸಪ್ಲೈ ಮಾಡಿರುವ ಪಾಲಾಕ್ಷ ಎಂಬಾತ ಮತ್ತು ಡೀನ್ ಗಳಸ್ಯ ಕಂಠಸ್ಯವಾಗಿರುವುದು ನೋಡಿದರೆ ಹಣ ಜೇಬಿಗೆ ಇಳಿಸುವ ವ್ಯವಸ್ಥಿತ ಕೆಲಸ ನಡೆದಿದೆ.ಪಾಲಾಕ್ಷ ಆಸ್ಪತ್ರೆ ಮತ್ತು ಹಾಸ್ಟೆಲ್ ಗಳಿಗೂ ಸಪ್ಲೈ ಮಾಡುತ್ತಿದವನ ಗೋಲ್ ಮಾಲ್ ವ್ಯವಹಾರ ಒಂದೆರಡು ಅಲ್ಲ ಇವನ ಒಂದೊಂದು ವ್ಯವಹಾರ ಬಗ್ಗೆ ಕಾದಂಬರಿ ಬರೆಯಬಹುದು

ಮೆಡಿಕಲ್ ಸಪ್ಲೈಗೆ 18 ಲಕ್ಷ ಹಣ ಕೊಟ್ಟು ಏನೂ ಗೋತ್ತಿಲವದನಂತೆ ಇರುವುದು ನೋಡಿದರೆ ಇವನ ಡೀಲಿಂಗ್ ಯಾವ ರೀತಿ ಇದೆ.ಆಸ್ಪತ್ರೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದವನು ಇಂದು ಸಿಮೆಂಟ್ ಇಟ್ಟಿಗೆ ಫ್ಯಾಕ್ಟರಿ ಒನರ್ ಹಲವು ಎಕರೆ ಜಮೀನು ಓಡಾಡಲು ಐಷಾರಾಮಿ ಕಾರುಗಳು ಇವನ ಶ್ರೀ ಮಂತಿಕೆ ಬಗ್ಗೆ ಸಿಐಡಿ ತನಿಖೆ ನಡೆಸಲು ಒತ್ತಾಯ ಮಾಡುತ್ತಿದ್ದಾರೆ.

Looting at a medical college! Looting!

Share

Leave a comment

Leave a Reply

Your email address will not be published. Required fields are marked *

Don't Miss

ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಚಿಕ್ಕಮಗಳೂರು: ವಿಧಾನ ಪರಿಷತ್ ಉಪಸಭಾಪತಿ ಎಂ ಕೆ ಪ್ರಾಣೇಶ್ ಅವರ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ಬೆಂಬಲಿಗರು ನಗರದಲ್ಲಿ ಪಟಾಕಿ ಸಿಡಿಸಿ,...

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ ಪರಿಷತ್ ಸ್ಥಾನಕ್ಕೆ ಆಯ್ಕೆಯಾಗಿದ್ದರ ಬಗ್ಗೆ ಎದುರಾಳಿ ಪಕ್ಷದ ಗಾಯಿತ್ರಿ ಶಾಂತೇಗೌಡ ಹೈಕೋರ್ಟಿನಲ್ಲಿ ತಕರಾರು ಸಲ್ಲಿಸಿದ್ದು...

Related Articles

ವಿದ್ಯಾರ್ಥಿ ಹೋರಾಟವನ್ನು ಬೆಂಬಲಿಸಿ ಸಮಾನ ಮನಸ್ಕರ ಪ್ರತಿಭಟನೆ

ಚಿಕ್ಕಮಗಳೂರು : ನೀಟ್ ಪದೆಶ್ನೆ ಪತ್ರಿಕೆ ಸೋರಿಕೆ ತಡೆಯುವಲ್ಲಿ ವಿಫಲವಾಗಿರುವ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ...

ಸಿಐಡಿ ಪೊಲೀಸ್ ರಿಂದ ಪಂಜರದಲ್ಲಿ ಬಂಧಿಸಿಟ್ಟಿದ ಕಾಡು ಗಿಳಿ ವಶ

ಚಿಕ್ಕಮಗಳೂರು : ಅಕ್ರಮವಾಗಿ ಪಂಜರದಲ್ಲಿ ಬಂಧಿಸಿಟ್ಟಿದ ಕಾಡು ಗಿಳಿಗಳನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ...

ಸಖರಾಯಪಟ್ಟಣದಲ್ಲಿ ಹಣದ ವಿಷಯಕ್ಕೆ ಸ್ನೇಹಿತನೇ ಕೊಲೆ

ಕಡೂರು: ಅಪಘಾತದಲ್ಲಿ ಯುವಕ ಸಾವನ್ನಪ್ಪಿದ್ದ ಎಂದು ಭಾವಿಸಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು, ಹಣದ ವಿಷಯಕ್ಕೆ ಸ್ನೇಹಿತನೇ...

ಸಹಾನುಭೂತಿ ಇಲ್ಲದ ಧರ್ಮೇಂದ್ರ ಪ್ರದಾನ್ ರಾಜೀನಾಮೆ ನೀಡಲಿ

ಚಿಕ್ಕಮಗಳೂರು: ವಿದ್ಯಾರ್ಥಿಗಳು ಹಾಗೂ ಯುವ ಜನತೆಯ ಬಗ್ಗೆ ಸಹಾನುಭೂತಿ ಇಲ್ಲದ ದೇಶದ ಶಿಕ್ಷಣ ಸಚಿವ ಧರ್ಮೇಂದ್ರ...