Home Crime News ಚೌಡೇಶ್ವರಿ ದೇವಸ್ಥಾನದಲ್ಲಿ ₹14.72 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣ ಕಳವು
Crime NewsHomeKadurLatest Newsnamma chikmagalur

ಚೌಡೇಶ್ವರಿ ದೇವಸ್ಥಾನದಲ್ಲಿ ₹14.72 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣ ಕಳವು

Share
Share

ಕಡೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಟ್ನಪಾಳ್ಯ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ದುಷ್ಕರ್ಮಿಗಳು ಕಳ್ಳತನ ನಡೆಸಿ, ದೇವರ ಚಿನ್ನ-ಬೆಳ್ಳಿ ಆಭರಣಗಳು, ಸಿಸಿಟಿವಿ ಡಿವಿಆರ್ ಹಾಗೂ ಸೈರನ್ ವ್ಯವಸ್ಥೆಗೆ ಹಾನಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವಾಲಯದ ಸೇವಾ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಈಶ್ವರನಾಯ್ಕ ಅವರು ನೀಡಿದ ದೂರಿನ ಪ್ರಕಾರ, ಜುಲೈ 21ರಂದು ಬೆಳಗಿನ ಜಾವ ಸುಮಾರು 3.45ಕ್ಕೆ ದೇವಸ್ಥಾನದ ಸೈರನ್ ಸೆನ್ಸಾರ್ ಮೊಳಗಿದೆ. ಕೂಡಲೇ ಅವರು ಹಾಗೂ ಟ್ರಸ್ಟ್ ಸದಸ್ಯರು ದೇವಸ್ಥಾನಕ್ಕೆ ಧಾವಿಸಿದಾಗ, ಹಿಂಭಾಗದ ಕಿಟಕಿಯ ಕಬ್ಬಿಣದ ಸರಳುಗಳನ್ನು ಕತ್ತರಿಸಿ ಒಳನುಗ್ಗಿರುವುದು ಕಂಡುಬಂದಿದೆ.

ಕಿಟಕಿಯಿಂದ ಒಳಗೆ ಪರಿಶೀಲಿಸಿದಾಗ ಗರ್ಭಗುಡಿಯ ಬಾಗಿಲು ತೆರೆದಿದ್ದು, ಉತ್ಸವ ಮೂರ್ತಿಯನ್ನು ದೇವಾಲಯದ ಸಭಾಂಗಣದಲ್ಲಿ ಇರಿಸಲಾಗಿತ್ತು. ಮೂರ್ತಿ ಹಾಗೂ ದೇವಿಯ ಮೈಮೇಲೆ ಅಲಂಕರಿಸಿದ್ದ ಚಿನ್ನ-ಬೆಳ್ಳಿ ಆಭರಣಗಳು ಕಾಣೆಯಾಗಿದ್ದವು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳ್ಳರು ಸುಮಾರು 2.5 ಕೆಜಿ ತೂಕದ ಬೆಳ್ಳಿಯ ಛತ್ರಿ, ದಾಳ, ಗಿಳಿ, ಚಕ್ರ, ತ್ರಿಶೂಲ, ಕತ್ತಿ ಹಾಗೂ ನಾಗರ ಸೇರಿದಂತೆ ವಿವಿಧ ಆಭರಣಗಳನ್ನು ಕಳವು ಮಾಡಿದ್ದಾರೆ. ಅಲ್ಲದೆ, ದೇವರ ತಾಳಿ, ಮೂಗುತಿಗಳು, ಚಿನ್ನದ ಗುಂಡುಗಳು ಸೇರಿದಂತೆ ಸುಮಾರು 2 ಗ್ರಾಂ ಚಿನ್ನಾಭರಣ ಹಾಗೂ ದೇವಿಯ ಪ್ರಭಾವಳಿಯ ಮೇಲಿದ್ದ 1.35 ಕೆಜಿ ತೂಕದ ಬೆಳ್ಳಿಯ ಛತ್ರಿ, ಪತಾಕಿಗಳು, ಕವಚ ಮತ್ತು ಸುಮಾರು 42 ಗ್ರಾಂ ತೂಕದ ಚಿನ್ನದ ಮೂಗುತಿ ಹಾಗೂ ಕಣ್ಣುಗಳನ್ನೂ ಕಳವು ಮಾಡಲಾಗಿದೆ.

ಇದರೊಂದಿಗೆ ದೇವಸ್ಥಾನದಲ್ಲಿದ್ದ ಸಿಸಿಟಿವಿ ಡಿವಿಆರ್‌ನ್ನು ಸಹ ಕಳ್ಳರು ಕೊಂಡೊಯ್ದಿದ್ದು, ಸೈರನ್ ವ್ಯವಸ್ಥೆಯ ವೈರ್‌ಗಳನ್ನು ಕತ್ತರಿಸಿ ಹಾನಿಗೊಳಿಸಿದ್ದಾರೆ.

ಕಳುವಾದ ಬೆಳ್ಳಿಯ ಆಭರಣಗಳ ಮೌಲ್ಯ ಸುಮಾರು ₹9 ಲಕ್ಷ ಹಾಗೂ ಚಿನ್ನದ ಆಭರಣಗಳ ಮೌಲ್ಯ ₹5.72 ಲಕ್ಷ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಸುಮಾರು ₹14.72 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಸ್ತುಗಳು ಕಳುವಾಗಿವೆ.

ಈ ಸಂಬಂಧ ಈಶ್ವರನಾಯ್ಕ ಅವರ ದೂರಿನ ಮೇರೆಗೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Gold and silver ornaments worth ₹14.72 lakh stolen from Chowdeshwari temple

Share

Leave a comment

Leave a Reply

Your email address will not be published. Required fields are marked *

Don't Miss

ರೈತರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾರಾಮಾರಿ

ಚಿಕ್ಕಮಗಳೂರು: ಶಾಂತಿಯುತವಾಗಿ ನಡೆಯಬೇಕಿದ್ದ ರೈತರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯೊಂದು ನೋಡನೋಡುತ್ತಿದ್ದಂತೆ ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಹಂಗರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ. ಸಭೆಯಲ್ಲಿ...

ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಪ್ರತಿಷ್ಠಾಪನೆ ಉತ್ಸವಗಳು ನಡೆದವು. ಬೋಳರಾಮೇಶ್ವರ ದೇವಸ್ಥಾನದದ ಆವರಣದಲ್ಲಿ ಸಾರ್ವಜನಿಕ ಗಣಪತಿ ಸೇವಾ ಸಮಿತಿಯಿಂದ(ಅಜಾದ್ ಮೈದಾನ), ಹಿಂದೂ ಮಹಾಗಣಪತಿ ಸೇವಾ ಸಂಘದ...

Related Articles

ಜಿಲ್ಲೆಯ ಐದು ಜನ ಶಾಸಕರಿಗೆ ಬೊಗಣಿ ಗೂಟ ಖಚಿತ !?

ಚಿಕ್ಕಮಗಳೂರು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸುವ ಜೊತೆಗೆ ಕಾಂಗ್ರೆಸ್ ಮುಖಂಡರು ಮತ್ತು...

ಕಲಿಕೆ ವಯಸ್ಸಿನಲ್ಲಿ ವ್ಯಾಮೋಹಕ್ಕೆ ಒಳಗಾಗದಿರಿ

ಚಿಕ್ಕಮಗಳೂರು: ರಾಷ್ಟ್ರದ ಭವಿಷ್ಯವನ್ನು ಉಜ್ವಲಗೊಳಿಸುವ ಇಂದಿನ ಯುವಪೀಳಿಗೆ ಬಹಳ ಷ್ಟು ಎಚ್ಚರಿಕೆ ವಹಿಸಬೇಕು. ಕಲಿಕೆಯಲ್ಲಿ ಹೊರತಾಗಿ...

ಭೋವಿ ಜಾತಿ ಪ್ರಮಾಣಪತ್ರ ನೀಡಲು ವಿಳಂಬ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಡ್ಡರ ಸಮುದಾಯದವರಿಗೆ ಭೋವಿ ಜಾತಿ ಪ್ರಮಾಣಪತ್ರ ನೀಡುವ ವಿಚಾರದಲ್ಲಿ ಅಧಿಕಾರಿಗಳು ಅನಗತ್ಯ ತೊಂದರೆ...

ಲಕ್ಯಾ-ಸಖರಾಯಪಟ್ಟಣ ಹೋಬಳಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಇಂಧನ ಸಚಿವ ಮನವಿ

ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಯಾ ಹಾಗೂ ಸಖರಾಯಪಟ್ಟಣ ಹೋಬಳಿಗಳಲ್ಲಿ ರೈತರು ಎದುರಿಸುತ್ತಿರುವ ತೀವ್ರ...