ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ ಪರಿಷತ್ ಸ್ಥಾನಕ್ಕೆ ಆಯ್ಕೆಯಾಗಿದ್ದರ ಬಗ್ಗೆ ಎದುರಾಳಿ ಪಕ್ಷದ ಗಾಯಿತ್ರಿ ಶಾಂತೇಗೌಡ ಹೈಕೋರ್ಟಿನಲ್ಲಿ ತಕರಾರು ಸಲ್ಲಿಸಿದ್ದು ನಂತರ ಸುಪ್ರೀಂ ಕೋರ್ಟ್ನಲ್ಲಿ ಸುಧೀರ್ಘ ವಾದ ಮಂಡನೆ ಮಾಡಲಾಗಿತ್ತು.ಕಳೆದ ನಾಲ್ಕು ತಿಂಗಳಿಂದ ಜಡ್ಜ್ ಮೆಂಟ್ ಕಾಯ್ದಿರಿಸಲಾಗಿತ್ತು.
ಕಾಂಗ್ರೆಸ್ ಮತ್ತು ಬಿಜೆಪಿಯವರು ಜಡ್ಜ್ ಮೆಂಟ್ ಗೆ ಕಾದು ಕುಳಿತು ಅವರವರ ಮೂಗಿನ ನೇರಕ್ಕೆ ಚರ್ಚೆ ಮಾಡುತ್ತಿದ್ದರು.ಕಾಂಗ್ರೆಸ್ ನವರು ಮೂರು ಬಾರಿ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದ್ದರು ಅಂತೂ ಇಂತೂ ಕೊನೆಗೂ ಫಲಿತಾಂಶ ಪ್ರಕಟಿಸಲಾಗಿದೆ.ಇಂದು ಗಾಯಿತ್ರಿ ಶಾಂತೇಗೌಡರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ವಿಧಾನ ಪರಿಷತ್ ನ ಅವಧಿ ಇನ್ನು ಒಂದುವರೆ ವರ್ಷ ಮಾತ್ರ.ನಾಲ್ಕು ವರ್ಷಗಳಿಂದ ಪ್ರಾಣೇಶ್ ಅಧಿಕಾರ ಅನುಭವಿಸಿದ್ದಾರೆ. ಬಿಜೆಪಿಯವರೆಗೆ ಜಿಲ್ಲೆಯಲ್ಲಿ ರಾಜಕೀಯವಾಗಿ ಮತ್ತೆ,ಮತ್ತೆ ಮುಖಭಂಗವಾಗುತ್ತಿದೆ.ಶೃಂಗೇರಿ ಜೀವರಾಜ್ ಪ್ರಕರಣ ಮಾಸುವ ಮುನ್ನವೇ ಪ್ರಾಣೇಶ್ ಅಧಿಕಾರದಿಂದ ಮನೆ ತಲುಪುತ್ತಿರುವುದು ಬಿಜೆಪಿಯವರು ಮುಗ್ಗರಿಸಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ.
Pranesh’s resignation from the post of Deputy Speaker is confirmed.
Leave a comment