ಬೀರೂರು: ಕಡೂರು ತಾಲ್ಲೂಕಿನ ಹೇಮಗಿರಿ ಗೇಟ್ ಬಳಿಯ ಜಮೀನಿನಲ್ಲಿ ಕೆಲಸ ಮುಗಿಸಿ, ಅಜ್ಜಂಪುರ ಕಡೆಗೆ ಬೀರೂರು ಬೈಪಾಸ್ ರಸ್ತೆ ಮೂಲಕ ತೆರಳುತ್ತಿದ್ದ ವ್ಯಕ್ತಿಯೊಬ್ಬರು, ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಸೀಗೇಹಡ್ಲು ನಿವಾಸಿಯಾಗಿ, ಸದ್ಯ ಅಜ್ಜಂಪುರದಲ್ಲಿ ವಾಸವಿದ್ದ ಮಂಜಾನಾಯ್ಕ (೪೧) ಮೃತಪಟ್ಟವರು. ಗುತ್ತಿಗೆಗೆ ಪಡೆದಿದ್ದ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದ ಮಂಜಾನಾಯ್ಕ ಒಂದು ವಾರದಿಂದ ಅಲ್ಲಿಯೇ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರ ನಸುಕಿನಲ್ಲಿ ಕುಟುಂಬದವರಿಗೆ ಕರೆ ಮಾಡಿದ ಅಪರಿಚಿತರು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದರು.
ಮೃತರ ಪುತ್ರ ಹಾಗೂ ಪತ್ನಿ ಬೀರೂರು ಬೈಪಾಸ್ ರಸ್ತೆಗೆ ತೆರಳಿ ಪರಿಶೀಲಿಸಿದಾಗ ಮಂಜಾನಾಯ್ಕ ರಸ್ತೆಯ ಬದಿ ಬಿದ್ದಿದ್ದು, ಎಡದ ಕೆನ್ನೆ ಮತ್ತು ಕಿವಿಯ ಬಳಿ ಪೆಟ್ಟು ಬಿದ್ದಿತ್ತು. ಅವರು ಚಾಲನೆ ಮಾಡುತ್ತಿದ್ದ ಬೈಕ್ ರಸ್ತೆ ಬದಿಯ ಚರಂಡಿಯಲ್ಲಿ ಬಿದ್ದಿತ್ತು. ಬೀರೂರು ಆಸ್ಪತ್ರೆಗೆ ಕರೆತಂದಾಗ ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಪುತ್ರ ರಾಹುಲ್ ನಾಯ್ಕ ನೀಡಿದ ದೂರಿನ ಅನ್ವಯ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು-ಬೈಕ್ ಡಿಕ್ಕಿಯಲ್ಲಿ ಸವಾರ ಸಾವು
ಕಡೂರು: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಬೀರೂರು ಪೊಲೀಸ್ ಠಾಣೆ ವ್ಯಾಪ್ತಿಯ ಜೋಡಿತಿಮ್ಮಾಪುರ ಗೇಟ್ ಬಳಿ ನಡೆದಿದೆ.
ಚಿಕ್ಕಮಗಳೂರು ನಗರದ ಪ್ರದೀಪ್ (೩೫) ಮೃತಪಟ್ಟವರು.
ಲಿಂಗದಹಳ್ಳಿ ಹೋಬಳಿಯ ಮಲ್ಲೇನಹಳ್ಳಿ ನಿವಾಸಿ ಚಂದ್ರಶೇಖರ್, ಬೀರೂರು-ಲಿಂಗದಹಳ್ಳಿ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಿದ್ದು, ಹುಣಸಘಟ್ಟ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಶಾಲೆಯ ಕೆಲಸ ಮುಗಿಸಿ ಕಾರಿನಲ್ಲಿ ತರೀಕೆರೆ ಕಡೆಯಿಂದ ಬೀರೂರು ಕಡೆಗೆ ಬರುತ್ತಿದ್ದ ವೇಳೆ, ಎದುರಿನಿಂದ ವೇಗವಾಗಿ ಬಂದ ಬೈಕ್ ಕಾರಿಗೆ ಡಿಕ್ಕಿಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಪಘಾತದ ಬಳಿಕ ಚಂದ್ರಶೇಖರ್ ಕಾರಿನಿಂದ ಇಳಿದು ನೋಡಿದಾಗ ಬೈಕ್ ಸವಾರನ ತಲೆ ಹಾಗೂ ಎಡಗಾಲಿಗೆ ಗಂಭೀರ ಗಾಯಗಳಾಗಿದ್ದವು. ಸ್ಥಳೀಯರ ಸಹಾಯದಿಂದ ಗಾಯಾಳುವನ್ನು ಅಂಬುಲೆನ್ಸ್ನಲ್ಲಿ ಬೀರೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಬಳಿಕ ಆಸ್ಪತ್ರೆಗೆ ತೆರಳಿದ ಚಂದ್ರಶೇಖರ್ಗೆ, ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಚಂದ್ರಶೇಖರ್ ನೀಡಿದ ದೂರಿನ ಮೇರೆಗೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Biker dies in vehicle collision
Leave a comment